'By Two ಲವ್': ಫೆ.25ಕ್ಕೆ ಧನ್ವೀರ್-ಶ್ರೀಲೀಲಾ ಸಿನಿಮಾ ರಿಲೀಸ್

ಧನ್ವೀರ್ ಮತ್ತು ಶ್ರೀಲೀಲಾ ಅಭಿನಯದ 'ಬೈಟು ಲವ್' ಚಿತ್ರವು ಇದೇ ಫೆ.25ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಕೆವಿಎನ್‌ ಬ್ಯಾನರ್‌ನಲ್ಲಿ ನಿಶಾ ವೆಂಕಟ್ ಹಾಗೂ ಸುಪ್ರೀತ್ ನಿರ್ಮಿಸುತ್ತಿದ್ದು, ಹರಿ ಸಂತೋಷ್‌ ಆಕ್ಷನ್ ಕಟ್ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

'ಬಜಾರ್' ಸಿನಿಮಾದ ಮೂಲಕ ರಗಡ್ ಆಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟವರು ನಟ ಧನ್ವೀರ್ ಗೌಡ (Dhanveer Gowda). ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದ ಧನ್ವೀರ್ ಇದೀಗ 'ಬೈಟು ಲವ್' (By Two Love) ಚಿತ್ರದಲ್ಲಿ ನಟಿಸುತ್ತಿದ್ದು, ನಾಯಕಿಯಾಗಿ ಶ್ರೀಲೀಲಾ (Sreeleela) ಕಾಣಿಸಿಕೊಂಡಿದ್ದಾರೆ. ಇದೀಗ ಚಿತ್ರವು ರಾಜ್ಯಾದ್ಯಂತ ಫೆ.25ಕ್ಕೆ ಬಿಡುಗಡೆಯಾಗಲಿದೆ. ಬೈಟು ಲವ್' ಚಿತ್ರವನ್ನು ಕೆವಿಎನ್‌ ಬ್ಯಾನರ್‌ನಲ್ಲಿ (KVN Banner) ನಿಶಾ ವೆಂಕಟ್ ಹಾಗೂ ಸುಪ್ರೀತ್ ನಿರ್ಮಿಸುತ್ತಿದ್ದು, ಹರಿ ಸಂತೋಷ್‌ (Hari Santhosh) ಆಕ್ಷನ್ ಕಟ್ ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Kiccha Sudeep: ಅಭಿಮಾನಿ ಕೊಟ್ಟ ಗಿಫ್ಟ್ ನೋಡಿ ಸುದೀಪ್ ಭಾವುಕರಾಗಿದ್ದೇಕೆ?

'ಬೈಟು ಲವ್'ಚಿತ್ರ ಈ ಕಾಲದ ಯುವಕ ಯುವತಿಯರ ಮನಸ್ಥಿತಿಯನ್ನು ಬಿಂಬಿಸುತ್ತದೆ. ಒಂದು ವಯಸ್ಸು ಆದಮೇಲೆ ಯುವಕ, ಯುವತಿಯರು ಎಲ್ಲವನ್ನೂ ಶೇರ್‌ ಮಾಡ್ತಾರೆ. ಅದಕ್ಕೆ ಬೈಟು ಅಂತ ಹೆಸರಿಟ್ಟೆವು ಎಂದು ನಿರ್ದೇಶಕ ಹರಿ ಸಂತೋಷ್‌ ಹೇಳಿದ್ದಾರೆ. ಈ ಚಿತ್ರದ ‘ಬೈಟೂ ಬೈಟೂ’ ಹಾಡು ಆನಂದ್‌ ಆಡಿಯೋ ಯೂಟ್ಯೂಬ್‌ ಚಾನಲ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸದ್ಯ ಟ್ರೆಂಡಿಂಗ್‌ನಲ್ಲಿದೆ. ಮಹೇಂದ್ರ ಸಿಂಹ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ (Ajaneesh Loknath) ಸಂಗೀತ ಸಂಯೋಜನೆ ಹಾಗೂ ಯೋಗಾನಂದ್‌ ಸಂಭಾಷಣೆ ಚಿತ್ರಕ್ಕಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video