ಅಭಿಮಾನಿಗಳ ಪ್ರೀತಿಗೆ ಕೊನೆಯಿಲ್ಲ; ಅಪ್ಪು ಭಾವಚಿತ್ರ ಹಿಡಿದು ಕಾವಡಿ ಸಲ್ಲಿಸಿದ ಆಂಧ್ರ ಫ್ಯಾನ್ಸ

 ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ಮಂಡಲಂನ ಗುಡಿವಂಕ ಕಾವಡಿ ಉತ್ಸವದಲ್ಲಿ ಅಪ್ಪು ಅಭಿಮಾನಿಗಳು ಅಪ್ಪುವಿನ ದೊಡ್ಡ ಭಾವಚಿತ್ರ ಹಿಡಿದು ಕ್ರೇನ್‌ನಲ್ಲಿ ಕಾವಡಿ ಸಲ್ಲಿಸಿದ್ದಾರೆ. ಈ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗಿದೆ. 
 

Share this Video
  • FB
  • Linkdin
  • Whatsapp

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನ ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಅಪ್ಪು ದೂರವಾಗಿ ತಿಂಗಳೂಗಳೇ ಕಳೆದಿದ್ದರೂ ಅವರ ನೆನಪುಗಳು ಅಭಿಮಾನಿಗಳಲ್ಲಿ ಇನ್ನು ಹಚ್ಚ ಹಸಿರಾಗೆ ಇದೆ. ಅಪ್ಪು ಅವರನ್ನು ಎಷ್ಟು ಪ್ರೀತಿ ಮಾಡುತ್ತಾರೆ ಎನ್ನುವುದಕ್ಕೆ ಈ ಒಂದು ಘಟನೆ ಕೂಡ ಸಾಕ್ಷಿ. ಅಪ್ಪುಗೆ ಕರ್ನಾಟಕ ಮಾತ್ರವಲ್ಲದೇ ಪರಭಾಷೆಯಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಬೇರೆ ರಾಜ್ಯಗಳಲ್ಲೂ ಪುನೀತ್‌ಗೆ ನಮನ ಸಲ್ಲಿಸುವ ಕಾರ್ಯ ನಡೆಯುತ್ತಲೇ ಸಾಗಿದೆ. ಕರ್ನಾಟಕ ಮಾತ್ರವಲ್ಲ ಆಂಧ್ರದಲ್ಲೂ ಅಭಿಮಾನಿಗಳು ಅಪ್ಪು ನೆನೆದು ಕಣ್ಣೀರಾಕುತ್ತಿದ್ದಾರೆ. ಹಾಗೆಯೇ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ಮಂಡಲಂನ ಗುಡಿವಂಕ ಕಾವಡಿ ಉತ್ಸವದಲ್ಲಿ ಅಪ್ಪು ಅಭಿಮಾನಿಗಳು ಅಪ್ಪುವಿನ ದೊಡ್ಡ ಭಾವಚಿತ್ರ ಹಿಡಿದು ಕ್ರೇನ್‌ನಲ್ಲಿ ಕಾವಡಿ ಸಲ್ಲಿಸಿದ್ದಾರೆ. ಈ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗಿದೆ. 

Related Video