Asianet Suvarna News Asianet Suvarna News

'ಟಗರು ಪಲ್ಯ'ದಲ್ಲಿ ಸಿಕ್ಕಾಪಟ್ಟೆ ಮನರಂಜನೆ: ಭರ್ಜರಿ ಬಾಡೂಟಕ್ಕೆ ರೆಡಿ ಕನ್ನಡ ಸಿನಿ ಪ್ರೇಕ್ಷಕರು..!

ಕನ್ನಡ ಚಿತ್ರರಂಗದಲ್ಲಿ ಬಡವರು ಬೆಳಿಯೋಕೆ ಬುಡಿ ಅನ್ನುತ್ತಲೇ ನಟನೆಯಿಂದ ನಿರ್ಮಾಪಕರೂ ಆದ ಡಾಲಿ ಧನಂಜರ್ ಡಾಲಿ ಪಿಕ್ಚರ್ಸ್ ಬ್ಯಾನರ್‌ ಮೂಲಕ ಇಲ್ಲಿವರೆಗೆ ಮೂರು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಒಂದೊಂದು ಸಿನಿಮಾನೂ ವಿಭಿನ್ನವೇ. ಬಡವ ರಾಸ್ಕಲ್, ಹೆಡ್‌ಬುಷ್‌  ನಂತರ ಇದೀಗ ಪ್ರೇಕ್ಷಕನಿಗೆ ಟಗರು ಪಲ್ಯದ ರುಚಿ ತೋರಿಸೋಕೆ ಬರ್ತಿದ್ದಾರೆ. 

ಡಾಲಿ ತಾನು ಬೆಳಿಯೋದಲ್ಲದೆ. ಗೆಳೆಯರನ್ನೂ ಬೆಳೆಸುತ್ತಾ ಈ ಸಿನಿಮಾದಿಂದ ನಟ ನಾಗಭೂಷಣ್‌ರನ್ನು(Nagabhushan) ಹೀರೋ ಮಾಡಿದ್ದಾರೆ. ನಾಗಭೂಷಣ್ ಸಹಜ ನಟ ಅಂತಲೆ ಜನಪ್ರಿಯತೆ ಗಳಿಸಿದವರು. ಇನ್ನು ನೆನಪಿರಲಿ ಪ್ರೇಮ್ ಮಗಳು(Amrutha Prem) ಇದೇ ಮೊದಲ ಬಾರಿಗೆ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಈ ಸಿನಿಮಾ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ. ಒಂದು ಸಿನಿಮಾಗೆ ನಾಯಕ ನಾಯಕಿ ಎಷ್ಟು ಮುಖ್ಯವೋ ಅವರ ಸುತ್ತ ಹಾಸುಹೊಕ್ಕಾಗಿ ಬೆರೆತು ಹೋಗುವ ಪೋಷಕ ಪಾತ್ರಗಳು ಅಷ್ಟೇ ಮುಖ್ಯ. ಅದರಲ್ಲೂ ರಂಗಾಯಣ ರಘು, ತಾರಾ ಅವ್ರಂಥ ಅಧ್ಬುತ ನಟ ನಟಿ ಬಗ್ಗೆ  ಹೇಳೋದೆ ಬೇಕಿಲ್ಲ. ಈ ಬಾರಿ ಟಗರು ಪಲ್ಯ ಸಿನಿಮಾದಲ್ಲಿ ಇವರ ಜುಗಲ್‌ಬಂಧಿ  ಇನ್ನೂ ಮಜವಾಗಿದೆಯಂತೆ. ಇವರ ಜೊತೆಗೆ ಶರತ್ ಲೋಹಿತಾಶ್ವ, ಬಿರಾದಾರ್ ಹಾಗೂ ಇನ್ನಿತರೆ ಪಾತ್ರಗಳೂ ನಿಮ್ಮನ್ನು ಇಡೀ ಸಿನಿಮಾ ಎಲ್ಲೂ ಬೋರ್ ಹೊಡೆಸದಂತೆ ಕತೆಯನ್ನು  ಲೀಲಾಜಾಲವಾಗಿ ಮುಂದುವರೆಸಿಕೊಂಡು ಹೋಗುತ್ತೆ. ರಾಮಾ ರಾಮಾ ರೇ ಸರ್ಕಾರಿ ಹಿ.ಪ್ರಾ.ಶಾಲೆ, ಬಡವ ರಾಸ್ಕಲ್ ಮೊದಲಾದ ಸಿನಿಮಾಗಳಿಗೆ ಸಂಗೀತ ನೀಡಿದ್ದ ವಾಸುಕಿ ವೈಭವ್ ಟಗರು ಪಲ್ಯಕ್ಕೆ ಸಖತ್ ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಈಗಾಗಲೇ  ಟಗರು ಪಲ್ಯ ಟೈಟಲ್ ಟ್ರ್ಯಾಕ್, ಸೂರ್ಯ ಕಾಂತಿ ಮತ್ತು ಇತ್ತೀಚೆಗಷ್ಟೆ ರಿಲೀಸ್ ಆದ ಜೋಗಿ ಪ್ರೇಮ್ ಹಾಡಿರೋ ಸಂಬಂಧ ಅನ್ನೋ ಹಾಡು . ಪ್ರತಿ ಹಾಡಿನಲ್ಲೂ ಅದ್ಭುತ ಸಾಹಿತ್ಯ ಬರಿದಿದ್ದಾರೆ  ಡಾಲಿ ಧನಂಜಯ್(Dhananjay).

ಇದನ್ನೂ ವೀಕ್ಷಿಸಿ:  Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ ? ಇಂದು ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ