ರೇಣುಕಾಸ್ವಾಮಿ ಕುಟುಂಬದ ಸಹಾಯಕ್ಕೆ ನಿಂತ ಧ್ರುವ ಸರ್ಜಾ ಅಭಿಮಾನಿಗಳು!

ದರ್ಶನ್‌ ಮತ್ತು ಗ್ಯಾಂಗ್‌ನಿಂದ ಕೊಲೆಯಾದ ರೇಣುಕಾಸ್ವಾಮಿ ಕುಟುಂಬಕ್ಕೆ ಧ್ರುವ ಸರ್ಜಾ ಅಭಿಮಾನಿಗಳು ಸಹಾಯ ಮಾಡಿದ್ದಾರೆ. 
 

First Published Jun 28, 2024, 9:01 AM IST | Last Updated Jun 28, 2024, 9:02 AM IST

ದರ್ಶನ್ ಅಂಡ್ ಗ್ಯಾಂಗ್ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ನೀಡಿ ಕೊಲೆ(Renukaswamy murder case) ಮಾಡಿರುವ ಘಟನೆ ನಡೆದು ಅವರು ಜೈಲೂಟ ಮಾಡುತ್ತಿದ್ದಾರೆ. ದರ್ಶನ್(Darshan) ಗೆಳತಿ ಪವಿತ್ರ ಗೌಡಾಗೆ ಅಶ್ಲೀಲ ಮೆಸೇಜ್ ಕಳಿಸಿದ್ದಾರೆಂಬ ಕಾರಣಕ್ಕೆ ದರ್ಶನ್ ಮತ್ತು ಗೆಳೆಯರು ಅಮಾನುಷವಾಗಿ ಹಿಂಸೆ ನೀಡಿ ರೇಣುಕಾಸ್ವಾಮಿ ಕೊಲೆಗೈದಿದ್ದರು. ಇದೀಗ ತನಿಖೆ ಮುಂದುವರೆದಿದ್ದು, ದರ್ಶನ್ ಮತ್ತು ಸಹಚರರು ಕಂಬಿ ಎಣಿಸುತ್ತಿದ್ದಾರೆ. ಆದರೆ ರೇಣುಕಾಸ್ವಾಮಿ ತಂದೆ ತಾಯಿಗೆ ವಯಸ್ಸಾಗಿದೆ. ರೇಣುಕಾಸ್ವಾಮಿ 5 ತಿಂಗಳ ಗರ್ಭಿಣಿ. ಮನೆಯಲ್ಲಿ ದುಡಿಯೋ ಮಗನನ್ನು ಕಳೆದುಕೊಂಡು ಇಡಿ ಕುಟುಂಬ ನಿಸ್ಸಾಹಾಯಕರಾಗಿದ್ದಾರೆ. ಇದನ್ನು ಮಾಧ್ಯಮಗಳಿಂದ ತಿಳಿದುಕೊಳ್ಳುತ್ತಿದ್ದಂತೆ ರೇಣುಕಾಸ್ವಾಮಿ ಕುಟುಂಬಕ್ಕೆ(Renukaswamy family) ಸಹಾಯಕ್ಕೆನಿಂತಿದ್ದಾರೆ ರಾಜಕಾರಣಿಗಳು, ಸಾರ್ವಜನಿಕರು, ಉದ್ಯಮಿಗಳು ಮತ್ತು ಕಲಾವಿದರು. ಇತ್ತೀಚೆಗಷ್ಟೆ ಕನ್ನಡ ಚಲನಚಿತ್ರ ವಾನಿಣ್ಯ ಮಂಡಳಿ 5 ಲಕ್ಷ ಧನಸಹಾಯ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ಬಂದಿದೆ. ರಾಜ್ಯ ಸರ್ಕಾರವೂ ಸಹಾಯ ನೀಡುವುದಾಗಿ ಭರವಸೆ ನೀಡಿದೆ. ಇದೆ ಹಿನ್ನೆಲೆ ನಟ ಧ್ರುವ ಸರ್ಜಾ(Dhruva Sarja) ಅಭಿಮಾನಿಗಳು (Fans)ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡಲು ಮುಂದಾಗಿದ್ದಾರೆ.

ಇದನ್ನೂ ವೀಕ್ಷಿಸಿ:  Rain in Karnataka: ಮಳೆಯ ನೀರಲ್ಲಿ ವಾಹನ ಸವಾರರ ಪರದಾಟ..! ನಿದ್ರೆಯಲ್ಲೇ ಇದ್ದಾಗಲೇ ಸಮಾಧಿಯಾದ ಅಮಾಯಕರು..!

Video Top Stories