Asianet Suvarna News Asianet Suvarna News

ಯುಐ ಟೀಸರ್ ನೋಡಿ ವಿದೇಶಿಗರು ಫಿದಾ ! ಬಾಪ್ ರೇ ಬಾಪ್ ಎಂದ ಪಾಕಿಸ್ತಾನಿ ಯೂಟುಬರ್‌..!

ಯೂಟ್ಯೂಬ್‌ನಲ್ಲಿ ಯುಐ ಸಿನಿಮಾದ (UI Movie) ಟ್ರೇಲರ್‌ ರಿಲೀಸ್‌ ಆಗುತ್ತಿದ್ದಂತೆ, ಸಾಕಷ್ಟು ಮಂದಿ Teaser ಗೆ ಮೆಚ್ಚುಗೆ ಸೂಚಿಸಿದ್ದಾರೆ.
 

First Published Sep 23, 2023, 9:37 AM IST | Last Updated Sep 23, 2023, 9:39 AM IST

ರಿಯಲ್ ಸ್ಟಾರ್ ಉಪೇಂದ್ರ(Real Star Upendra) ಅವರ ಬಹುನಿರೀಕ್ಷಿತ ಸಿನಿಮಾ ಯುಐ, ಈ ಸಿನಿಮಾದ ಫಸ್ಟ್ ಟೀಸರ್‌ನನ್ನ(Teaser) ರಿಲೀಸ್ ಮಾಡಿತ್ತು ಚಿತ್ರತಂಡ. ಆದ್ರೆ ಟೀಸರಲ್ಲೇ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಟೀಸರ್ ತುಂಬಾ ಕತ್ತಲೆ ಇದೆ. ಬರಿ ವಾಯ್ಸ್ ನಿಂದಲೇ ಯುಐ ಸಿನಿಮಾ(UI Movie) ಕೌತುಕ, ಕುತೂಹಲ ಸೃಷ್ಟಿಸಿದೆ. ಉಪ್ಪಿ ಅವರ ಯುಐ ಸಿನಿಮಾ ಟೀಸರ್ ಈಗ ಕರ್ನಾಟಕ ಅಷ್ಟೆ ಅಲ್ಲಾ. ಭಾರತ ಅಷ್ಟೆ ಅಲ್ಲ, ವರ್ಲ್ಡ್ ವೈಡ್ ಸ್ಪೆಷಲ್ ಸೆನ್ಸೆಷನ್ ಸೃಷ್ಟಿಸಿದೆ. ಯುಐ ಟೀಸರ್ ರಿಲೀಸ್ ಮಾಡಿದ ಉಪೇಂದ್ರ ಅವರು ಎಲ್ಲರ ತಲೆಗೆ ಹುಳ ಬಿಟ್ಟಿದ್ದಾರೆ. ಇನ್ನು ವಿದೇಶಿ ಮಹಿಳೆಯೊಬ್ಬಳು ಯುಐ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಟ್ರೇಲರ್‌ ರಿಲೀಸ್‌ ಆಗುತ್ತಿದ್ದಂತೆ, ಸಾಕಷ್ಟು ಮಂದಿ ಟ್ರೇಲರ್‌ಗೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಕೆಲವರು ಟ್ರೇಲರ್‌ ಅನ್ನು ವಿಮರ್ಶೆ ಮಾಡಿದ್ದಾರೆ. ಆ ಪೈಕಿ ಪಾಕಿಸ್ತಾನಿಯರೂ UI ಸಿನಿಮಾದ ಟೀಸರ್‌ ಕಂಡು ಆಶ್ಚರ್ಯ ಹೊರಹಾಕಿದ್ದಾರೆ. ಇನ್ನು ಮತ್ತೊಂದು ಸಿನಿಮಾ ಪ್ಯಾನ್ ಇಂಡಿಯಾ ಆಗೋ ಸೂಚನೆಯನ್ನ ಕೊಡ್ತಿದೆ. ಟೀಸರ್‌ನಿಂದಲೇ ಪ್ರೇಕ್ಷಕರನ್ನ ಸೆಳೆಯುತ್ತಿರುವ ಯುಐ ಸಿನಿಮಾ, ಟೀಸರ್ ನೋಡಿ ಉತ್ತರ ಭಾರತದ ಜನ ಕಳೆದೋಗಿದ್ದಾರೆ. ಯೂಟುಬ್ನಲ್ಲಿ(Youtube) ಯುಐ ಟೀಸರ್ ದೊಡ್ಡ ಸದ್ದು ಮಾಡ್ತಿದೆ. ಅದ್ರಲ್ಲೂ ಊರ್ವಶಿ ಥಿಯೇಟರ್ನಲ್ಲಿ ಯುವಿ ಸಿನಿಮಾ ಟೀಸರ್ಅನ್ನ ಉಪೇಂದ್ರ ಅವರು ರಿಲೀಸ್ ಮಾಡಿದ್ರು. ಜಿ. ಮನೋಹರನ್ ಮತ್ತು ಕೆಪಿ ಶ್ರೀಕಾಂತ್ ಅವರು 'ಲಹರಿ ಫಿಲ್ಮ್ಸ್ LLP' ಮತ್ತು "ವೀನಸ್ ಎಂಟರ್‌ಟೈನರ್ಸ್" ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಭೀಮನ ಸೌಂಡ್ ಹೆಚ್ಚಿಸಿದ ಬ್ಯಾಡ್ ಬಾಯ್ಸ್! ಇಂಡಿಯಾ ಟ್ರೆಂಡ್ ಆಯ್ತು ಈ ಸಾಂಗ್!