ಜಾಮೀನಿನ ಮೇಲೆ ಬಿಡುಗಡೆಯಾದ ದರ್ಶನ್, ತೋಟದ ಮನೆಯಲ್ಲಿ ಕುಟುಂಬ ಸಮೇತರಾಗಿ ಹೊಸ ವರ್ಷ ಮತ್ತು ಸಂಕ್ರಾಂತಿ ಆಚರಿಸಿದರು. ಪಾಂಡವಪುರ, ಮೈಸೂರಿನ ದೇವಾಲಯಗಳಿಗೆ ಭೇಟಿ ನೀಡಿದರು. ಸಹೋದರ ದಿನಕರ್ ದರ್ಶನ್ ಜೊತೆ ಸಂಬಂಧ ಸುಧಾರಿಸಿಕೊಂಡು, ಅವರ ಕುದುರೆಗೆ ಕಿಚ್ಚು ಹಾಯಿಸಿದರು. ದರ್ಶನ್ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ಜೈಲು ಸೇರಿದ್ದ ದರ್ಶನ್ ಜಾಮೀನು ಪಡೆದು ಹೊರ ಬಂದಿದ್ದಾರೆ. ವೈದ್ಯರ ಸಲಹೆ ಮೇಲೆ ತೋಟ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ದರ್ಶನ್ ಹೊರ ಬಂದ ಮೇಲೆ ಹೊಸ ವರ್ಷ ಮತ್ತು ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ. ಸುಮಾರು 7 ತಿಂಗಳ ನಂತರ ಹಬ್ಬ ಬಂದಿರುವ ಕಾರಣ ಫ್ಯಾಮಿಲಿ ಸಮೇತರಾಗಿ ತೋಟದ ಮನೆಯಲ್ಲಿ ಅದ್ಧೂರಿಯಾಗಿ ಆಚರಿಸಿದರ ಜೊತೆಗೆ ಟೆಂಪಲ್ ರನ್ ಮಾಡಿದ್ದಾರೆ. ಪಾಂಡವರಪುರದಲ್ಲಿ ಇರುವ ಅಹಲ್ಯ ದೇವಿ ಹಾಗೂ ಮೈಸೂರು ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. 

ಹಬ್ಬದ ದಿನ ದರ್ಶನ್ ತೋಟದ ಮನೆಯಲ್ಲಿ ನೂರಾರು ಜನರು ಸೇರಿದ್ದಾರೆ. ದರ್ಶನ್ ತಮ್ಮ ಸಹೋದರ ದಿನಕರ್‌ ಜೊತೆ ಸಣ್ಣ ಕಾರಣದಿಂದ ಮಾತು ನಿಲ್ಲಿಸಿಬಿಟ್ಟಿದ್ದರು. ಆದರೆ ದರ್ಶನ್ ಕಷ್ಟದಲ್ಲಿ ಇರುವುದನ್ನು ನೋಡಲಾರೆದ ದಿನಾಕರ್ ಮಾತನಾಡಿಸಲು ಮುಂದಾಗುತ್ತಾರೆ. ಜೊತೆ ದರ್ಶನ್‌ಗೆ ಜಾಮೀನು ಕೊಡಿಸಲು ಅತ್ತಿಗೆ ವಿಜಯಲಕ್ಷ್ಮಿ ಜೊತೆ ತುಂಬಾ ಓಡಾಡಿದ್ದಾರೆ. ಹೀಗಾಗಿ ಈ ವರ್ಷ ದರ್ಶನ್ ತಮ್ಮ ಫ್ಯಾಮಿಲಿ ಜೊತೆ ಹಬ್ಬ ಆಚರಿಸಿದ್ದಾರೆ. ದಿನಾಕರ್ ತಮ್ಮ ಪತ್ನಿ ಮತ್ತು ಮಕ್ಕಳ ಜೊತೆ ಆಗಮಿಸಿದ್ದಾರೆ. ದರ್ಶನ್‌ಗೆ ಬೆನ್ನು ನೋವು ಇರುವ ಕಾರಣ ತಮ್ಮ ಪ್ರಾಣಿಗಳಿಗೆ ಕಿಚ್ಚು ಹಾಯಿಸುವುದನ್ನು ಯಾರು ಮಾಡಿದರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ....

ಫಾರಿನ್ ಬೆಕ್ಕು ಮುದ್ದು ಮಾಡುತ್ತಿರುವ ವಿಜಯಲಕ್ಷ್ಮಿ ದರ್ಶನ್: ಫೋಟೋ ವೈರಲ್

ಹೌದು! ದರ್ಶನ್‌ ತೋಟದ ಮನೆಯಲ್ಲಿ ಸಾಕಿರುವ ಹಸು, ಎತ್ತು ಮತ್ತು ಕರಗಳು ಕಿಚ್ಚ ಹಾಯಿಸುವುದನ್ನು ಸ್ನೇಹಿತರು ಮತ್ತು ಆಪ್ತರು ಮಾಡಿದ್ದಾರೆ. ಆದರೆ ದರ್ಶನ್ ನೆಚ್ಚಿನ ಕುದುರೆಯ ಕಿಚ್ಚ ಹಾಯಿಸಿದ್ದು ಮಾತ್ರ ಸಹೋದರ ದಿನಾಕರ್. ಸಾರಥಿ ಸಿನಿಮಾದಲ್ಲಿ ದರ್ಶನ್ ಬಳಸಿರುವುದು ಪರ್ಸನಲ್ ಕುದುರೆ, ಹಲವು ವರ್ಷಗಳಿಂದ ದರ್ಶನ್ ಸಾಕುತ್ತಿರುವ ಕುದುರೆ ಇದಾಗಿದ್ದು ಯಾರು ಹೆಚ್ಚಿಗೆ ಮುಟ್ಟುವುದಾಗಲಿ ಬಳಸುವುದಾಗಲಿ ಮಾಡುವುದಿಲ್ಲ. ದರ್ಶನ್ ಮತ್ತು ಮಗ ವಿನೀಶ್ ಮಾತ್ರ ಕುದುರೆಯನ್ನು ಪಳಗಿಸುವುದು ಆದರೆ ಈಗ ದಿನಕರ್ ಬಳಿ ಕುದುರೆ ಇರುವುದನ್ನು ನೋಡಿ ಫ್ಯಾನ್ಸ್ ಸಂತಸ ವ್ಯಕ್ತ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹಾಯಿಸುತ್ತಿರುವ ಫೋಟೋ ಮತ್ತು ವಿಡಿಯೋ ಸಖತ್ ವೈರಲ್ ಆಗುತ್ತಿದೆ. 

ಹಲವು ವರ್ಷಗಳ ನಂತರ ಸಹೋದರನ ಜೊತೆ ಸಂಕ್ರಾಂತಿ ಆಚರಿಸಿದ ದರ್ಶನ್; ಫೋಟೋ ವೈರಲ್

ಇನ್ನು ಕಿಚ್ಚು ಹಾಯಿಸುವುದು ಮುಗಿದ ಮೇಲೆ ದರ್ಶನ್ ತಮ್ಮ ಫ್ಯಾಮಿಲಿ ಜೊತೆ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ಈ ವೇಳೆ ಅಭಿಮಾನಿಗಳು ಮಾತನಾಡಿಸಲು ಅಡ್ಡ ಬಂದರು ಎಂದು ಕಾರು ನಿಲ್ಲಿಸಿ ಮಾತನಾಡಿಸಿದ್ದಾರೆ. ಹಾಗೂ ದಾರಿಯಲ್ಲಿ ಅಭಿಮಾನಿಯೊಬ್ಬರ ಕೈಗೆ ಪೆಟ್ಟು ಬಿದ್ದಿರುವುದನ್ನು ನೋಡಿ ಏನಾಗಿತ್ತು ಎಂದು ವಿಚಾರಿಸಿದ್ದಾರೆ. 

ದೊಡ್ಡಮ್ಮ ಬೆಂಕಿ ಹಾಕೊಂಡಾಗ ದರ್ಶನ್ ಬಂದು ನಮ್ಗೆ ಸಹಾಯ ಮಾಡಿದ್ದು; ಯಾರಿಗೂ ಗೊತ್ತಿರದ ಸತ್ಯ ಹೇಳಿದ ರಕ್ಷಿತಾ

View post on Instagram