ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮಳೆ ಹುಡುಗ ಗಣಿ : ಹಿಂದೆಂದೂ ನೋಡಿರದ ಕಥೆಯಲ್ಲಿ ಕಮ್ ಬ್ಯಾಕ್..!

ಪ್ಯಾನ್ ಇಂಡಿಯಾ ಮೇಲೆ ಕಣ್ಣಿಟ್ಟ ಗೋಲ್ಡನ್ ಸ್ಟಾರ್ .!
ಹಿಂದೆಂದೂ ನೋಡಿರದ ಕಥೆಯಲ್ಲಿ ಗಣಿ ಕಮ್ ಬ್ಯಾಕ್!
ವಿಖ್ಯಾತ್ ಪ್ರೊಡಕ್ಷನ್ನಲ್ಲಿ ಗಣಿ ಪ್ಯಾನ್ ಇಂಡಿಯಾ ಚಿತ್ರ

First Published Jul 24, 2023, 10:44 AM IST | Last Updated Jul 24, 2023, 10:44 AM IST

ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh) ಬೆಳ್ಳಿತೆರೆ ಮೇಲೆ ತ್ರಿಬಲ್ ರೈಡಿಂಗ್ ಹೋದ ಮೇಲೆ ತಮ್ಮ ಸಿನಿಮಾ ಟ್ರ್ಯಾಕ್ ಅನ್ನ ಬದಲಿಸಿದ್ದಾರೆ. ಇನ್ಮೇಲೆ ಮಾಡಿದ್ರೆ ಎಲ್ಲರೂ ಮೆಚ್ಚುವಂತಹ ಸಿನಿಮಾಗಳನ್ನೇ ಮಾಡಕಬೇಕು ಅಂತ ನಿರ್ಧರಿಸಿದ್ದಾರೆ. ಹೀಗಾಗಿ ಗಣಿ ಈಗ ಪ್ಯಾನ್ ಇಂಡಿಯಾ(Pan India) ಕಾನ್ಸೆಪ್ಟ್ ಸಿನಿಮಾ ಕಥೆಗಳನ್ನ ಕೇಳುತ್ತಿದ್ದು, ಅದರ ಮೊದಲ ಭಾಗವಾಗಿ ಪ್ಯಾನ್ ಇಂಡಿಯಾ ಕಥೆಗೆ ಜೈ ಎಂದಿದ್ದಾರೆ ಗಣೇಶ್. ವಿಖ್ಯಾತ್ ಚಿತ್ರ ಪ್ರೊಡಕ್ಷನ್ (Vikyat Chitra Production) ನಿರ್ಮಾಣದಲ್ಲಿ ಮಳೆ ಹುಡುಗ ಗಣೇಶ್ ಹೊಸ ಪ್ಯಾನ್ ಇಂಡಿಯಾ ಹೆಜ್ಜೆ ಇಟ್ಟಿದ್ದಾರೆ. ಆ ಸಿನಿಮಾಗೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಆದ್ರೆ ಈ ಸಿನಿಮಾ ಗೋಲ್ಡನ್ ಸ್ಟಾರ್ ಗಣೇಶ್‌ರ ವೃತ್ತಿ ಬದುಕಿನಲ್ಲಿ ಮಹತ್ತರವಾಗಿ ಸಿನಿಮಾ ಆಗಿರಲಿದೆಯತೆ. ಬಿಗ್ ಬಜೆಟ್‌ನಲ್ಲಿ, ದೊಡ್ಡ ಕ್ಯಾನ್ವಾಸಿನಲ್ಲಿ ಸಿನಿಮಾ ಮೂಡಿ ಬರಲಿದ್ದು, ಈ ಸಿನಿಮಾದ ತಯಾರಿ ನಡೆಯುತ್ತಿದೆ. ಸಧ್ಯದ್ರಲ್ಲೇ ಗಣಿಯ ಹೊಸ ಪ್ಯಾನ್ ಇಂಡಿಯಾ ಕಲ್ಪನೆಯ ನಿರ್ದೇಶಕರು, ತಾರಾಗಣ, ತಾಂತ್ರಿಕ ವರ್ಗ, ನಾಯಕಿ ಯಾರು ಎಂಬ ವಿಚಾರಗಳು ತಿಳಿಸಲಿದ್ದಾರಂತೆ.

ಇದನ್ನೂ ವೀಕ್ಷಿಸಿ:  ರಿಷಬ್ ಬೇಡಿಕೆಗೆ ಜೈ ಎಂದ ಕಲಬುರಗಿ ವಿದ್ಯುತ್ ಪ್ರಸರಣ ನಿಗಮ: ಕಾಡಂಚಿನ ಗ್ರಾಮಗಳಿಗೆ ಬೆಳಕು