ಶಕ್ತಿ ಯೋಜನೆ ಎಫೆಕ್ಟ್‌: ಬಸ್‌ನಲ್ಲಿ ವಿದ್ಯಾರ್ಥಿಗಳ ಡೇಂಜರ್ ಜರ್ನಿ..!

ಬಸ್ ಡೋರ್‌ನ ಹೊರಗಡೆ ಒಂದೇ ಕೈ ಹಿಡಿದು ಅಪಾಯದಲ್ಲೇ ವಿದ್ಯಾರ್ಥಿಗಳು ಪ್ರಯಾಣ ಮಾಡಿದ ಆಘಾತಕಾರಿ ಘಟನೆ ಯಾದಗಿರಿಯಲ್ಲಿ ಕಂಡುಬಂದಿದೆ.
 

First Published Jul 23, 2023, 1:33 PM IST | Last Updated Jul 23, 2023, 1:34 PM IST

ಯಾದಗಿರಿ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿದ ಹಿನ್ನೆಲೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಶಾಲಾ ಮಕ್ಕಳು ಬಸ್‌ ಡೋರ್‌ನ(Bus door) ಬಳಿ ನಿಂತು ಪ್ರಯಾಣ ಮಾಡಬೇಕಾಗಿದೆ. ಬಸ್‌ ಡೋರ್‌ನ ಹೊರಗಡೆ ಒಂದೇ ಕೈ ಹಿಡಿದು ಅಪಾಯದಲ್ಲಿ ವಿದ್ಯಾರ್ಥಿಗಳು ಪ್ರಯಾಣ ಮಾಡುವ ದೃಶ್ಯ ಯಾದಗಿರಿಯಲ್ಲಿ(Yadagiri) ಕಂಡುಬಂದಿದೆ. ಒಂದು ಸ್ವಲ್ಪ ಎಚ್ಚರ ತಪ್ಪಿದ್ರೂ, ಮಕ್ಕಳ ಜೀವಕ್ಕೆ ಇದು ಅಪಾಯ ತಂದೊಡ್ಡಲಿದೆ. ಯಾದಗಿರಿಯಿಂದ ರಾಯಚೂರಿಗೆ ಹೋಗ್ತಿದ್ದ ಬಸ್ನಲ್ಲಿ ಈ ದೃಶ್ಯ ಕಂಡುಬಂದಿದೆ. ಸಾರಿಗೆ ಬಸ್ ಪ್ರಯಾಣಿಕರಿಂದ ಫುಲ್ ರಶ್ ಆಗಿದ್ದು, ಇದರಿಂದಾಗಿ ವಿದ್ಯಾರ್ಥಿಗಳು(Students) ಶಾಲೆ ಬಿಟ್ಟ ಮೇಲೆ ಪ್ರಯಾಣಕ್ಕೆ ಸಿಕ್ಕಾಪಟ್ಟೆ ತೊಂದ್ರೆಯಾಗ್ತಿದೆ. ಇರೋ ಬಸ್ ಮಿಸ್ ಮಾಡಿಕೊಂಡ್ರೆ ಮತ್ತೆ ಬಸ್ ಸಿಗೋದಿಲ್ಲ ಅನ್ನೋ ಆತಂಕದಲ್ಲಿ ವಿದ್ಯಾರ್ಥಿಗಳು ರಶ್‌ನಲ್ಲೇ ಪ್ರಯಾಣ ಮಾಡುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  ಮಣಿಪುರ ಮಾತ್ರ ಅಲ್ಲ..ಪ.ಬಂಗಾಳದಲ್ಲೂ ಪೈಶಾಚಿಕ ದೌರ್ಜನ್ಯ: ದೀದಿ ನಾಡಲ್ಲಿ ಸಾಲು ಸಾಲು ಹಿಂಸಾಚಾರ!?