2024ರಲ್ಲಿ ದೇಶದ ಗದ್ದುಗೆ ಏರೋದು ಯಾರು? ಲೋಕಸಭೆಯ ಭವಿಷ್ಯ ಬಿಚ್ಚಿಟ್ಟ 2 ಮಹಾ ಸಮೀಕ್ಷೆ!
2024ರ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆದ್ದು ಮತ್ತೆ ಪ್ರಧಾನಿಯಾಗ್ತಾರಾ..? ನೆಹರು ನಂತರ ಈವರೆಗೆ ಯಾವ ಪ್ರಧಾನಿಯೂ 3ನೇ ಬಾರಿಗೆ ಆಯ್ಕೆಯಾದ ಉದಾಹರಣೆಯಿಲ್ಲ. 3 ಬಾರಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಗೆದ್ದಿದ್ದು ಸತತ 2 ಚುನಾವಣೆಗಳನ್ನಷ್ಟೇ. ಮೂರನೇ ಚುನಾವಣೆಯನ್ನ ಸೋತಿದ್ದರು ಇಂದಿರಾ. ಈಗ ಮೋದಿ ಮತ್ತೆ ನಾನೇ ಪ್ರಧಾನಿ ಅಂತಿದ್ದಾರೆ.. ಇತ್ತೀಚೆಗೆ 2 ಸಂಸ್ಥೆಗಳು ಲೋಕಸಭಾ ಚುನಾವಣೆಯ ಸಮೀಕ್ಷೆಗಳನ್ನ ಮಾಡಿವೆ.
2024ರ ಲೋಕಸಭಾ ಚುನಾವಣೆಗೆ ಉಳಿದಿರೋದು ಕೇವಲ 5 ತಿಂಗಳಷ್ಟೇ ಈಗಾಗಲೇ ರಾಜಕೀಯ ಪಕ್ಷಗಳು ಅಧಿಕಾರದ ಗದ್ದುಗೆ ಹಿಡಿಯೋಕೆ ತಮ್ಮದೇ ಆದ ರಣತಂತ್ರ ಹೆಣೆಯುತ್ತಿವೆ. ಈ ಮಧ್ಯೆ ಲೋಕಸಭೆ ಚುನಾವಣೆ(Loksabha) ಬಗ್ಗೆ 2 ಸಮೀಕ್ಷೆಗಳು ಹೊರಬಿದ್ದಿದ್ದು. ಇವರೇ ಮುಂದೆ ಅಧಿಕಾರ ಹಿಡಿಯೋದು ಎಂದು ಹೇಳ್ತಿವೆ. ಇಂಡಿಯಾ ಟಿವಿ ಹಾಗೂ ಟೈಮ್ಸ್ ನೌ ಸಮೀಕ್ಷೆಗಳ(Survey) ಪ್ರಕಾರ ಆಡಳಿತರೂಢ ಎನ್ಡಿಎ ಮತ್ತೆ ಅಧಿಕಾರ ಹಿಡಿಯೋದು ಫಿಕ್ಸ್ ಎಂದು ಭವಿಷ್ಯ ನುಡಿದಿವೆ. ಇಂಡಿಯಾ ಮೈತ್ರಿಕೂಟ ಸ್ವಲ್ಪ ಉತ್ತಮ ಸಾಧನೆ ಮಾಡಿದ್ರೂ ಅಧಿಕಾರ ಹಿಡಿಯೋದು ಕನಸಾಗಿಯೇ ಉಳಿಯಲಿದೆ ಎಂದಿದೆ ಸಮೀಕ್ಷೆ. ಇಂಡಿಯಾ ಟಿವಿ ಸಮೀಕ್ಷೆ ಪ್ರಕಾರ 2024ರ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ(NDA) 543 ಸ್ಥಾನಗಳ ಪೈಕಿ 318 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. ಇನ್ನೂ ಇಂಡಿಯಾ ಮೈತ್ರಿಕೂಟ 175 ಸ್ಥಾನ ಗೆಲ್ಲಬಹುದು ಎನ್ನಲಾಗಿದೆ. ಟೈಮ್ಸ್ ನೌ ಸಮೀಕ್ಷೆ(Times Now survey) ಪ್ರಕಾರ ಎನ್ಡಿಎ ಮೈತ್ರಿಕೂಟ 2024ರ ಚುನಾವಣೆಯಲ್ಲಿ ಶೇಕಡ 42.6ರಷ್ಟು ಮತಗಳೊಂದಿಗೆ 297 ರಿಂದ 317 ಸ್ಥಾನ, ಇಂಡಿಯಾ ಮೈತ್ರಿಕೂಟ ಶೇಕಡ 40.2ರಷ್ಟು ಮತಗಳೊಂದಿಗೆ 165 ರಿಂದ 185 ರ ಸ್ಥಾನ, ಯಾವುದೇ ಬಣ ಸೇರದೇ ತಟಸ್ಥವಾಗಿರೋ ವೈಎಸ್ಆರ್ಸಿಪಿ 24 ರಿಂದ 25 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಇನ್ನೂ ಬಿಜೆಡಿ 13 ರಿಂದ 15 ಸ್ಥಾನ ಗೆಲ್ಲಬಹುದು, ಬಿಆರ್ಎಸ್ 9 ರಿಂದ 11 ಸ್ಥಾನ ಗೆಲ್ಲುವ ಸಾಧ್ಯತೆ ಇದೆ.. ಪಕ್ಷೇತರರು 11 ರಿಂದ 14 ಸ್ಥಾನಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ. ಇಂಡಿಯಾ ಟಿವಿ, ಟೈಮ್ಸ್ ನೌ ಸಮೀಕ್ಷೆಗಳು ಪಕ್ಷಗಳ ಸ್ಥಾನಗಳ ಬಗ್ಗೆಯೂ ಭವಿಷ್ಯ ನುಡಿದಿದ್ದು, ಮತ್ತೆ ಆಡಳಿತರೂಢ ಬಿಜೆಪಿ ಪಕ್ಷ ಸ್ವಂತ ಬಲದ ಮೇಲೆಯೇ ಅಧಿಕಾರದ ಗದ್ದುಗೆ ಏರಲಿದೆ ಎಂದು ಹೇಳಿದೆ.
ಇದನ್ನೂ ವೀಕ್ಷಿಸಿ: Today Horoscope: ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ? ವೃಶ್ಚಿಕ ರಾಶಿಯವರಿಗೆ ವೃತ್ತಿಯಲ್ಲಿ ಇಂದು ಅನುಕೂಲ