ಗರು ಶಿಷ್ಯರು; ಈ ಚಿತ್ರಕ್ಕಾಗಿ ಪ್ರತಿಯೊಬ್ಬರು ರಕ್ತ ಸುರಿಸಿದ್ದಾರೆ- ನಿರ್ದೇಶಕ ಜಡೇಶ್

ಗುರು ಶಿಷ್ಯರು ಸಿನಿಮಾ ನಿರ್ದೇಶಕ ಜಡೇಶ್ ಮಾತನಾಡಿ ನಮ್ಮ ಟೀಚರ್ ಮಾತು ಕಡಿಮೆ ಮಾಡು ಕೆಲ್ಸ ಜಾಸ್ತಿ ಮಾಡು ಅಂತ ಹೇಳಿದ್ರು ಅದನ್ನ ಸೀರಿಯಸ್ ಆಗಿ ತಗೊಂಡಿದ್ದೀನಿ ಅಂತ ಹೇಳಿದ್ರು. 

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನಲ್ಲಿ ಈಗ ಗುರುಶಿಷ್ಯರದ್ದೆ ಹವಾ. ಯಾರದು ಅದು ಅಂತೀರಾ ಗುರು ಶಿಷ್ಯರು ಸಿನಿಮಾದ ಬಗ್ಗೆ ಹೇಳುತ್ತಿರುವುದು. ಹೌದು, ಈ ಸಿನಿಮಾ ಸದ್ಯ ರಿಲೀಸ್ ಗೆ ರೆಡಿಯಾಗಿದೆ. ಈ ಬಾರಿ ಗುರು ಶಿಷ್ಯರಾಗಿ ತೆರೆಮೇಲೆ ಬರ್ತಿದ್ದಾರೆ ಕಾಮಿಡಿ ಅಧ್ಯಕ್ಷ ಶರಣ್. ಸದ್ಯ ಗುರು ಶಿಷ್ಯರು ಸಿನಿಮಾದ ಟ್ರೈಲರ್ ರಿಲೀಸ್ ಮಾಡಲಾಗಿದೆ. ಶಿಕ್ಷಕರ ದಿನಾಚರಣೆ ಅಂಗವಾಗಿ ಬಿಡಗಡೆಯಾದ ಗುರುಶಿಷ್ಯರು ಟ್ರೈಲರ್‌ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ಕಿಡ್ಸ್ ಕೂಡ ನಟಿಸಿದ್ದಾರೆ. ಶರಣ್ ಜೊತೆ ಪುತ್ರ, ನೆನಪಿರಲಿ ಪ್ರೇಮ್ ಪುತ್ರ, ರವಿಶಂಕರ್ ಪುತ್ರ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಖೋ ಖೋ ಆಟದ ಬಗ್ಗೆ ಇರುವ ಈ ಸಿನಿಮಾ ಈಗಾಗಲೇ ಟ್ರೈಲರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಅಂದಹಾಗೆ ಟ್ರೈಲರ್ ರಿಲೀಸ್ ಈವೆಂಟ್ ನಲ್ಲಿ ಮಾತನಾಡಿದ ನಿರ್ದೇಶಕ ನಮ್ಮ ಟೀಚರ್ ಮಾತು ಕಡಿಮೆ ಮಾಡು ಕೆಲ್ಸ ಜಾಸ್ತಿ ಮಾಡು ಅಂತ ಹೇಳಿದ್ರು ಅದನ್ನ ಸೀರಿಯಸ್ ಆಗಿ ತಗೊಂಡಿದ್ದೀನಿ ಅಂತ ಹೇಳಿದ್ರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video