ಸಾಹಸಸಿಂಹನ ಹುಟ್ಟುಹಬ್ಬದಲ್ಲಿ ರಾರಾಜಿಸಿದ ಕಟೌಟ್‌ಗಳು; ಅಭಿಮಾನಿಗಳ ಸಂಭ್ರಮ ಹೀಗಿತ್ತು

ಸ್ಯಾಂಡಲ್‌ವುಡ್‌ನ ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಅಭಿಮಾನಿಗಳು ಆಚರಿಸಿದರು. ಯಜಮಾನ ವಿಷ್ಣುವರ್ಧನ್ ನೆನಪಲ್ಲಿ ಅವರ ಅಭಿಮಾನಿಗಳು ಈ ಭಾರಿಯೂ ಜನ್ಮದಿನವನ್ನ ಆಚರಿಸಿದ್ದಾರೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಸೇರಿದ್ದ ದಾದನ ಫ್ಯಾನ್ಸ್, ಸಮಾಧಿಗೆ ಪೂಜೆ ಮಾಡಿ ಜೈಕಾರ ಕೂಗಿ ಕೇಟ್ ಕಟ್ ಮಾಡಿ ಆಪ್ತಮಿತ್ರನಿಗೆ ಶುಭಾಷಯ ತಿಳಿಸಿದ್ದಾರೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನ ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ್ಗೆ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಅಭಿಮಾನಿಗಳು ಆಚರಿಸಿದರು. ಯಜಮಾನ ವಿಷ್ಣುವರ್ಧನ್ ನೆನಪಲ್ಲಿ ಅವರ ಅಭಿಮಾನಿಗಳು ಈ ಭಾರಿಯೂ ಜನ್ಮದಿನವನ್ನ ಆಚರಿಸಿದ್ದಾರೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಸೇರಿದ್ದ ದಾದನ ಫ್ಯಾನ್ಸ್, ಸಮಾಧಿಗೆ ಪೂಜೆ ಮಾಡಿ ಜೈಕಾರ ಕೂಗಿ ಕೇಟ್ ಕಟ್ ಮಾಡಿ ಆಪ್ತಮಿತ್ರನಿಗೆ ಶುಭಾಷಯ ತಿಳಿಸಿದ್ದಾರೆ. ವಿಷ್ಣುವರ್ಧನ್ ಆಪ್ತ ಗೆಳೆಯ ರಮೇಶ್ ಭಟ್ ವಿಷ್ಣು ಸಮಾಧಿಗೆ ಆಗಮಿಸಿ ಕೇಕ್ ಕಟ್ ಮಾಡಿದ್ರು. ವಿಷ್ಣುವರ್ಧನ್ ಇಲ್ಲ ಅಂದ್ರೂ ಅಭಿಮಾನಿಗಳು ಮಾತ್ರ ಅವರ ಹುಟ್ಟುಹಬ್ಬ ಆಚರಿಸೋದನ್ನ ಮರೆತಿಲ್ಲ. ಪ್ರತಿ ವರ್ಷವೂ ಅಭಿಮಾನ್ ಸ್ಟುಡಿಯೋದಲ್ಲಿ ಸೆಲೆಬ್ರೇಷನ್ ಮಾಡ್ತಾರೆ. ಈ ಭಾರಿ ಈ ಸಂಭ್ರಮಾಚರಣೆ ಸ್ವಲ್ಪ ಜೋರಾಗೆ ಇತ್ತು. ವಿಷ್ಣುದಾದ 72ನೇ ಜನ್ಮದಿನವನ್ನ ಚಂದಗಾಣಿಸಬೇಕು ಅಂತ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ನಟಿಸಿರೋ 55 ಸೂಪರ್ ಹಿಟ್ ಸಿನಿಮಾಗಳನ್ನ ಅಭಿಮಾನಿಗೇ ಹಾಕಿದ್ರು. ಅಭಿಮಾನಿಗಳು ಅಭಿಮಾನಕ್ಕೋಷ್ಕರ ವಿಷ್ಣು ಪುಣ್ಯಭೂಮಿಯಲ್ಲಿ ತಲೆ ಎತ್ತಿದ್ದ ಈ ಕಟೌಟ್ಗಳನ್ನ ನೋಡೋಕೆ ಅದ್ಧೂರಿಯಾಗಿ ಕಾಣುತ್ತಿತ್ತು. 

Related Video