Asianet Suvarna News Asianet Suvarna News

ಭಾರತ ಕಂಡ ಶ್ರೇಷ್ಠ ನಟಿ ಲೀಲಾವತಿ, ವಿನೋದ್‌ಗೆ ಅವರ ಕನಸು ಈಡೇರಿಸುವ ಶಕ್ತಿ ನೀಡಲಿ: ನಟ ಉಪೇಂದ್ರ

ಲೀಲಾವತಿ ಅಂತಿಮ ದರ್ಶನ ಪಡೆದ ಉಪೇಂದ್ರ
ಲೀಲಾವತಿಯವರು ಭಾರತ ಕಂಡ ಶ್ರೇಷ್ಠ ನಟಿ
ಲೀಲಾವತಿಯವರು ಅನೇಕ ಕನಸುಗಳನ್ನಿಟ್ಟಿದ್ರು

ನಟಿ ಲೀಲಾವತಿ ಶ್ರೇಷ್ಠ ಕಲಾವಿದೆ. ಅವರು ಇರುವಾಗ ತುಂಬಾ ದೊಡ್ಡ ಆಸ್ಪತ್ರೆಗಳನ್ನು ಕಟ್ಟಿಸಿ ಹೋಗಿದ್ದಾರೆ. ಅವರಿಗೆ ಇನ್ನೂ ತುಂಬಾ ಕನಸುಗಳು ಇದ್ದವಂತೆ, ಅದನ್ನು ಅವರ ಮಗ ವಿನೋದ್ ರಾಜ್‌(Vinod raj) ಈಡೇರಿಸುತ್ತೇನೆ ಎಂದು ಹೇಳಿದ್ದಾರೆ. ವಿನೋದ್‌ಗೆ ಲೀಲಾವತಿ ಕನಸು ಈಡೇರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಅಂತಿಮ ದರ್ಶನ ಪಡೆದ ಬಳಿಕ ನಟ ಉಪೇಂದ್ರ(Actor Upendra) ಹೇಳಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ಲೀಲಾವತಿ(Leelavathi) ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಗಣ್ಯರಿಗಾಗಿ ವಿಐಪಿ ಗೇಟ್‌ ವ್ಯವಸ್ಥೆ ಮಾಡಲಾಗಿದೆ. 11 ಗಂಟೆಗೆ ರವೀಂದ್ರ ಕಲಾಕ್ಷೇತ್ರಕ್ಕೆ ಪಾರ್ಥಿವ ಶರೀರ ಬರಲಿದ್ದು, ಮಧ್ಯಾಹ್ನ 2.30ರವರೆಗೆ ಅಂತಿಮ ದರ್ಶನಕ್ಕೆ ಅವಕಾಶವಿರಲಿದೆ. ನೆಲಮಂಗಲದ ಸೋಲದೇವನಹಳ್ಳಿ ಫಾರ್ಮ್ ಹೌಸ್‌ನಲ್ಲಿ ಅಂತ್ಯಕ್ರಿಯೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು, ಹಿಂದೂ ಸಂಪ್ರದಾಯದಂತೆ ನಟಿ ಲೀಲಾವತಿ ಅಂತ್ಯಕ್ರಿಯೆ ನೆರವೇರಲಿದೆ.

ಇದನ್ನೂ ವೀಕ್ಷಿಸಿ:  ಅಮ್ಮನನ್ನು ಕಳೆದುಕೊಂಡ ಶ್ವಾನದ ಕಣ್ಣೀರು: ಫೋಟೋ ಮುಂದೆ ಕುಳಿತು ರೋಧಿಸುತ್ತಿರುವ ಬ್ಲಾಕಿ !