KGF Chapter 2: ಯಶ್ ಸಿನಿಮಾದ 'ಗಗನ ನೀ..' ಸಾಂಗ್ ರಿಲೀಸ್!

‘ಕೆಜಿಎಫ್‌ 2’ ಚಿತ್ರದ ‘ಗಗನ ನೀ’ ಎಂಬ ಲಿರಿಕಲ್‌ ಆಡಿಯೋ ಬಿಡುಗಡೆಗೊಂಡಿದೆ. ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಕನ್ನಡ ಒಂದರಲ್ಲೇ 1.4 ಮಿಲಿಯನ್‌ಗೂ ಅಧಿಕ ವೀಕ್ಷಣೆ ದಾಖಲಿಸಿದೆ. 

Share this Video
  • FB
  • Linkdin
  • Whatsapp

‘ಕೆಜಿಎಫ್‌ 2’ (KGF Chapter 2) ಚಿತ್ರದ ‘ಗಗನ ನೀ’ (Gagana Nee) ಎಂಬ ಲಿರಿಕಲ್‌ ಆಡಿಯೋ ಬಿಡುಗಡೆಗೊಂಡಿದೆ. ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಕನ್ನಡ ಒಂದರಲ್ಲೇ 1.4 ಮಿಲಿಯನ್‌ಗೂ ಅಧಿಕ ವೀಕ್ಷಣೆ ದಾಖಲಿಸಿದೆ. ಮಾತೃಪ್ರೇಮವನ್ನು ಸಾರುವ ಹಾಡು ಇದಾಗಿದ್ದು, ಅರ್ಚನಾ ಜೋಯಿಸ್‌ ನಿರ್ವಹಿಸಿರುವ ಯಶ್‌ (Yash) ತಾಯಿಯ ಪಾತ್ರ ಹೈಲೈಟ್‌ ಆಗಿದೆ. ರವಿ ಬಸ್ರೂರು ಅವರ ಸಂಗೀತವಿರುವ ಈ ಹಾಡಿಗೆ ಕಿನ್ನಲ್‌ ರಾಜ್‌ ಅವರ ಸಾಹಿತ್ಯವಿದೆ. ಸುಚೇತಾ ಬಸ್ರೂರು ಹಾಡಿಗೆ ದನಿಯಾಗಿದ್ದಾರೆ. 

KGF 2 Trailer ಈವೆಂಟ್‌ನಲ್ಲಿ ರಾಕಿಭಾಯ್ ಧರಿಸಿದ್ದ ವಾಚ್ ಬೆಲೆ ಕೇಳಿದರೆ ಶಾಕ್ ಆಗ್ತೀರಾ...!

ಈ ಹಾಡಿನ ಹಿಂದಿ ವರ್ಶನ್‌ ‘ಫಲಕ್‌ ತು’ ಹಾಡನ್ನೂ ಸುಚೇತಾ ಅವರೇ ಹಾಡಿದ್ದು, 1.9 ಮಿಲಿಯನ್‌ಗೂ ಅಧಿಕ ವೀಕ್ಷಣೆ ದಾಖಲಿಸಿದೆ. ತಮಿಳು ಹಾಡನ್ನು ಕನ್ನಡ ಗಾಯಕಿ ಅನನ್ಯಾ ಭಟ್‌ ಹಾಡಿದ್ದಾರೆ. ತೆಲುಗು, ಮಲಯಾಳಂ ವರ್ಶನ್‌ ಹಾಡಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿಂದಿನ ‘ಕೆಜಿಎಫ್‌ ಚಾಪ್ಟರ್‌ 1’ರಲ್ಲೂ ತಾಯಿ ಸೆಂಟಿಮೆಂಟಿನ ಹಾಡಿತ್ತು. ‘ಗರ್ಭದಿ ನನ್ನಿರಿಸಿ’ ಎಂಬ ಸಾಲುಗಳ ಈ ಹಾಡು ಗಮನಸೆಳೆದಿತ್ತು. ಯಶ್‌ ನಟನೆ, ಪ್ರಶಾಂತ್‌ ನೀಲ್‌ ನಿರ್ದೇಶನ, ವಿಜಯ್‌ ಕಿರಗಂದೂರು ನಿರ್ಮಾಣದ ‘ಕೆಜಿಎಫ್‌ 2’ ಚಿತ್ರ ಏಪ್ರಿಲ್‌ 14ರಂದು ಥಿಯೇಟರ್‌ಗಳಿಗೆ ಲಗ್ಗೆ ಇಡಲಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video