Asianet Suvarna News Asianet Suvarna News

ಧ್ರುವ-ಪ್ರೇಮ್ ಸಿನಿಮಾದ ಟೈಟಲ್ ಅನಾವರಣಕ್ಕೆ ವೇದಿಕೆ ಸಿದ್ಧ

ಸ್ಯಾಂಡಲ್ ವುಡ್‌ನ ಯೂತ್ ಐಕಾನ್ ಧ್ರುವ ಸರ್ಜಾ ಫ್ಯಾನ್ಸ್ ಈ ಭಾರಿ ದಸರಾ ಹಬ್ಬವನ್ನ ಅದ್ಧೂರಿಯಾಗಿ ಆಚರಿಸೋದಕ್ಕೆ ಪ್ಲಾನ್ ಮಾಡಿಕೊಳ್ಳೋದು ಒಳ್ಳೆಯದು. ಯಾಕಂದ್ರೆ ಅದ್ಧೂರಿ ಹುಡುಗ ದಸರಾ ಹಬ್ಬಕ್ಕೆ ಅಂತನೇ ಬೊಂಬಾಟ್ ಟ್ರೀಟ್ ಒಂದನ್ನ ರೆಡಿ ಮಾಡಿದ್ದಾರೆ. ಆ ಸೂಪರ್ ಸರ್ಪ್ರೈಸ್ ದಸರಾ ಹಬ್ಬದ ಆಯುಧ ಪೂಜೆ ದಿನ ರಿವೀಲ್ ಆಗ್ತಿದೆ.

ಸ್ಯಾಂಡಲ್ ವುಡ್‌ನ ಯೂತ್ ಐಕಾನ್ ಧ್ರುವ ಸರ್ಜಾ ಫ್ಯಾನ್ಸ್ ಈ ಭಾರಿ ದಸರಾ ಹಬ್ಬವನ್ನ ಅದ್ಧೂರಿಯಾಗಿ ಆಚರಿಸೋದಕ್ಕೆ ಪ್ಲಾನ್ ಮಾಡಿಕೊಳ್ಳೋದು ಒಳ್ಳೆಯದು. ಯಾಕಂದ್ರೆ ಅದ್ಧೂರಿ ಹುಡುಗ ದಸರಾ ಹಬ್ಬಕ್ಕೆ ಅಂತನೇ ಬೊಂಬಾಟ್ ಟ್ರೀಟ್ ಒಂದನ್ನ ರೆಡಿ ಮಾಡಿದ್ದಾರೆ. ಆ ಸೂಪರ್ ಸರ್ಪ್ರೈಸ್ ದಸರಾ ಹಬ್ಬದ ಆಯುಧ ಪೂಜೆ ದಿನ ರಿವೀಲ್ ಆಗ್ತಿದೆ. ಬಹದ್ದೂರ್ ಗಂಡು ಧ್ರುವ ಸರ್ಜಾ ದಿ ಶೋ ಮ್ಯಾನ್ ಪ್ರೇಮ್ಕಾಂಬಿನೇಷನ್ ನಲ್ಲಿ ಸಿನಿಮಾ ಬರುತ್ತಿದೆ ಅಂತ ಅನೌನ್ಸ್ ಆದಾಗ್ಲೆ ಆಕ್ಷನ್ ಪ್ರಿನ್ಸ್ ಫ್ಯಾನ್ಸ್ ಹಾಗು ಪ್ರೇಮ್ ಫಾಲೋವರ್ಸ್ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ರು. ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ಫಸ್ಟ್ ಕಾಂಬಿನೇಷನ್ ಆಗಿರೋದ್ರಿಂದ ಸಿನಿಮಾ ಕ್ಯೂರಿಯಾಸಿಟಿ ಹುಟ್ಟಿದೆ. ಆದ್ರೆ ಪ್ರೇಮ್ ಸಿನಿಮಾದ ಟೈಟಲ್ ಬಗ್ಗೆ  ಚಿಕ್ಕದೊಂದು ಸುಳಿವು ಕೂಡ ಬಿಟ್ಟುಕೊಡಲಿಲ್ಲ. ಇದೀಗ ಪ್ರೇಮ್ ದಸರಾ ಹಬ್ಬದ ಆಯುಧ ಪೂಜೆ ದಿನ ಧ್ರುವನ ಸಿನಿಮಾದ ಟೈಟಲ್ ಟೀಸರ್ ರಿವಿಲ್ ಮಾಡೋದಾಗಿ ಅನೌನ್ಸ್ ಮಾಡಿದ್ದಾರೆ. ಭರ್ಜರಿ ಹುಡುಗ ಧ್ರುವ ಸರ್ಜಾ ಹಾಗು ಪ್ರೇಮ್ ಕಾಂಬಿನೇಷನ್ ಸಿನಿಮಾದಲ್ಲಿ ಸಂಗೀತ ಸುಧೆ ಹರಿಸೋದು ಮ್ಯೂಸಿಕ್ ಮಾಂತ್ರಿಕಾ ಅರ್ಜುನ್ ಜನ್ಯ.. ಅರ್ಜುನ್ ಜನ್ಯ ಪ್ರೇಮ್ರ ಫೇವರಿಟ್ ಮ್ಯೂಸಿಕ್ ಡೈರೆಕ್ಟರ್ ಕೂಡ ಹೌದು. ಈಗ ಅರ್ಜುನ್ ಜನ್ಯ ಮತ್ತು ಪ್ರೇಮ್ ಮುಂಬೈನಲ್ಲಿದ್ದು ಸಿನಿಮಾದ ಟೈಟಲ್ ಟೀಸರ್ ರಿವೀಲ್ಗೆ ಬೇಕಾದ ಮ್ಯೂಸಿಕ್ಅನ್ನ ರೆಡಿ ಮಾಡುತ್ತಿದ್ದಾರೆ. ಅಕ್ಟೋಬರ್ 04ರಂದು ಈ ಟೈಟಲ್ ಟೀಸರ್ ಹೊರ ಬರಲಿದೆ. 

Video Top Stories