ಡೊಳ್ಳು ಸಿನಿಮಾ ನೋಡಿ ಸಿದ್ದು ಸರ್ ಒಂದು ಕ್ಷಣ ಎಮೋಶನಲ್ ಆದ್ರು: ಪವನ್ ಒಡೆಯರ್

'ಡೊಳ್ಳು' ಚಿತ್ರವನ್ನು ಸಿದ್ದರಾಮಯ್ಯ ಅವರ ಜೊತೆ ವೀಕ್ಷಿಸಿದ ನಂತರ ಚಿತ್ರದ ನಿರ್ಮಾಪಕ ಪವನ್ ಒಡೆಯರ್, ಸಿದ್ದರಾಮಯ್ಯ ಅವರು ಚಿತ್ರದ ಬಗ್ಗೆ ಹೊಗಳಿದನ್ನು ಮಾಧ್ಯಮದ ಮುಂದೆ ಹಂಚಿಕೊಂಡರು. 

First Published Aug 24, 2022, 2:27 PM IST | Last Updated Aug 24, 2022, 2:27 PM IST

ರಾಷ್ಟ್ರಪ್ರಶಸ್ತಿ ಪುರಸ್ಕೃತ 'ಡೊಳ್ಳು' ಸಿನಿಮಾವನ್ನು  ನಿನ್ನೆ (ಮಂಗಳವಾರ)  ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ವೀಕ್ಷಿಸಿ ಚಿತ್ರದ ಬಗ್ಗೆ ಭಾರೀ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. 'ಡೊಳ್ಳು' ಚಿತ್ರವನ್ನು ಸಿದ್ದರಾಮಯ್ಯ ಅವರ ಜೊತೆ ವೀಕ್ಷಿಸಿದ ನಂತರ ಚಿತ್ರದ ನಿರ್ಮಾಪಕ ಪವನ್ ಒಡೆಯರ್, ಸಿದ್ದರಾಮಯ್ಯ ಅವರು ಚಿತ್ರದ ಬಗ್ಗೆ ಹೊಗಳಿದನ್ನು ಮಾಧ್ಯಮದ ಮುಂದೆ ಹಂಚಿಕೊಂಡರು. ಸಿದ್ದರಾಮಯ್ಯ ಸರ್ ಲಿಫ್ಟ್‌ನಲ್ಲಿ ಹೋಗಬೇಕಾದರೆ ನನ್ನ ರಾಜಕೀಯ ಜೀವನ ಹಾಗೂ ವೈಯಕ್ತಿಕ ಜೀವನವೆಲ್ಲ ಬದಿಗೊತ್ತಿ ನಾವು ಪ್ರಾರಂಭಿಸಿದ್ದೇ ಡೊಳ್ಳು ಕುಣಿತ, ಕರಡಿ ಕುಣಿತ, ಈ ತರಹದೆಲ್ಲ ಜಾನಪದ ಕಲೆಗಳನ್ನು ನಾವು ಸ್ಟಾರ್ಟ್‌ ಮಾಡಿದ್ದು ಅಂತ ಹೇಳುತ್ತಾ ಬಹಳ ಎಮೋಷನಲ್ ಆದರು. ಇನ್ನು ಸಿದ್ದರಾಮಯ್ಯ ಸರ್ ಈ ಚಿತ್ರವನ್ನು ವೀಕ್ಷಿಸಿದ್ದು, ನನಗೆ ಬಹಳ ಖುಷಿ ಆಯಿತು ಎಂದು ಪವನ್ ಒಡೆಯರ್ ತಿಳಿಸಿದರು. ಡೊಳ್ಳು ಸಿನಿಮಾಗೆ ಸಾಗರ್​ ಪುರಾಣಿಕ್​ ನಿರ್ದೇಶನ ಮಾಡಿದ್ದು, ಪವನ್​ ಒಡೆಯರ್​ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿರುವುದು ವಿಶೇಷ. ಅಲ್ಲದೇ ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಮನ್ನಣೆ ಪಡೆದುಕೊಂಡಿದೆ. ಈ ಚಿತ್ರವನ್ನು ನೋಡುವಂತೆ ರಾಜ್ಯಪಾಲರಾದ ಥಾವರ್ ಚಂದ್​ ಗೆಹ್ಲೋಟ್ ಅವರಿಗೂ ಚಿತ್ರತಂಡ ಇತ್ತೀಚೆಗೆ ಆಮಂತ್ರಣ ನೀಡಿತ್ತು. ಶೀರ್ಘದಲ್ಲಿಯೇ ರಾಜ್ಯಪಾಲರು ಸಿನಿಮಾ ವೀಕ್ಷಣೆ ಮಾಡಲಿದ್ದಾರೆ.