ಶಿವಣ್ಣನ 'ಘೋಸ್ಟ್'ಗೆ ಭಾರೀ ಡಿಮ್ಯಾಂಡ್: ಆಡಿಯೋ ರೈಟ್ಸ್ ಸೇಲ್ ಆಗಿದ್ದು ಎಷ್ಟು ಕೋಟಿಗೆ ಗೊತ್ತಾ?

ಸಂಕ್ರಾಂತಿ ಹಬ್ಬದಂದೇ ಶಿವಣ್ಣನ 'ಘೋಸ್ಟ್' ಸಿನಿಮಾದ ಆಡಿಯೋ ರೈಟ್ಸ್ ಭಾರೀ ಮೊತ್ತಕ್ಕೆ ಖರೀದಿ ಆಗಿದೆ.

Share this Video
  • FB
  • Linkdin
  • Whatsapp

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಸಿನಿಮಾದ ಮೇಲೆ ಇಡೀ ಸೌತ್ ಸಿನಿ ದುನಿಯಾ ಕಣ್ಣಿಟ್ಟಿದೆ. ಇದಕ್ಕೆ ಸಧ್ಯಕ್ಕೆ ಎರಡು ಕಾರಣ ಇವೆ. ಒಂದು ಸಿನಿಮಾದ ಟೈಟಲ್ ಪಾಸಿಟಿವ್ ವೈಬ್ ಕ್ರಿಯೆಟ್ ಮಾಡಿದೆ. ಮತ್ತೊಂದು ಗ್ಯಾಂಗ್ ಸ್ಟರ್ ಲುಕ್'ನಲ್ಲಿ ಶಿವರಾಜ್ ಕುಮಾರ್ ಕಾಣಿಸಿಕೊಂಡ ರೀತಿ. ಹೀಗಾಗಿ ಘೋಸ್ಟ್ ಶೂಟಿಂಗ್ ಹಂತದಲ್ಲೇ ತನ್ನ ಡಿಮ್ಯಾಂಡ್ ಹೆಚ್ಚಿಸಿಕೊಂಡಿದೆ. ಒಂದೇ ಒಂದು ಮೋಷನ್ ಪಿಕ್ಚರ್'ನಿಂದ ದಕ್ಷಿಣ ಭಾರತದಲ್ಲಿ ಟಾಕ್ ಆಗುತ್ತಿರೋ ಘೋಸ್ಟ್ ಸಿನಿಮಾ ಈಗ ಚಿತ್ರೀಕರಣದ ಸಮದಯದಲ್ಲೇ ಭಾರಿ ಬ್ಯುಸಿನೆಸ್ ಮಾಡಿದೆ. ಈ ಸಿನಿಮಾದ ಆಡಿಯೋ ಹಕ್ಕನ್ನು ಪ್ರತಿಷ್ಠಿತ ಆನಂದ್ ಆಡಿಯೋ ಕಂಪನಿ ಖರೀದಿಸಿದ್ದು, ಬರೋಬ್ಬರಿ 1.5 ಕೋಟಿ ಕೊಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video