Asianet Suvarna News Asianet Suvarna News

ಗಾಳಿಪಟ-2; ಸೆನ್ಸೇಷನ್ ಸೃಷ್ಟಿಸಿದ ಭಟ್ರು-ಗಣಿ, ದಶಕದ ಹಿಂದಿನ ಇತಿಹಾಸ ಮತ್ತೆ ಮರುಕಳಿಸುತ್ತಾ?

ಗಾಳಿಪಟ-2. ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ  ಸಿಕ್ಕಾಪಟ್ಟೆ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಅದಕ್ಕೆ ಕಾರಣಗಳು ಹತ್ತಾರಿವೆ. ದಶಕದ ಹಿಂದೆ ಬಂದ ಗಾಳಿಪಟ ಸಿನಿಮಾದ ಸೀಕ್ವೇಲ್ ಅನ್ನೋದು ಒಂದಾದ್ರೆ, ಈ ಸಿನಿಮಾದಿಂದ ವರ್ಷಗಳ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಭಟ್ರು ಮತ್ತೊಮ್ಮೆ ಜೊತೆಯಾದ್ದಾರೆ. ಅದಲ್ಲದೆ ಟ್ರೈಲರ್, ಟೀಸರ್, ಹಾಡುಗಳು ಸಿನಿ ಅಭಿಮಾನಿಗಳ ಕುತೂಹಲವನ್ನ ಹೆಚ್ಚುವಂತೆ ಮಾಡಿದೆ. ಗಾಳಿಪಟ-2 ಬಿಡುಗಡೆಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ.  

Aug 9, 2022, 11:57 AM IST

ಗಾಳಿಪಟ-2. ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ  ಸಿಕ್ಕಾಪಟ್ಟೆ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಅದಕ್ಕೆ ಕಾರಣಗಳು ಹತ್ತಾರಿವೆ. ದಶಕದ ಹಿಂದೆ ಬಂದ ಗಾಳಿಪಟ ಸಿನಿಮಾದ ಸೀಕ್ವೇಲ್ ಅನ್ನೋದು ಒಂದಾದ್ರೆ, ಈ ಸಿನಿಮಾದಿಂದ ವರ್ಷಗಳ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಭಟ್ರು ಮತ್ತೊಮ್ಮೆ ಜೊತೆಯಾದ್ದಾರೆ. ಅದಲ್ಲದೆ ಟ್ರೈಲರ್, ಟೀಸರ್, ಹಾಡುಗಳು ಸಿನಿ ಅಭಿಮಾನಿಗಳ ಕುತೂಹಲವನ್ನ ಹೆಚ್ಚುವಂತೆ ಮಾಡಿದೆ. ಗಾಳಿಪಟ-2 ಬಿಡುಗಡೆಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ.  ಕನ್ನಡ ಸಿನಿಮಾಗಳಿಗೆ ವರ್ಲ್ಡ್ ಮಾರ್ಕೆಟ್ನಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇರೋದು ಗೊತ್ತಿರೋ ವಿಚಾರ. ಇಲ್ಲಿ ಹೇಗೆ ಕನ್ನಡ ಸಿನಿಮಾಗೆ ಕನ್ನಡಿಗರು ಕಾಯ್ತಾರೋ ಹಾಗೆ ಹೊರ ದೇಶದಲ್ಲೂ ಕನ್ನಡ ಚಿತ್ರಗಳಿಗೆ ಎದುರುನೋಡುತಿದ್ದಾರೆ. ಈಗಾಗ್ಲೆ ಆಸ್ಟ್ರೇಲಿಯಾ ಹಾಗು ಯುಎಸ್ಎ ನಲ್ಲಿ ಗಾಳಿಪಟ-2 ರಿಲೀಸ್ ಆಗೋ ಚಿತ್ರಮಂದಿರಗಳ ಲೀಸ್ಟ್ ಹೊರ ಬಿದ್ದಾಗಿದೆ. ಬುಕ್ ಮೈ ಶೋನಲ್ಲೂ ಸಿಕ್ಕಾಪಟ್ಟೆ ಲೈಕ್ಸ್ ಬಂದಿದ್ದು. ಸಿನಿಮಾ ನೋಡೋಕೆ ಕಾಯುತ್ತಿದ್ದಾರೆ. ಮತ್ತೊಂದು ಅಸಲಿ ವಿಚಾರ ಏನಪ್ಪ ಅಂದ್ರೆ ಗಾಳಿಪಟ -2 ಸಿನಿಮಾದ ಟಿಕೆಟ್ ಬುಕ್ಕಿಂಗ್ ಆರಂಭ ಆಗಿದೆ.  ಗಾಳಿಪಟ-2 ಸಿನಿಮಾ ಅಂದ್ರೆ ದಶಕದ ಹಿಂದೆ ಬಂದು ದೊಡ್ಡ ಹಿಸ್ಟರಿ ಸೃಷ್ಟಿಸಿದ್ದ ಗಾಳಿಪಟ ನೆನಪಾಗುತ್ತೆ. ಯಾಕಂದ್ರೆ ಹಳೆ ಗಾಳಿಪಟ 175 ದಿನ ಪ್ರದರ್ಶನ ಕಂಡಿತ್ತು. ಈ ಸಿನಿಮಾಗೆ ಗಣೇಶ್ ಒಂದು ಕೋಟಿ ಸಂಭಾವನೆ ಪಡೆದು, ಕನ್ನಡದಲ್ಲಿ ಕೋಟಿ ಸಂಭಾವನೆ ಪಡೆದ ಮೊದಲ ನಟ ಅನ್ನೋ ರೆಕಾರ್ಡ್ ಮಾಡಿದ್ರು. ಆ ಸಿನಿಮಾ ಅದ್ಧೂರಿ ವೆಚ್ಚದಲ್ಲಿ ಬರೀ ಮಲೆನಾಡಿನಲ್ಲಿ ಮಾತ್ರ ನಿರ್ಮಾಣ ಆಗಿತ್ತು. ಆದ್ರೆ ಈಗ ಬರುತ್ತಿರೋ ಗಾಳಿಪಟ-2 ಮಲೆನಾಡಿನ ಜತೆಗೆ ಫಾರಿನ್ನಲ್ಲೂ ಶೂಟಿಂಗ್ ಆಗಿದೆ. ಗಣೇಶ್, ಲೂಸಿಯಾ ಪವನ್, ಅನಂತ್ ನಾಗ್, ಬುಲೆಟ್ ಪ್ರಕಾಶ್, ರಾಂಗಾಯಣ ರಘು,  ಹಾಗು ಮುದ್ದಾದ ಚೆಲುವೆಯರಾದ ವೈಭವಿ ಶಾಂಡಿಲ್ಯಾ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್ ಸೇರಿದಂತೆ ದೊಡ್ಡ ತಂಡವನ್ನ ಭಟ್ರು ಕಟ್ಟಿ ಗೆಲುವಿನ ಹಾದಿ ಹುಡುಕಿದ್ದಾರೆ.

Video Top Stories