ನೆನಪಿದೆಯಾ 2019ರ ಆ ಸೋಲು..? : ಚಂದ್ರಯಾನಕ್ಕೆ ವಿಜ್ಞಾನದಲ್ಲಿ ಇರುವ ಸವಾಲುಗಳೇನು..?

ಸದ್ಯ ಜಗತ್ತಿನ ಕಣ್ಣು ಭಾರತದ ಮೇಲೆ ನೆಟ್ಟಿದೆ..!
ಚಂದ್ರಯಾನ 3ಗೆ ನಡೆದಿದೆ ಎಲ್ಲ ರೀತಿಯ ಸಿದ್ಧತೆ
ನೆನಪಿದೆಯಾ 2019ರ ಚಂದ್ರಯಾನ2 ರ ಸೋಲು

First Published Jul 14, 2023, 1:20 PM IST | Last Updated Jul 14, 2023, 1:20 PM IST

ಇಂದು ಮಧ್ಯಾಹ್ನ 2:30ರ ಸಮಯಕ್ಕೆ ಇಡೀ ಜಗತ್ತಿನ ಕಣ್ಣು ಭಾರತರ ಮೇಲೆ ನೆಟ್ಟಿರುತ್ತೆ.  ಭಾರತ ಚಂದ್ರನ(Moon) ಭೇಟಿಗೆ ತೆರಳಲಿದೆ, ಅರ್ಥಾತ್ ಚಂದ್ರಯಾನ-3(Chandrayaan -3) ಉಡಾವಣೆಗೊಳ್ಳಲಿದೆ. 2019ರಲ್ಲಿ ಚಂದ್ರಯಾನ-2 ಫೇಲಾಗಿತ್ತು. ನಾಲ್ಕು ವರ್ಷಗಳ ನಂತರ ಇಸ್ರೋ ಮತ್ತೆ ಎದ್ದು ನಿಂತಿದೆ. ಸಾಮಾನ್ಯವಾಗಿ ಭಾರತೀಯರ್ಯಾರು ಸಹ ಈ ಸನ್ನಿವೇಶ ಮರೆಯಲು ಸಾಧ್ಯವಿಲ್ಲ ಬಿಡಿ. ಯಾಕೆಂದ್ರೆ, ಪ್ರಧಾನಿ ನರೇಂದ್ರ ಮೋದಿ(PM Modi) ಅಂದಿನ ಇಸ್ರೋ ಅಧ್ಯಕ್ಷರನ್ನು ತಬ್ಬಿಕೊಂಡು ಸಮಾಧಾನ ಮಾಡುವ ಸಂದರ್ಭದಲ್ಲಿ, ಖುದ್ದು ಭಾರತ ಮಾತೆ ಕೂಡ ಕಣ್ಣೀರು ಹಾಕಿದ್ದಳು. ಇಡೀ ಭಾರತ ಅಂದು ಭಾವುಕವಾಗಿತ್ತು. ಪ್ರತಿ ಭಾರತೀಯನ ಮನಸ್ಸು ಅತ್ಯಂತ ಭಾರವಾಗಿತ್ತು. ಇಡೀ ಭಾರತಕ್ಕೆ ಅಷ್ಟೊಂದು ನೋವು ಕೊಟ್ಟ ಸಂದರ್ಭ ಇದಾಗಿತ್ತು. ಚಂದ್ರಯಾನ2 ಫೇಲಾದ ನೋವಿನಲ್ಲಿದ್ದ ಇಸ್ರೋಗೆ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇಡೀ ದೇಶವೇ ಬೆಂಬಲಕ್ಕೆ ನಿಂತಿತ್ತು. ಇಡೀ ದೇಶ ಇಸ್ರೋ ಮೇಲೆ ಎಳ್ಳುಕಾಳಿನಷ್ಟು ನಂಬಿಕೆಯನ್ನು ಕಳೆದುಕೊಂಡಿರಲಿಲ್ಲ.

ಇದನ್ನೂ ವೀಕ್ಷಿಸಿ:  ತೋರಿಸಿದ್ದು ಪೆನ್ ಡ್ರೈವ್ ನೀಡಿದ್ದು ಎಕ್ಸೆಲ್ ಶೀಟ್: ಏನಿದು ಹಳೆ ದೋಸ್ತಿಗಳ ಹೊಸ ಕುಸ್ತಿ..?