
Jamali Gudda: ನಟ ರಾಕ್ಷಸನ 'ಜಮಾಲಿ ಗುಡ್ಡ'ದ ಟ್ರೈಲರ್ ಸೂಪರ್: ನಿರೀಕ್ಷೆ ಹೆಚ್ಚಿಸಿದೆ 1995ರ ಕಥೆ
ನಟ ರಾಕ್ಷಸ ಡಾಲಿ ಧನಂಜಯ್ ಈ ವರ್ಷ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಬೆಳ್ಳಿತೆರೆ ಮೇಲೆ ತರುತ್ತಿದ್ದಾರೆ. ಇದೀಗ ಅವರ ಜಮಾಲಿ ಗುಡ್ಡ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ.
ಜಮಾಲಿಗುಡ್ಡದ ಕಥೆಯನ್ನು 1995- 96ರ ಕಾಲಘಟ್ಟದಲ್ಲಿ ಕಟ್ಟಿಕೊಡಲಾಗಿದೆ. ಈ ಸಿನಿಮಾವನ್ನ ಕುಶಾಲ್ ಗೌಡ ನಿರ್ದೇಶಿಸಿದ್ದಾರೆ. ಡಾಲಿಗೆ ಜೋಡಿಯಾಗಿ ಅದಿತಿ ಪ್ರಭುದೇವ ನಟಿಸಿದ್ದು, ಸಿನಿಮಾದಲ್ಲಿ ಭಾವನಾತ್ಮಕ ಪಯಣದ ಕಥೆ ಇದೆ. ಶ್ರೀಹರಿ ನಿರ್ಮಾಣ ಮಾಡುತ್ತಿರೋ ಈ ಸಿನಿಮಾದಲ್ಲಿ ಡಾಲಿಯನ್ನ ವಿಭಿನ್ನವಾಗಿ ನೋಡ್ಬಹುದು. ಚಿತ್ರದಲ್ಲಿ ಯಶ್ ಶೆಟ್ಟಿ, ರುಷಿಕಾ ರಾಜ್, ದಿವ್ಯಾ, ಮಯೂರಿ ನಟರಾಜ್, ಪ್ರಕಾಶ್ ಬೆಳವಾಡಿ, ಭಾವನಾ ರಾಮಣ್ಣ, ಪ್ರಾಣ್ಯಾ ರಾವ್‌ಮುಂತಾದವರು ನಟಿಸಿದ್ದಾರೆ. ಡಿಸೆಂಬರ್ 30ಕ್ಕೆ ಜಮಾಲಿಗುಡ್ಡ ತೆರೆಗಪ್ಪಳಿಸಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ