Asianet Suvarna News Asianet Suvarna News

'OG' ಎಂಟ್ರಿಗೆ ಕೌಂಟ್‌ಡೌನ್‌: ಮಧ್ಯ ರಾತ್ರಿಯೇ ಕಾಡುತ್ತಾ 'GHOST'..?

ಒಂದ್ ಕಡೆ ಜೋರು ನಾಡ ಹಬ್ಬ ದರಸಾ. ಅದೇ ಟೈಂನಲ್ಲಿ ಮತ್ತೊಂದ್ ಕಡೆ ಬೆಳ್ಳಿತೆರೆಯಲ್ಲಿ ಸ್ಯಾಂಡಲ್‌ವುಡ್‌ ದೊರೆ ಸಿನಿಮಾ ಹಬ್ಬ. ಈ ಹಬ್ಬ ಶುರುವಾಗೋದು ಅಕ್ಟೋಬರ್ 19ರಿಂದ. ಅದುವೇ ಘೋಸ್ಟ್ ಹಬ್ಬ.

ಘೋಸ್ಟ್.. ಸೌತ್ ನಾರ್ತ್ ತುಂಬಾ ಈ ಸಿನಿಮಾದ್ದೇ ಸೌಂಡು ಬ್ಯಾಂಡು. ಘೋಸ್ಟ್ ಪ್ಯಾನ್ ಇಂಡಿಯಾದಲ್ಲಿ ಏಕಕಾಲಕ್ಕೆ ಗ್ರ್ಯಾಂಡ್ ರಿಲೀಸ್ ಆಗ್ತಿದೆ. ಈಗಾಗಲೇ ಟೀಸರ್, ಟ್ರೈಲರ್, ಓಜಿಎಂ ಬ್ಯಾಂಡ್ ಭರ್ಜರಿ ಸೌಂಡ್ ಮಾಡಿವೆ. ದಸರಾ ಸಂಭ್ರಮಕ್ಕೆ ಕನ್ನಡಿಗರಿಗೆ ಗಿಫ್ಟ್ ಆಗಿರೋ ಘೋಸ್ಟ್ (Ghost) ಆರ್ಭಟ ಶುರುವಾಗೋದು ಮಧ್ಯರಾತ್ರಿಯಿಂದಲೇ. ಸ್ಯಾಂಡಲ್‌ವುಡ್‌ನಲ್ಲೀಗ(Sandalwood) ಪೇಯ್ಡ್ ಪ್ರೀಮಿಯರ್ ಶೋಗಳ ಟ್ರೆಂಡ್ ನಡೀತಿದೆ. ಪೇಯ್ಡ್ ಪ್ರೀಮಿಯರ್ ಶೋಗಳ ರೆಸ್ಪಾನ್ಸ್ ಶುಕ್ರವಾರದ ಓಪನಿಂಗ್‌ಗೆ ಪ್ಲಸ್ ಆಗುತ್ತಿದೆ. ಆದ್ರೆ ಇತ್ತೀಚೆಗೆ ಮಿಡ್‌ ನೈಟ್ ಶೋಗಳು ಕೊಂಚ ಕಮ್ಮಿ ಆಗಿತ್ತು. ಭಟ್ ಶಿವಣ್ಣನ 'ಘೋಸ್ಟ್' ಸಿನಿಮಾ ಮಿಡ್‌ನೈಟ್ ಶೋ ಸಂಪ್ರದಾಯವನ್ನ ಮತ್ತೆ ಟ್ರ್ಯಾಕ್‌ಗೆ ತಂದಿದೆ. ಯಾಕಂದ್ರೆ ಘೋಸ್ಟ್ ಸಿನಿಮಾ ಪ್ರದರ್ಶನ ಮಧ್ಯ ರಾತ್ರಿ 12 ಗಂಟೆಯಿಂದಲೇ ಆರಂಭ ಆಗುತ್ತಿದೆ. ದಸರಾ(Dasara) ಸಂಭ್ರಮದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಆರ್ಭಟ ಜೋರಾಗಿದೆ. ತಮಿಳಿನಲ್ಲಿ 'ಲಿಯೋ' ಹಾಗೂ 'ತೆಲುಗಿನಲ್ಲಿ ಟೈಗರ್ ನಾಗೇಶ್ವರರಾವ್' ಸಿನಿಮಾ 5 ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಇನ್ನು ಬಾಲಕೃಷ್ಣ ನಟನೆಯ 'ಭಗವಂತ್ ಕೇಸರಿ' ಸಿನಿಮಾ ಕೂಡ ದಸರಾದಲ್ಲೇ ತೆರೆ ಕಾಣುತ್ತಿದೆ. ಅದೇ ದಿನ ಘೋಸ್ಟ್ ಕೂಡ ಐದು ಭಾಷೆಯಲ್ಲಿ ಬಿಡುಗಡೆ ಆಗುತ್ತಿದ್ದು, ಬಾಕ್ಸಾಫೀಸ್‌ನಲ್ಲಿ ಭಾರೀ ಪೈಪೋಟಿ ಏರ್ಪಡಲಿದೆ. ಕೇವಲ 48 ಘಂಟೆಗಳಲ್ಲಿ ನಡೆಯೋ ಸ್ಟೋರಿ ಘೋಸ್ಟ್. ಶ್ರೀನಿ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್‌ 'ಘೋಸ್ಟ್'ಗೆ ಸಂದೇಶ್ ಕಂಬೈನ್ಸ್ ಬ್ಯಾನರ್‌ನಲ್ಲಿ ನಿರ್ಮಾಣ ಆಗಿದೆ. ಮಲಯಾಳಂ ನಟ ಜಯರಾಂ, ಬಾಲಿವುಡ ಸ್ಟಾರ್ ಅನುಪಮ್ ಖೇರ್ ಘೋಸ್ಟ್ನ ಖದರ್ ಹೆಚ್ಚಿಸಿದ್ದಾರೆ. ಒಟ್ಟಿನಲ್ಲಿ ಅಕ್ಟೊಬರ್18ನೇ ತಾರೀಖು ಮಧ್ಯರಾತ್ರಿ 12 ಗಂಟೆಯಿಂದಲೇ ಘೋಸ್ಟ್ ನಿಮ್ಮನ್ನ ಬೆಚ್ಚಿಬೀಳಿಸಲು ಸಜ್ಜಾಗಿದೆ. 

ಇದನ್ನೂ ವೀಕ್ಷಿಸಿ:  2024ರಲ್ಲಿ ದೇಶದ ಗದ್ದುಗೆ ಏರೋದು ಯಾರು? ಲೋಕಸಭೆಯ ಭವಿಷ್ಯ ಬಿಚ್ಚಿಟ್ಟ 2 ಮಹಾ ಸಮೀಕ್ಷೆ!

Video Top Stories