ಸ್ಯಾಂಡಲ್‌ವುಡ್‌ನಲ್ಲಿ ಜೋರಾಗಿದೆ ಕ್ರಿಕೆಟ್ ಹಬ್ಬ..! KCC ಸೀಸನ್ 4 ರ ತಯಾರಿಯಲ್ಲಿ ಕನ್ನಡ ಸ್ಟಾರ್ಸ್..!

ಸ್ಯಾಂಡಲ್‌ವುಡ್‌ ಕ್ರಿಕೆಟ್ ಹಬ್ಬ ಕೆಸಿಸಿಗೆ ಕೌಂಟ್ ಡೌನ್ ಶುರುವಾಗಿದೆ. ಡಿ.23ರಿಂದ 25ರ ವರೆಗೆ ನಡೆಯೋ ಕ್ರಿಕೆಟ್ ಕಾಳಗಕ್ಕೆ ಚಂದನವನದ ತಾರೆಯರು ಭರ್ಜರಿಯಾಗಿ ತಾಲೀಮು ಮಾಡ್ತಿದ್ದಾರೆ. ನಟ ಶಿವರಾಜ್ ಕುಮಾರ್ ಕಿಚ್ಚ ಸುದೀಪ್, ಗಣೇಶ್, ಡಾಲಿ ಡಾಲಿ ಧನಂಜಯ್ ಸೇರಿದಂತೆ ಸ್ಟಾರ್ ಪ್ಲೆಯರ್ ಗಳು ತಂಡದ ಜೊತೆ ಅಖಾಡಕ್ಕೆ ಇಳಿದು ಪ್ರಾಕ್ಟೀಸ್ ಮಾಡ್ತಿದ್ದಾರೆ.

Share this Video
  • FB
  • Linkdin
  • Whatsapp

ಈ ಭಾರಿಯ ಕೆ.ಸಿ ಸಿಯಲ್ಲಿ ಒಟ್ಟು 6 ತಂಡಗಳು ಭಾಗವಹಿಸುತ್ತಿವೆ. ಪ್ರತಿ ತಂಡದಲ್ಲೂ ಒಬ್ಬೊಬ್ಬ ಸ್ಟಾರ್ ಪ್ಲೇಯರ್ ಇರ್ತಾರೆ. ನಟ ಶಿವರಾಜ್ ಕುಮಾರ್(Shivaraj kumar) ರಾಷ್ಟ್ರಕೂಟ ಪ್ಯಾಂಥರ್ಸ್(RASHTRAKUTA PANTHERS) ತಂಡದ ಫೆಸ್ ಆಫ್ ದಿ ಟೀಂ ಆಗಿದ್ದು, ಈ ತಂಡಕ್ಕೆ ಗೀತಾ ಶಿವರಾಜ್ ಕುಮಾರ್ ಮಾಲೀಕರಾಗಿದ್ದಾರೆ. ಹೀಗಾಗಿ ಗೀತಾ ಶಿವರಾಜ್ ಕುಮಾರ್ ತನ್ನ ಇಡೀ ತಂಡಕ್ಕೆ ಜರ್ಸಿ ಕಿಟ್(Jersey Kit) ವಿತರಣೆ ಮಾಡಿದ್ರು. ಸಚಿವ ಮಧು ಬಂಗಾರಪ್ಪ ಕೂಡ ಈ ಸಮಯದಲ್ಲಿ ಜೊತೆಯಾದ್ರು. ಇನ್ನು ಈ ಭಾರಿಯ ಕೆಸಿಸಿಗಾಗಿ(KCC) ಆರು ತಂಡಗಳ ಜರ್ಸಿ ಲಾಂಚ್ ಮಾಡಲಾಯ್ತು. ಈ ಕಾರ್ಯಕ್ರಮದಲ್ಲಿ ನಟ ಸುದೀಪ್, ಗಣೇಶ್, ಶಿವಣ್ಣ, ಉಪೇಂದ್ರ, ಡಾಲಿ ಧನಂಜಯ್, ಭಾಗಿಯಾಗಿದ್ರು. ಮೂರು ದಿನಗಳ ಕಾಲ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆಯೋ ಈ ಪಂದ್ಯಕ್ಕೆ ಸಿಎಂ ಸಿದ್ಧರಾಮಯ್ಯಗೆ ಶಿವಣ್ಣ ಹಾಗು ಕೆಸಿಸಿ ಕಮೀಟಿ ಆಹ್ವಾನ ಕೊಟ್ಟಿದ್ದೆ. ಮತ್ತೊಂದು ಕಡೆ ಸಚಿವ ಜಿ ಪರಮೇಶ್ವರ್ ಹಾಗು ಡಿಕೆ ಶಿವಕುಮಾರ್ ಗೆ ಕಿಚ್ಚ ಆಮಂತ್ರಣ ನೀಡಿದ್ದಾರೆ.

ಇದನ್ನೂ ವೀಕ್ಷಿಸಿ:  ಫಸ್ಟ್ ಡೇ ಹ್ಯಾಟ್ರಿಕ್ ಬಾರಿಸಿದ ಡಂಕಿ..! ಶಾರುಖ್ ಖಾನ್‌ ನೋಡಿ ಫಿದಾ ಆದ ಪ್ರೇಕ್ಷಕ..!

Related Video