ಮತ್ತೆ ಗಂಡ್​ ಹೈಕ್ಳ ಹಾರ್ಟ್​ಗೆ ಹಾಯ್ ಎಂದ ಕಣ್ಸನ್ನೆ ಕ್ಯೂಟಿ: ಶ್ರೇಯಸ್​ ಜೊತೆ ಪ್ರಿಯಾ ಪ್ಯಾರ್!

ಕಣ್ ಸನ್ನೆ ಹುಡುಗಿ ಪ್ರಿಯಾ ವಾರಿಯರ್​ ಒಂದ್ ಕಣ್ ಹೊಡೆದ್ರೆ ಸಾಕು..? ಗಂಡ್ ಹೈಕ್ಳ ಹೃದಯಾ ಹಾಯ್ ಹಾಯ್ ಅನ್ನುತ್ತೆ. ಈಗ ಪ್ರಿಯಾ ವಾರಿಯರ್ ಆಫ್ಟರ್​ ಎ ಲಾಂಗ್ ಟೈಮ್ ತಗೋಂಡು ಕನ್ನಡ ಸಿನಿ ಪ್ರೇಕ್ಷಕರಿಗೆ ಕಣ್  ಹೊಡೆಯೋಕೆ ಸಜ್ಜಾಗಿದ್ದಾರೆ.

Share this Video
  • FB
  • Linkdin
  • Whatsapp

ಕಣ್ ಸನ್ನೆ ಹುಡುಗಿ ಪ್ರಿಯಾ ವಾರಿಯರ್​ ಒಂದ್ ಕಣ್ ಹೊಡೆದ್ರೆ ಸಾಕು..? ಗಂಡ್ ಹೈಕ್ಳ ಹೃದಯಾ ಹಾಯ್ ಹಾಯ್ ಅನ್ನುತ್ತೆ. ಈಗ ಪ್ರಿಯಾ ವಾರಿಯರ್ ಆಫ್ಟರ್​ ಎ ಲಾಂಗ್ ಟೈಮ್ ತಗೋಂಡು ಕನ್ನಡ ಸಿನಿ ಪ್ರೇಕ್ಷಕರಿಗೆ ಕಣ್ ಹೊಡೆಯೋಕೆ ಸಜ್ಜಾಗಿದ್ದಾರೆ. ಹಾಗಾದ್ರೆ ಪ್ರಿಯಾ ವಾರಿಯರ್​​​​​ ಪ್ರಿಯವಾಗೋಕೆ ಹೊರಟಿರೋದ ಯಾವ ಸಿನಿಮಾದಲ್ಲಿ ಅಂತೀರಾ..? ಅದೇ ವಿಷ್ಣುಪ್ರಿಯಾ. ಪ್ರಿಯಾ ವಾರಿಯರ್​.. ಜೆಸ್ಟ್ ಒಂದೇ ಒಂದು ಕಣ್​ಸನ್ನೆಯಿಂದ ಸೌತ್ ಸಿನಿ ಜಗತ್ತಲ್ಲಿ ಗಂಡ್ ಹೈಕ್ಳ ಹಾರ್ಟ್​ಗೆ ಲಗ್ಗೆ ಇಟ್ಟಿದ್ರು. ಪ್ರಿಯಾ ವಾರಿಯರ್​ ಗೆ ಸ್ಟಾರ್ ಇಮೇಜ್ ತಂದುಕೊಟ್ಟಿದ್ದು ಇದೇ ಕಣ್ಸನ್ನೆ. 

ಈಗ ಈ ಕ್ಯೂಟಿ ಕನ್ನಡಿಗರಿಗೆ ಪ್ರಿಯಾವಾಗೋಕೆ ಹೊರಟಿದ್ದಾರೆ. ಅದು ಹೆಸರಾಂತ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಕೆ ಮಂಜು ನಟಿಸಿರೋ ವಿಷ್ಣುಪ್ರಿಯಾ ಸಿನಿಮಾ ಮೂಲಕ. ಇದೀಗ ವಿಷ್ಣುಪ್ರಿಯಾ ಲವ್ ಸಾಂಗ್ ರಿಲೀಸ್​ ಆಗಿದೆ. ಪಡ್ಡೆಹುಲಿ ಖ್ಯಾತಿಯ ಶ್ರೇಯಸ್ ಮಂಜು, ಮತ್ತು ಮಲೆಯಾಳಂನ ಕಣ್ಸನ್ನೆ ಚೆಲುವೆ ಪ್ರಿಯಾ ವಾರಿಯರ್ ಅಭಿನಯದ ತೊಂಭತ್ತರ ದಶಕದಲ್ಲಿ ನಡೆಯುವ ಉತ್ಕಟ ಪ್ರೇಮ ಕಥೆ ಹೇಳುವ ಚಿತ್ರ ವಿಷ್ಣುಪ್ರಿಯ. ಈ ಚಿತ್ರವನ್ನು ಡಾ. ಕೆ.ಮಂಜುನಿರ್ಮಿಸಿದ್ದಾರೆ. ನಿರ್ದೇಶಕ ವಿ.ಕೆ.ಪ್ರಕಾಶ್ ಕಥೆ ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಫೆಬ್ರವರಿ 21 ರಂದು ರಾಜ್ಯಾದ್ಯಂತ ವಿಷ್ಣುಪ್ರಿಯಾ ತೆರೆ ಕಾಣುತ್ತಿದೆ. 

Related Video