Duniya Vijay: ಹೊಸ ಚಿತ್ರದ ಟೈಟಲ್ ರಿವೀಲ್ ಮಾಡಿದ ಸಲಗ!

ದುನಿಯಾ ವಿಜಯ್‌ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ತಮ್ಮ ನಟನೆ, ನಿರ್ದೇಶನದ ಹೊಸ ಚಿತ್ರದ ಟೈಟಲ್‌ ಬಿಡುಗಡೆ ಮಾಡಿದ್ದಾರೆ. ಚಿತ್ರದ ಹೆಸರು 'ಭೀಮ'. 'ಕೆಣಕದೆ ಇದ್ದರೆ ಕ್ಷೇಮ' ಎಂಬುದು ಚಿತ್ರದ ಉಪ ಶೀರ್ಷಿಕೆ.

Share this Video
  • FB
  • Linkdin
  • Whatsapp

ದುನಿಯಾ ವಿಜಯ್ (Duniya Vijay) ತಮ್ಮ 28ನೇ ಸಿನಿಮಾ ಟೈಟಲ್ ರಿವೀಲ್ ಮಾಡಿದ್ದಾರೆ. 'ಸಲಗ' ಸಿನಿಮಾದ ಯಶಸ್ಸಿನಲ್ಲಿ ತೇಲಾಡುತ್ತಿರುವ ವಿಜಯ್ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ. ದುನಿಯಾ ವಿಜಯ್ ನಿರ್ದೇಶಿಸಿದ್ದ ಮೊದಲ ಸಿನಿಮಾ 'ಸಲಗ'ಕ್ಕೆ ಸಿನಿಪ್ರೇಮಿಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ರೌಡಿಸಂ ಕಥೆಯನ್ನು ತೆರೆಮೇಲೆ ತಂದಿದ್ದ ವಿಜಯ್ ನಟನಷ್ಟೇ ಅಲ್ಲ. ಒಬ್ಬ ಉತ್ತಮ ನಿರ್ದೇಶಕ ಎನ್ನುವುದನ್ನೂ ಸಾಬೀತು ಮಾಡಿದ್ದರು. ಈಗ ಇದೇ ಖುಷಿಯಲ್ಲಿ ಎರಡನೇ ಸಿನಿಮಾಗೆ ಕೈ ಹಾಕಿದ್ದಾರೆ. ಮಹಾಶಿವರಾತ್ರಿ (Mahashivratri) ವಿಶೇಷ ದಿನದಂದು ವಿಜಯ್ ನಿರ್ದೇಶಿಸುತ್ತಿರುವ ಎರಡನೇ ಸಿನಿಮಾದ ಟೈಟಲ್ ರಿವೀಲ್ ಮಾಡಿದ್ದಾರೆ.

Duniya Vijay Telugu Film: ಟಾಲಿವುಡ್‌ನಲ್ಲಿ ವಿಲನ್ ಆಗಿ ದುನಿಯಾ ವಿಜಯ್ ಎಂಟ್ರಿ

ಹೌದು! ದುನಿಯಾ ವಿಜಯ್‌ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ತಮ್ಮ ನಟನೆ, ನಿರ್ದೇಶನದ ಹೊಸ ಚಿತ್ರದ ಟೈಟಲ್‌ ಬಿಡುಗಡೆ (Title Launch) ಮಾಡಿದ್ದಾರೆ. ಚಿತ್ರದ ಹೆಸರು 'ಭೀಮ' (Bheema). 'ಕೆಣಕದೆ ಇದ್ದರೆ ಕ್ಷೇಮ' ಎಂಬುದು ಚಿತ್ರದ ಉಪ ಶೀರ್ಷಿಕೆ. ಈ ಚಿತ್ರಕ್ಕೆ ನಿರ್ಮಾಪಕರಾಗಿ ಕೃಷ್ಣ ಸಾರ್ಥಕ್‌ (Krishna Sarthak) ಹಾಗೂ ಜಗದೀಶ್‌ ಗೌಡ (Jagadeesh Gowda) ಜತೆಯಾಗಿದ್ದಾರೆ. ಕತೆ, ಚಿತ್ರಕಥೆ ವಿಜಯ್‌ ಅವರೇ ಬರೆಯುತ್ತಿದ್ದಾರೆ. ಸಂಭಾಷಣೆಕಾರರಾಗಿ ಮಾಸ್ತಿ (Maasthi) ಇದ್ದಾರೆ. ಶಿವಸೇನಾ ಕ್ಯಾಮೆರಾ, ಚರಣ್‌ರಾಜ್‌ ಸಂಗೀತ ಸಂಯೋಜನೆ ಇದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video