
31 Days Movie: ಮತ್ತೊಂದು Su From So ಆಗಲಿದೆ ಎಂದು ಭವಿಷ್ಯ ನುಡಿದ ವೀಕ್ಷಕರು!
ನಿರಂಜನ್ ಶೆಟ್ಟಿ ನಟನೆಯ 31 ಡೇಸ್ ಸಿನಿಮಾ ರಿಲೀಸ್ ಆಗಿದೆ. ಈಗಾಗ್ಲೇ ಶಿವಮೊಗ್ಗದಲ್ಲಿ ನಡೆದ ಪ್ರೀಮೀಯರ್ ಶೋನಲ್ಲಿ ಸಿನಿಮಾಗೆ ಮಸ್ತ್ ರೆಸ್ಪಾನ್ಸ್ ಬಂದಿತ್ತು. ಈಗ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಆಗಿರೋ ಸಿನಿಮಾಗೆ ಜನ ಮೆಚ್ಚುಗೆ ಸಿಕ್ಕಿದೆ.
ಈ ಸಿನಿಮಾ ಕೂಡ ಸು ಫ್ರಂ ಸೋ ಚಿತ್ರದ ಹಾಗೆ ಹಿಟ್ ಆಗುತ್ತೆ ಅನ್ನೋ ರಿವ್ಯೂ ಬಂದಿದೆ. ನಿರಂಜನ್ ಶೆಟ್ಟಿ ನಟನೆಯ 31 ಡೇಸ್ ಸಿನಿಮಾ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಸಿನಿಮಾವನ್ನ ಎಂಜಾಯ್ ಮಾಡಿರೋ ಪ್ರೇಕ್ಷಕರು ಇದು ಮತ್ತೊಂದು ಸು ಫ್ರಂ ಸೋ ಆಗುತ್ತೆ ಅಂತ ಭವಿಷ್ಯ ನುಡಿದಿದ್ದಾರೆ. 31 ಡೇಸ್ ಸಿನಿಮಾದ ವಿಭಿನ್ನ ಪೋಸ್ಟರ್ಸ್, ವಿಶಿಷ್ಟ ಟೀಸರ್, ಸ್ಪೆಷಲ್ ಟ್ರೈಲರ್ ಗಮನ ಸೆಳೆದಿತ್ತು. "ಜಾಲಿಡೇಸ್" ಖ್ಯಾತಿಯ ನಿರಂಜನ್ ಶೆಟ್ಟಿ ಚಿತ್ರದ ನಾಯಕನಾದ್ರೆ ‘ಅವರಿಗೆ ನಾಯಕಿಯಾಗಿ ಪ್ರಜ್ವಲಿ ಸುವರ್ಣ ನಟಿಸಿದ್ದಾರೆ. Nstar ಬ್ಯಾನರ್ ನಲ್ಲಿ ನಾಗವೇಣಿ. N. ಶೆಟ್ಟಿ ಅವರು ನಿರ್ಮಿಸಿರುವ "31 DAYS" ಚಿತ್ರವನ್ನ ರಾಜ ರವಿಕುಮಾರ್ ನಿರ್ದೇಶನ ಮಾಡಿದ್ದಾರೆ. ವಿ.ಮನೋಹರ್ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದು, ಮನೋಹರ್ ಅವರ 150ನೇ ಸಿನಿಮಾ ಇದು. ಈಗ ರಾಜ್ಯಾದ್ಯಂತ ಸಿನಿಮಾ ರಿಲೀಸ್ ಸಿನಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ.