ಮನೆ ದೇವರ ಜಾತ್ರೆಯಲ್ಲಿ ಧ್ರುವ ..! ಜಕ್ಕೇನಹಳ್ಳಿ ಜಾತ್ರೆಯಲ್ಲಿ ಆ್ಯಕ್ಷನ್ ಪ್ರಿನ್ಸ್ ಜೊತೆ ಕುಟುಂಬ !

ಈಗ ಯಾವ್ ಊರಿಗೆ ಹೋಗಿ ಅಲ್ಲಿ ಊರ ಹಬ್ಬ, ಊರ ಜಾತ್ರೆ, ಮನೆ ದೇವರ ಜಾತ್ರೆ ಅಂತ ಜನ ಫುಲ್ ಬ್ಯುಸಿ ಆಗಿರ್ತಾರೆ. ನಮ್ ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಧ್ರುವ ಸರ್ಜಾ ಕೂಡ ಇದೇ ಮನೆ ದೇವರ ಜಾತ್ರೆಯಲ್ಲಿ ಬ್ಯುಸಿಯಾಗಿದ್ದಾರೆ. 

First Published Mar 26, 2024, 10:21 AM IST | Last Updated Mar 26, 2024, 10:22 AM IST

ಧ್ರುವ ಸರ್ಜಾ ಆಂಜನೇಯನ ಪರಮ ಭಕ್ತ. ಎಲ್ಲೇ ಮಾತಾಡಿದ್ರು ಕೊನೆಯಲ್ಲಿ ಜೈ ಆಂಜನೇಯ ಅನ್ನೋ ಧ್ರುವ(Druva Sarja) ಈಗ ತನ್ನ ಮನೆ ದೇವರು ನರಸಿಂಹನ ಜಾತ್ರೆಗೆ ಇಡೀ ಫ್ಯಾಮಿಲಿ ಜತೆ ಭೇಟಿ ಕೊಟ್ಟಿದ್ದಾರೆ. ತುಮಕೂರು(Tumakuru)ಜಿಲ್ಲೆ ಮದುಗಿರಿ ತಾಲೂಕಿನ ಜಕ್ಕೇನಹಳ್ಳಿಯಲ್ಲಿ ನಡೆಯೋ ಅದ್ಧೂರಿ ಜಾತ್ರಾ ಮಹೋತ್ಸವನ್ನ ಧ್ರುವ ಕುಟುಂಬದ ಜೊತೆ ನಟ ಅರ್ಜುನ್ ಸರ್ಜಾ(Arjun Sarja) ಕೂಡ ಹೋಗಿದ್ದಾರೆ. ನಟ ಧ್ರುವ ಹಾಗು ಅರ್ಜುನ್ ಸರ್ಜಾ ನರಸಿಂಹ ಸ್ವಾಮಿಯ ತೇರು ಎಳೆದಿದ್ದಾರೆ. ಜಾತ್ರೆ ಅಂದ್ರೇನೆ ಜನ. ಇನ್ನು ಆ ಜಾತ್ರೆಗೆ ನಟ ಧ್ರುವ ಸರ್ಜಾ ಬರುತ್ತಾರೆ ಅಂದ್ರೆ ಕೇಳಬೇಕಾ..? ಜನ ಸಾಗರ ಅಲ್ಲಿ ಸೇರಿತ್ತು. ನಟ ಧ್ರುವ ಸರ್ಜಾ ಅರ್ಜುನ್ ಅರ್ಜಾರನ್ನ ನೋಡೋಕೆ ಮುಗಿ ಬಿದ್ದಿದ್ರು. ಜಕ್ಕೇನಹಳ್ಳಿಯ(Jakkenahalli)ನರಸಿಂಹನ ಸ್ವಾಮಿ ಜಾತ್ರೆಗೆ ಧ್ರುವ ಪ್ರತಿ ವರ್ಷ ಹೋಗುತ್ತಾರೆ. ಈ ಭಾರಿ ಕೂಡ ಧ್ರುವ ಜಾತ್ರೆಗೆ ಹೋಗಿದ್ದಾರೆ. ಆದ್ರೆ ದೇವಸ್ಥಾನದ ಒಳಗೆ ಹೋಗೋಕೆ ಧ್ರುವ ಹರ ಸಾಹಸ ಪಟ್ಟಿದ್ರು. ಅಂತು ಹಂಗೋ ಹಿಂಗೋ ಮಾಡಿ ಧ್ರುವ ಮನೆ ದೇವರ ದರ್ಶನ ಪಡೆದು ತೇರು ಎಳೆದ ನಟಸಿಂಹ ಕೃಪೆಗೆ ಪಾತ್ರರಾದ್ರು.

ಇದನ್ನೂ ವೀಕ್ಷಿಸಿ:  Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ?

Video Top Stories