Asianet Suvarna News Asianet Suvarna News

ಯಾರಾಗ್ತಾರೆ ಕೆಂಪೇಗೌಡ..? ಉಪ್ಪೀನಾ..? ಡಾಲಿನಾ..? ಯಾರ ಪಾಲಾಯ್ತು ಟೈಟಲ್..?

ನಾಡ ಪ್ರಭು ಕೆಂಪೇಗೌಡರ ಸಿನಿಮಾ ಮಾಡೋಕೆ ಸ್ಯಾಂಡಲ್‌ವುಡ್‌ನಲ್ಲಿ ಎರಡು ಚಿತ್ರತಂಡಗಳಿಂದ ಬಾರೀ ಪೈಪೋಟಿ ನಡೆದಿದೆ. ಸುದೀಪ್‌ ನಂತರ ಇದೀಗ ಇನ್ನಿಬ್ಬರು ಸ್ಟಾರ್‌ಗಳ ನಡುವೆ ಕೆಂಪೇಗೌಡ ಸಿನಿಮಾಗಾಗಿ ಪೈಪೋಟಿ ನಡೆದಿದೆ. 

ದಶಕದಿಂದ ಕನಸಾಗೇ ಉಳಿದಿದ್ದ ಕೆಂಪೇಗೌಡರ ಇತಿಹಾಸ ಆಧಾರಿತ ಸಿನಿಮಾವೊಂದರ ಮುಹೂರ್ತ ಆಗ್ಬೇಕಿತ್ತು. ಆದ್ರೆ 2 ತಂಡಗಳ ಈ ಟೈಟಲ್ ವಾರ್‌ನಿಂದ ಕೆಂಪೇಗೌಡರ ಹೆಸರು ಕೋರ್ಟ್ ಮೆಟ್ಟಿಲು ಹತ್ತುವಂತಾಯ್ತು. ಒಂದೆಡೆ ಡಾಲಿ ಧನಂಜಯ್ ಹಾಗೂ ಕಿರಣ್ ತೋಟಂಬೈಲು ಕಾಂಬಿನೇಷನ್‌ನ ನಾಡಪ್ರಭು ಕೆಂಪೇಗೌಡ ಸಿನಿಮಾ, ಇನ್ನೊಂದೆಡೆ, ಉಪೇಂದ್ರ (Upendra) ಹಾಗೂ ಟಿ.ಎಸ್ ನಾಗಭರಣ್ (TS Nagabharan) ಕಾಂಬಿನೇಷನ್‌ನ ಧರ್ಮಬೀರು ನಾಡಪ್ರಭು ಕೆಂಪೇಗೌಡ(Dharmabeeru Nadaprabhu Kempegowda) ನಡುವೆ ಶುರುವಾಗಿದ್ದ ಟೈಟಲ್ ವಾರ್‌ಗೆ ಕೋರ್ಟ್‌ನಲ್ಲಿ ಫುಲ್‌ಸ್ಟಾಪ್ ಬಿದ್ದಿದೆ. ಕೆಂಪೇಗೌಡ ಟೈಟಲ್ ವಾರ್ ಆರಂಭ ದಿಂದಲೂ ನಡಿಯುತ್ತಲೆ ಇದೆ. ಟಿ.ಎಸ್.ನಾಗಾಭರಣ್‌ರಿಂದ ನಾಡಪ್ರಭು ಕೆಂಪೇಗೌಡ ಸಿನಿಮಾ ಮೊದಲಿಗೆ ಅನೌನ್ಸ್ ಆಯ್ತು ಈ ಬೆನ್ನಲ್ಲೇ ಧರ್ಮಬೀರು ನಾಡಪ್ರಭು ಕೆಂಪೇಗೌಡ ಅನೌನ್ಸ್ ಆಯ್ತು. ಟಿ.ಎಸ್.ನಾಗಾಭರಣ್  ಕೋರ್ಟ್ ಮೂಲಕ ತಡೆಯಾಜ್ಞೆ ತಂದಿದ್ದರು. ಕೆಂಪೇಗೌಡ ಟೈಟಲ್ ಬಳಸದಂತೆ ಕೋರ್ಟ್ನಲ್ಲಿ ಮನವಿ ಸಲ್ಲಿಸಿದರು. ಈ ಬೆನ್ನಲ್ಲೇ ಇನ್ನೊಂದು ಚಿತ್ರತಂಡದಿಂದಲೂ ಕಾನೂನು ಹೋರಾಟ ಶುರುವಾಯಿತು. ಸತತ ಒಂದು ತಿಂಗಳ ಕಾಲ ನಡೆದ ಕಾನೂನು ಹೋರಾಟಕ್ಕೆ ಇದೀಗ ಫುಲ್ ಸ್ಟಾಫ್ ಬಿದ್ದಿದೆ. ಧರ್ಮಬೀರು ನಾಡಪ್ರಭು ಕೆಂಪೇಗೌಡ ಟೈಟಲ್ ಇದೀಗ ಕಿರಣ್ ಪಾಲಾಗಿದೆ. ಕಿರಣ್ ತೋಟಂಬೈಲುಗೆ ಜಯ, ನಾಗಾಭರಣ್ ಹಿನ್ನೆಡೆಯಾಗಿದೆ ಎನ್ನಲಾಗಿದೆ.

ಇದನ್ನೂ ವೀಕ್ಷಿಸಿ:  'ಮ್ಯಾಕ್ಸ್' ಟೀಂ ಕೊಡ್ತಿರೋ ಬಿಗ್ ಅಪ್‌ಡೇಟ್ ಏನು..? ಸಿನಿಮಾ ರಿಲೀಸ್ ಡೇಟ್ ಸುಳಿವು ಕೊಟ್ಟ ಕಿಚ್ಚ..!