ಮಾರ್ಟಿನ್‌ನಲ್ಲಿ ಧ್ರುವ ಸರ್ಜಾ ಹೀರೋನಾ ವಿಲನ್ನಾ?: ಕೆಜಿಎಫ್ ದಾಖಲೆ ಮುರಿಯುತ್ತಾ ಪ್ಯಾನ್ ಇಂಡಿಯಾ ಸಿನಿಮಾ?
ಸ್ಯಾಂಡಲ್‌ವುಡ್ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ಗೆ ಸಜ್ಜಾಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಕುತೂಹಲ ಮೂಡಿಸಿದೆ. ಅಕ್ಟೋಬರ್ 11ಕ್ಕೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.
ಸ್ಯಾಂಡಲ್‌ವುಡ್ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ಗೆ ಸಜ್ಜಾಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಕುತೂಹಲ ಮೂಡಿಸಿದೆ. ಅಕ್ಟೋಬರ್ 11ಕ್ಕೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ವರ್ಕ್ ಭರದಿಂದ ಸಾಗುತ್ತಿದೆ. ಶೀಘ್ರದಲ್ಲೇ ಸಿನಿಮಾ ಪ್ರಚಾರಕ್ಕೆ ಚಾಲನೆ ಕೊಡಲು ಸಿದ್ಧತೆ ನಡೀತಿದೆ. ಧ್ರುವ ಸರ್ಜಾ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್. ಮುಂಬೈನಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಗೋಷ್ಠಿ ನಡೆಸಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಎ. ಪಿ ಅರ್ಜುನ್ ನಿರ್ದೇಶನದ ಆಕ್ಷನ್ ಎಂಟರ್ಟೈನರ್ ಚಿತ್ರಕ್ಕೆ ಉದಯ್ ಕೆ ಮೆಹ್ತಾ ಬಂಡವಾಳ ಹೂಡಿದ್ದಾರೆ.
ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಮಾರ್ಟಿನ್' ಸಿನಿಮಾ ಮೂಡಿ ಬರಲಿದೆ. ಕಳೆದ ವರ್ಷ ಬಂದಿದ್ದ ಟೀಸರ್ ಹಿಟ್ ಆಗಿತ್ತು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ 'ಮಾರ್ಟಿನ್' ಟೀಸರ್ ಬಿಡುಗಡೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಪರಭಾಷಾ ಪತ್ರಕರ್ತರನ್ನು ಆಹ್ವಾನಿಸಲಾಗಿತ್ತು. ಇದೀಗ ಮುಂಬೈ ಸುದ್ದಿಗೋಷ್ಠಿ ವಿದೇಶದ ಮಾಧ್ಯಮದವರನ್ನು ಕರೆಸುವ ಪ್ರಯತ್ನ ನಡೀತಿದೆ. ಇನ್ನು ಚಿತ್ರದಲ್ಲಿ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಾರ್ಟಿನ್ ಟೀಸರ್ ಭರ್ಜರಿ ದಾಖಲೆ ಬರೆದಿದ್ದು ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿದ್ದು ಕೆಜಿಎಫ್ ದಾಖಲೆಯನ್ನು ಸರಿಗಟ್ಟುತ್ತಾ ಎಂಬ ಚರ್ಚೆ ಫ್ಯಾನ್ಸ್ ಬಳಗದಲ್ಲಿ ನಡೆಯುತ್ತಿದೆ.
ಇನ್ನು ಟೀಸರ್ ಬಳಿಕ ಟ್ರೈಲರ್, ಸಾಂಗ್ ಬಿಡುಗಡೆ ಮಾಡುವ ಬಗ್ಗೆ ಚಿತ್ರತಂಡ ಪೋಲ್ ನಡೆಸಿತ್ತು. ಅಭಿಮಾನಿಗಳು ಮುಂದೆ ಯಾವ ಕಂಟೆಂಟ್ ರಿಲೀಸ್ ಮಾಡಬೇಕು ಎಂದು ನಿರ್ಧರಿಸುವ ಅವಕಾಶ ನೀಡಲಾಗಿತ್ತು. 'ಮಾರ್ಟಿನ್' ಚಿತ್ರತಂಡ ನಡೆಸಿದ ಪೋಲ್ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. 60 ಲಕ್ಷಕ್ಕೂ ಹೆಚ್ಚು ಜನ ವೋಟ್ ಮಾಡಿದ್ದಾರೆ. 46% ರಷ್ಟು ಜನ ಟ್ರೈಲರ್ ಬಿಡುಗಡೆ ಮಾಡುವಂತೆ ಕೇಳಿದ್ದಾರೆ. 33% ರಷ್ಟು ಇಂಟ್ರೊಡಕ್ಷನ್ ಸಾಂಗ್ ಕೇಳಿದ್ರೆ, 11% ರಷ್ಟು ಮಂದಿ ಥಿಯೇಟ್ರಿಕಲ್ ಟ್ರೈಲರ್ ರಿಲೀಸ್ ಮಾಡಿ ಎಂದಿದ್ದಾರೆ. ಅಭಿಮಾನಿಗಳ ಆಸೆಯಂತೆ 'ಮಾರ್ಟಿನ್' ಜುಲೈ 28ಕ್ಕೆ ಟ್ರೈಲರ್ ರಿಲೀಸ್ ಮಾಡುವ ಪ್ರಯತ್ನ ಶುರುವಾಗುತ್ತಿದೆ.
240 ದಿನಗಳ ಕಾಲ 'ಮಾರ್ಟಿನ್' ಸಿನಿಮಾ ಚಿತ್ರೀಕರಣ ಮಾಡಲಾಗಿತ್ತು. ಗ್ರಾಫಿಕ್ಸ್ ಕೆಲಸಗಳು ಸಾಕಷ್ಟು ಇದೆ. ಇನ್ನು ಚಿತ್ರದ ಹಾಡುಗಳಿಗೆ ಮಣಿಶರ್ಮ ಟ್ಯೂನ್ ಹಾಕಿದ್ದಾರೆ. 'ಪೊಗರು' ಬಳಿಕ ಧ್ರುವ ಸರ್ಜಾ 'ಮಾರ್ಟಿನ್' ಚಿತ್ರದಲ್ಲಿ ನಟಿಸಿದ್ದಾರೆ. 3 ವರ್ಷಗಳ ಬಳಿಕ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಸುಕೃತಾ ವಾಗ್ಲೆ, ಸಾಧು ಕೋಕಿಲ, ಮಾಳವಿಕಾ ಅವಿನಾಶ್, ಚಿಕ್ಕಣ್ಣ, ನವಾಬ್ ಶಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸತ್ಯಾ ಹೆಗಡೆ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ. ಉದಯ್ ಮೆಹ್ತಾ ನಿರ್ಮಾಣದ ಚಿತ್ರಕ್ಕೆ ಸಿನಿಮಾ ಪ್ರೇಕ್ಷಕನಿಂದ ಎಂಥಾ ರೆಸ್ಪಾನ್ಸ್ ಸಿಗುತ್ತೋ ಕಾದು ನೊಡಬೇಕು.