Asianet Suvarna News Asianet Suvarna News

Rain in Karnataka: ಮಳೆಯ ನೀರಲ್ಲಿ ವಾಹನ ಸವಾರರ ಪರದಾಟ..! ನಿದ್ರೆಯಲ್ಲೇ ಇದ್ದಾಗಲೇ ಸಮಾಧಿಯಾದ ಅಮಾಯಕರು..!

ಮುಂದಾಗಲಿರೋ ಅವಾಂತರದ ಸೂಚನೆ ಕೊಡ್ತಿದ್ದಾನಾ ಮಳೆರಾಯ..?
ಅನೇಕ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
ಮಳೆಯನ್ನೇ ನಂಬಿಕೊಂಡ ರೈತನಿಗೆ ಮರುಜೀವ ಕೊಟ್ಟ ಮಳೆರಾಯ..!

ಮಳೆರಾಯ ಇನ್ನೂ ಒಂದೆರಡು ಹೆಜ್ಜೆಯನ್ನ ಅಷ್ಟೇ ಇಟ್ಟಿದ್ದಾನೆ. ಆಗಲೇ ಕರಾವಳಿ ಭಾಗದಲ್ಲಿ(Coastel areas) ಅಲ್ಲೋಲ ಕಲ್ಲೋಲ ಶುರು ಆಗಿಬಿಟ್ಟಿದೆ. ಕ್ಷಣಮಾತ್ರದಲ್ಲಿ ಕಣ್ಣೇದುರೇ ಗುಡ್ಡ ಕುಸಿತಿದೆ. ನಿಂತ ನೆಲ ನಡಗುತ್ತಿದೆ. ಕರಾವಳಿ ಭಾಗ ಅಕ್ಷರಶಃ ದ್ವೀಪದ ರೂಪ ಪಡೆದುಕೊಂಡಿದೆ. ಇಷ್ಟು ದಿನ ಬರಗಾಲದಿಂದ ಕಂಗೆಟ್ಟ ಜನ, ಹುಯ್ಯೋ ಹುಯ್ಯೋ ಮಳೆರಾಯ (Rain) ಅಂತ ಜನ, ಚಿತ್ರ ವಿಚಿತ್ರ ಪೂಜೆ ಮಾಡಿದ್ದೋ ಮಾಡಿದ್ದು. ಅಷ್ಟೇ ಅಲ್ಲ ದೇವಸ್ಥಾನಗಳಲ್ಲೂ ಹೋಮ ಹವನ ಮಾಡಿ ವರುಣನ ಆಗಮನ ಬೇಗ ಆಗಲಿ ಅಂತ ಪರಿಪರಿಯಾಗಿ ಬೇಡಿಕೊಂಡರು. ಈಗ ರೈತನ(Farmers) ಮೊರೆ ಕೇಳಿ ವರುಣ ಧರೆಗೆ ಎಂಟ್ರಿ ಕೊಟ್ಟಿದ್ದಾನೆ. ಅದು ಕೂಡ ಅಂತಿಂಥ ಎಂಟ್ರಿ ಅಲ್ಲ.. ಅಬ್ಬರಿಸಿ ಬೊಬ್ಬರಿಯುತ್ತಾ ಬಂದಿದ್ದಾನೆ. ಅದರ ಎಫೆಕ್ಟ್ ಹೇಗಿದೆ ಅಂದ್ರೆ ಜೂನ್ ತಿಂಗಳ ಮೊದಲ ಮಳೆಗೆನೇ ಕರಾವಳಿ ತತ್ತರಿಸಿ ಹೋಗಿದೆ. ಈಗ ಕಣ್ಣಾಡಿಸಿದ್ದಲ್ಲೆಲ್ಲ ನೀರೋ ನೀರು. ಜನ ಹೊರಗೆ ಬರಲೂ ಆಗದೇ ಮನೆಯ ಒಳಗೂ ಇರಲು ಆಗದೇ ಪರದಾಡ್ತಿದ್ದಾರೆ.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ನೀರಿನ ಸಾಂಕ್ರಾಮಿಕ ಬಾಧೆ ಕಾಡಲಿದ್ದು, ವೃತ್ತಿಯಲ್ಲಿ ಅನುಕೂಲವಿದೆ..

Video Top Stories