ಅದ್ಭುತ ಕಾರ್ಯಕ್ರಮ, ದಿಗ್ಗಜರ ಸಮಾಗಮ... ಡಿವೈನ್ ಸ್ಟಾರ್‌ಗೆ ಸಿಕ್ಕಿತ್ತು ಮೈಜುಮ್ಮೆನ್ನಿಸುವ ದೈವೀ ಸ್ವಾಗತ !
ದಿಗ್ಗಜರ ಸಮಾಗಮದಲ್ಲಿ ಕಾಂತಾರ ಶಿವ ಬಿಚ್ಚಿಟ್ಟ ಸತ್ಯ.!
ಕಾಂತಾರ ಡೈಲಾಗ್ ಹೊಡೆದು ಥ್ರಿಲ್ ಕೊಟ್ಟ ರಿಷಬ್!
ಚಪ್ಪಲಿ ಬಿಚ್ಚಿ ವರಾಹ ರೂಪಂ ಹಾಡಿದ ಗಾಯಕ!
ತಮಿಳು ಚಿತ್ರರಂಗದ ಅತಿದೊಡ್ಡ ಪ್ರಶಸ್ತಿ ಕಾರ್ಯಕ್ರಮ ಇದಾಗಿತ್ತು. ಕಾಲಿವುಡ್, ಟಾಲಿವುಡ್ ಮಾಲಿವುಡ್ ಸ್ಯಾಂಡಲ್ವುಡ್ (Sandalwood) ಸೇರಿದಂತೆ ಸೌತ್ ನ ನಾಲ್ಕೂ ಭಾಷೆಯ ದಿಗ್ಗಜರ ಸಮಾಗಮ ಈ ಕಾರ್ಯಕ್ರಮದಲ್ಲಾಗಿತ್ತು. 10 ವರ್ಷಗಳ ಹಿಂದೆ ಕಿರಿಕ್ ಪಾರ್ಟಿಗೆ ರಕ್ಷಿತ್ ಶೆಟ್ಟಿ ಇದೇ ಕಾರ್ಯಕ್ರಮದಲ್ಲಿ ಅವಾರ್ಡ್ ಪಡೆದುಕೊಂಡಿದ್ದರು. ಆ ಸಿನಿಮಾ ನಿರ್ದೇಶಿಸಿದ್ದ ರಿಷಬ್ ಕೂಡ ರಕ್ಷಿತ್ ಜೊತೆಗಿದ್ದರು. ಇದೀಗ ರಿಷಬ್ಗೆ ಕಾಂತಾರ(Kantara) ಚಿತ್ರದ ಬಹುದೊಡ್ಡ ಯಶಸ್ಸಿನ ಹಿನ್ನೆಲೆಯಲ್ಲಿ ಅದ್ದೂರಿ ಸ್ವಾಗತ ಕೋರಿ ವೇದಿಕೆಗೆ ಕರೆತಂದರು. ಇನ್ನು ರಿಷಬ್ ಶೆಟ್ಟಿ(Rishab shetty) ಅಚ್ಚರಿಯ ವಿಚಾಋವೊಂದನ್ನು ಇಲ್ಲಿ ಬಿಚ್ಚಿಟ್ಟರು. ಕಾಂತಾರಕ್ಕೆ ಮೊದಲಬಾರಿಗೆ ಸಿಕ್ಕ ಅವಾರ್ಡ್ ಕೊಟ್ಟದ್ದೆ ತಲೈವರ್ ಎನ್ನುವ ವಿಚಾರವನ್ನು ಹೇಳಿದರು. ಆ ಗೋಲ್ಡ್ ಮೆಡಲ್ನಲ್ಲಿ ಬಾಬಾ ಚಿನ್ಹೆ ಇರುವುದನ್ನೂ ಹೇಳಿದ್ದರು. ಕಾಂತಾರ ಸೃಷ್ಟಿಸಿದ ಮ್ಯಾಜಿಕ್ ಗೆ ಎಲ್ಲರೂ ತಲೆಬಾಗಲೇ ಬೇಕು. ಈ ಸಿನಿಮಾದ ಜೀವಾಳವೇ ವರಾಹರೂಪಂ ಹಾಡು. ಈ ಹಾಡನ್ನುಹಾಡಿದ ಗಾಯಕ ವಿಗ್ನೇ ಶಿವನ್ ಮೂಲತಃ ತಮಿಳಿನವರು. ಇದೇ ಕಾರ್ಯಕ್ರಮದಲ್ಲಿ ವಿಗ್ನೇಶ್‌ಗೂ ಅವಾರ್ಡ್ ನೀಡಲಾಯಿತು.
ಇದನ್ನೂ ವೀಕ್ಷಿಸಿ: ನೆನಪಿದೆಯಾ 2019ರ ಆ ಸೋಲು..? : ಚಂದ್ರಯಾನಕ್ಕೆ ವಿಜ್ಞಾನದಲ್ಲಿ ಇರುವ ಸವಾಲುಗಳೇನು..?