ಫೆ.14ಕ್ಕೆ ಪ್ರೇಮಿಗಳಿಗೆ ಜೋಗಿ ಪ್ರೇಮ್​ ಸರ್​ಪ್ರೈಸ್; ಮ್ಯಾಜಿಕ್ ಮಾಡಿರೋ ಕೆಡಿಯ ಶಿವ ಶಿವ ಸಾಂಗ್!

ಕೆಡಿ ಚಿತ್ರದ ಶಿವ ಶಿವ ಹಾಡು ಭಾರಿ ಯಶಸ್ಸು ಕಂಡಿದ್ದು, ಚಿತ್ರತಂಡಕ್ಕೆ ಹೊಸ ಉತ್ಸಾಹ ತಂದಿದೆ. ಈ ಯಶಸ್ಸಿನಿಂದ ಪ್ರೇರಿತರಾಗಿ ನಿರ್ದೇಶಕ ಪ್ರೇಮ್ ಮತ್ತು ಧ್ರುವ ಸರ್ಜಾ ಮತ್ತೊಂದು ದೊಡ್ಡ ಯೋಜನೆಗೆ ಸಜ್ಜಾಗಿದ್ದಾರೆ.

Share this Video
  • FB
  • Linkdin
  • Whatsapp

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಾರ್ಟಿನ್​​ನಿಂದ ಮೈ ಸುಟ್ಟುಕೊಂಡಿರಬಹುದು.. ಈಗ ಕೆಡಿ ಅನ್ನೋ ಸುಗಂಧ ತೈಲವನ್ನ ಮೈಗೆ ಮೆತ್ತಿಕೊಂಡು ಊರೆಲ್ಲಾ ಸುವಾಸನೆ ಹಬ್ಬಿಸುತ್ತಿದ್ದಾರೆ. ಹೊಸ ವರ್ಷದಲ್ಲಿ ಬಂದ ಒಂದೇ ಒಂದು ಸಾಂಗ್ ಇಡೀ ಪ್ಯಾನ್ ಇಂಡಿಯಾದ ಸಿನಿ ಪ್ರೇಕ್ಷಕರನ್ನೇ ಬಡಿದೆಬ್ಬಿಸಿದೆ. ಈ ದೊಡ್ಡ ಗೆಲುವು ಕೆಡಿ ಡೈರೆಕ್ಟರ್​ ಪ್ರೇಮ್​ ಹಾಗು ಧ್ರುವಗೆ ಮತ್ತೊಂದು ಬಿಗ್ ಪ್ಲಾನ್ ಮಾಡುವಂತೆ ಪ್ರೇರೇಪಿಸಿದೆ.ಕೆಡಿ.. ಈ ವರ್ಷ ಸೂಪರ್ ಹಿಟ್ ಸಿನಿಮಾ ಆಗುತ್ತೆ ಅನ್ನೋ ದೊಡ್ಡ ನಂಬಿಕೆ ಹುಟ್ಟಿಸಿರೋ ಚಿತ್ರ. ಅದಕ್ಕೆ ಕಾರಣ ಜೆಸ್ಟ್ ಒಂದೇ ಒಂದು ಹಾಡು. ಅದು ಪ್ರೇಮ್ ಕಲ್ಪನೆಯ ಶಿವ ಶಿವ ಸಾಂಗ್.ಒಂದ್​ ಕಡೆ ಕೆಡಿ ಶಿವ ಶಿವ ಹಾಡಿನ ವೈಭವ.. ಇದು ಡೈರೆಕ್ಟರ್ ಪ್ರೇಮ್​ಗೆ ಭಾರಿ ಎನರ್ಜಿ ತಂದುಕೊಟ್ಟಿದೆ. ಪ್ರೇಮ್ ಸಿನಿಮಾಗಳಲ್ಲಿ ಹಾಡುಗಳ ಹಬ್ಬ ಹೈ ಪಿಚ್​​​ನಲ್ಲಿರುತ್ತೆ ಅನ್ನೋದು ಹೊಸದಾಗೇನು ಹೇಳ್ಬೇಕಿಲ್ಲ. ಈಗ ಇದೇ ನಂಬಿಕೆ ಮೇಲೆ ಕೆಡಿ ಟೀಂ ಮತ್ತೊಂದು ಫೆಸ್ಟಿವೆಲ್​​ಗೆ ಸಜ್ಜಾಗಿದೆ.

ಈ ವರ್ಷ ದರ್ಶನ್ ನೆಚ್ಚಿನ ಕುದುರೆ ಕಿಚ್ಚು ಹಾಯಿಸಿದ್ದು ಇವರೇ; ವಿಡಿಯೋ ವೈರಲ್

Related Video