ಅಭಿಮಾನದ ಹುಚ್ಚು.. ಕೈ ಮೇಲೆ ಪವಿತ್ರಾ ಗೌಡ ಟ್ಯಾಟೂ: ಸಿನಿಮಾದಲ್ಲಿ ನಟಿಸಿ ಫೇಮಸ್ ಆಗ್ಲಿಲ್ಲ ನಟಿ!

ನೆಚ್ಚಿನ ನಟ, ನಟಿಯರ ಟ್ಯಾಟೂಗಳನ್ನ ಕೈಮೇಲೆ, ಮೈಮೇಲೆ ಹಾಕಿಸಿಕೊಳ್ಳೋ ಅಭಿಮಾನಿಗಳನ್ನ ನೋಡಿದ್ದೀರಿ. ಇಲ್ಲೊಬ್ಬ ಅಭಿಮಾನಿ ಪವಿತ್ರಾ ಗೌಡ ಫೋಟೋವನ್ನ ತನ್ನ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ.

Share this Video
  • FB
  • Linkdin
  • Whatsapp

ಪವಿತ್ರಾ ಗೌಡ ನಾಲ್ಕಾರು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ರೂ ಆಕೆ ಹೆಸರು ಜನರಿಗೆ ಗೊತ್ತಿರಲಿಲ್ಲ. ಆದ್ರೆ ರೇಣುಕಾಸ್ವಾಮಿ ಮರ್ಡರ್ ಕೇಸ್​​ ಬಳಿಕ ದರ್ಶನ್​ರಷ್ಟೇ ಫೇಮಸ್ ಆಗಿದ್ದಾರೆ ಪವಿತ್ರಾ. ಅದಕ್ಕೆ ಸಾಕ್ಷಿ ಬೇಕಾ..? ಈ ಸ್ಟೋರಿ ನೋಡಿ. ನೆಚ್ಚಿನ ನಟ, ನಟಿಯರ ಟ್ಯಾಟೂಗಳನ್ನ ಕೈಮೇಲೆ, ಮೈಮೇಲೆ ಹಾಕಿಸಿಕೊಳ್ಳೋ ಅಭಿಮಾನಿಗಳನ್ನ ನೋಡಿದ್ದೀರಿ. ಇಲ್ಲೊಬ್ಬ ಅಭಿಮಾನಿ ಪವಿತ್ರಾ ಗೌಡ ಫೋಟೋವನ್ನ ತನ್ನ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಇದನ್ನ ಖುದ್ದು ಪವಿತ್ರಾ ಗೌಡ ಶೇರ್ ಮಾಡಿ, ನಿಮ್ಮ ಅಭಿಮಾನಕ್ಕೆ ಶರಣು ಕಣಯ್ಯಾ ಅಂದಿದ್ದಾರೆ. ಅಂದಹಾಗೆ ಈತ ದರ್ಶನ್ ಅಭಿಮಾನಿ, ಈಗ ಪವಿತ್ರಾ ಗೌಡಗೂ ಅಭಿಮಾನಿ ಆಗಿದ್ದಾನೆ. ತನ್ನ ಅಭಿಮಾನ ವ್ಯಕ್ತಪಡಿಸೋಕೆ ಅಕ್ಕನ ಫೋಟೋನ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡು, ಪವಿತ್ರಾ ಗೌಡಗೆ ತೋರಿಸಿದ್ದಾನೆ. ಅದನ್ನ ನೋಡಿ ಪವಿತ್ರಾ ನಾಚಿ ನೀರಾಗಿದ್ದಾರೆ.

ಹೌದು ಪವಿತ್ರಾ ಗೌಡ 4 ಕನ್ನಡ ಒಂದು ತಮಿಳು ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ರು. ಆದ್ರೆ ಸಿನಿಮಾದಲ್ಲಿ ನಟಿಸೋವಾಗ ಅಭಿಮಾನಿ ಇರಲಿ ಗುರುತಿಸಿ ಮಾತನಾಡಿಸೋರು ಕೂಡ ದಿಕ್ಕಿರಲಿಲ್ಲ. ದರ್ಶನ್ ಜೊತೆ ನಂಟು ಬೆಳೆದ ಮೇಲೆ ಪವಿತ್ರಾ ಹೆಸರು ಕೊಂಚ ಚಾಲ್ತಿಗೆ ಬಂತು. ಇನ್ನೂ ರೇಣುಕಾಸ್ವಾಮಿ ಮರ್ಡರ್ ಕೇಸ್ ಬಳಿಕವಂತೂ ಪವಿತ್ರಾ ದೇಶಾದ್ಯಂತ ಫೇಮಸ್ ಆಗಿದ್ದು ಸುಳ್ಳಲ್ಲ. ಸದ್ಯ ಸೋಷಿಯಲ್ ಮೀಡಿಯಾದಲ್ಲೂ ಪವಿತ್ರಾಗೆ ಲಕ್ಷಗಟ್ಟಳೇ ಫಾಲೋವರ್ಸ್ ಆಗಿದ್ದಾರೆ. ತನ್ನ ಫಾಲೋವರ್ಸ್ ಕಣ್ಣುಕುಕ್ಕುವಂತೆ ಪವಿತ್ರಾ ರೀಲ್ಸ್ ಕೂಡ ಹಾಕ್ತಾ ಇರ್ತಾರೆ. ಇಂಥಾ ರೀಲ್ಸ್ ನೋಡಿ ಫೀಲ್ ಆಗಿರೋ ಅಭಿಮಾನಿಯೊಬ್ಬ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಆದ್ರೆ ಇದನ್ನ ನೋಡಿರೋ ದರ್ಶನ್ ಫ್ಯಾನ್ಸ್ ‘ಹುಷಾರ್ ಕಣಪ್ಪಾ ಇದನ್ನ ನಮ್ಮ ಬಾಸ್ ನೋಡಿದ್ರೆ ನಿನ್ ಗತಿ ಏನಾಗುತ್ತೋ ಗೊತ್ತಿಲ್ಲ’ ಅಂತ ಕಾಮೆಂಟ್ ಮಾಡ್ತಾ ಇದ್ದಾರೆ..!

Related Video