'ಪಿಸ್ತೂಲ್ ಇವನ ದೋಸ್ತಿ': ಧೂಳ್ ಎಬ್ಬಿಸಿದೆ 'ಹೊಯ್ಸಳ' ಸಿನಿಮಾದ ಹಾಡು

ಧನಂಜಯ್ 'ಹೊಯ್ಸಳ'ನಾಗಿ ಬೆಳ್ಳಿ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದು,  ಚಿತ್ರದ ಭರ್ಜರಿ ಮಾಸ್ ಸಾಂಗ್ ರಿಲೀಸ್ ಆಗಿದೆ.

Share this Video
  • FB
  • Linkdin
  • Whatsapp

ಡಾಲಿ ಧನಂಜಯ್ ಪೊಲೀಸ್ ಪಾತ್ರದಲ್ಲಿ ನಟಿಸಿರುವ ಹೊಯ್ಸಳ ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಿದ್ದು, ಫುಲ್ ಕ್ರೇಜ್ ಸೃಷ್ಟಿಸಿದೆ. 'ಸಲ ಸಲ ಹೊಯ್ಸಳ ಯಾರಿಲ್ಲ ಇವನಂತೆ' ಎಂಬ ಹಾಡು ಕೇಳಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಡಾಲಿ ಆರ್ಭಟಿಸಿದ್ದು, ಹೊಯ್ಸಳ ಸಾಂಗ್ ಕಿಚ್ಚು ಹಚ್ಚಿದೆ. ನಕಾಶ್ ಅಜೀಜ್ ಗಾಯನ ಹಾಗೂ ಅಜನೀಶ್ ಲೋಕನಾಥ್ ಸಂಗೀತವಿರುವ ಈ ಹಾಡು ಹುಚ್ಚೆಬ್ಬಿಸುವಂತಿದೆ. ಚಿತ್ರದಲ್ಲಿ ಅಮೃತಾ ಅಯ್ಯಂಗಾರ್, ಡಾಲಿ ಧನಂಜಯ್ ಅವರಿಗೆ ಮತ್ತೊಮ್ಮೆ ಜೋಡಿಯಾಗಿದ್ದಾರೆ. ರಾಜಕುಮಾರ ಖ್ಯಾತಿಯ ಸಂತೋಷ್ ಆನಂದ್ ರಾಮ್ ನಿರ್ದೇಶನದ ವಿಭಿನ್ನ ಕತೆ ಹೊಯ್ಸಳ ಆಗಿದ್ದು, ಸ್ವತಃ ಸಂತೋಷ್ ಆನಂದ್ ರಾಮ್ ಲಿರಿಕ್ಸ್ ಬರೆದಿದ್ದಾರೆ. ಕಾರ್ತಿಕ್ ಗೌಡ ಮತ್ತು ಯೋಗಿ ಜಿರಾಜ್ ಹೊಯ್ಸಳ ಚಿತ್ರವನ್ನು ನಿರ್ಮಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video