ಸ್ತ್ರೀ ದೈವಗಳ ಮೊರೆ ಹೋಗ್ತಿರೋದೇಕೆ ವಿಜಯಲಕ್ಷ್ಮೀ?: ದರ್ಶನ್‌ಗಂಟಿದ ಸ್ತ್ರೀ ಶಾಪಕ್ಕೆ ಸಿಕ್ಕುತ್ತಾ ಇಲ್ಲಿ ಮುಕ್ತಿ?

ದರ್ಶನ್ ಜೈಲು ಪಾಲಾಗಿಂದಲೂ ಅವರ ಪರವಾಗಿ ಮಿಡಿಯುತ್ತಿರೋ ಏಕೈಕ ಜೀವ ಅಂದ್ರೆ ಅದು ದರ್ಶನ್ ಪತ್ನಿ ವಿಜಯಲಕ್ಷ್ಮೀ. ತನ್ನ ಪತಿ ಅಷ್ಟು ದೊಡ್ಡ ತಪ್ಪು ಮಾಡಿ ಜೈಲು ಸೇರಿದ್ರೂ ಈ ಸತಿ ಮಾತ್ರ ಪತಿಯನ್ನ ಬಚಾವ್ ಮಾಡೋದಕ್ಕೆ ಶ್ರಮ ಪಡ್ತಾನೇ ಇದ್ದಾಳೆ. 
 

First Published Sep 16, 2024, 4:14 PM IST | Last Updated Sep 16, 2024, 4:14 PM IST

ದರ್ಶನ್ ಜೈಲು ಪಾಲಾಗಿಂದಲೂ ಅವರ ಪರವಾಗಿ ಮಿಡಿಯುತ್ತಿರೋ ಏಕೈಕ ಜೀವ ಅಂದ್ರೆ ಅದು ದರ್ಶನ್ ಪತ್ನಿ ವಿಜಯಲಕ್ಷ್ಮೀ. ತನ್ನ ಪತಿ ಅಷ್ಟು ದೊಡ್ಡ ತಪ್ಪು ಮಾಡಿ ಜೈಲು ಸೇರಿದ್ರೂ ಈ ಸತಿ ಮಾತ್ರ ಪತಿಯನ್ನ ಬಚಾವ್ ಮಾಡೋದಕ್ಕೆ ಶ್ರಮ ಪಡ್ತಾನೇ ಇದ್ದಾಳೆ. ವಕೀಲರು, ರಾಜಕಾರಣಿಗಳ ಹಿಂದೆ ಅಲೀತಾ ಇರೋ ವಿಜಯಲಕ್ಷ್ಮೀ ಅದರ ಜೊತೆ ದೇವಸ್ಥಾನಗಳನ್ನ ಸುತ್ತುತ್ತಾ ದೇವರ ಮೊರೆಯೂ ಹೋಗ್ತಿದ್ದಾರೆ. ಅದ್ರಲ್ಲೂ ವಿಶೇಷವಾಗಿ ಹೆಣ್ಣುದೇವರ ಶಕ್ತಿಪೀಠಗಳಿಗೆ ವಿಜಯಲಕ್ಷ್ಮೀ ಭೇಟಿ ಕೊಡ್ತಾ ಇದ್ದಾರೆ.. ಇದರ ಹಿಂದೆ ಒಂದು ರಹಸ್ಯ ಕೂಡ ಇದೆ.. ದರ್ಶನ್ ಮಾಡಿರೋ ಕೆಲಸಕ್ಕೆ ವಿಜಯಲಕ್ಷ್ಮೀ ಜಾಗದಲ್ಲಿ ಬೇರೆ ಯಾರೇ ಇದ್ರೂ ಆತನನ್ನ ತಿರುಗಿಯೂ ನೋಡ್ತಾ ಇರಲಿಲ್ಲ ಅನ್ನಿಸುತ್ತೆ. ಪರಸ್ತ್ರಿಯ ಸಹವಾಸ ಮಾಡಿ ಆಕೆಯನ್ನ ರೇಗಿಸಿದ ವ್ಯಕ್ತಿಯನ್ನ ಕೊಂದು ಜೈಲಿಗೆ ಹೋಗಿರೋ ವ್ಯಕ್ತಿಯನ್ನ ಯಾವ  ಪತ್ನಿಯಾದ್ರೂ ಕ್ಷಮಿಸ್ತಾಳಾ.? ಅಚ್ಚರಿ ಅಂದ್ರೆ ವಿಜಯಲಕ್ಷ್ಮೀ ತನ್ನ ಪತಿಯನ್ನ ಕ್ಷಮಿಸಿಯೂ ಇದ್ದಾರೆ.

ಜೊತೆಗೆ ಆತನ ಬಿಡುಗಡೆಗೆ ನಿರಂತರ ಪ್ರಯತ್ನವನ್ನೂ ಮಾಡ್ತಾ ಇದ್ದಾರೆ. ದರ್ಶನ್ ಜೈಲಿಗೆ ಹೋದಾಗಿನಿಂದಲೂ ಆತನನ್ನ ಬಿಡಿಸೋಕೆ ವಿಜಯಲಕ್ಷ್ಮೀ ನಾನಾ ಪ್ರಯತ್ನ ಮಾಡ್ತಾ ಇದ್ದಾರೆ. ಹೆಸರಾಂತ ವಕೀಲರನ್ನ ಇಟ್ಟುಕೊಂಡು ಕೇಸ್ ನಡೆಸ್ತಾ ಇದ್ದಾರೆ. ವಕೀಲರು ಕೇಳಿದಷ್ಟು ಹಣವನ್ನ ಸುರಿದಿದ್ದಾರೆ. ಜೊತೆಗೆ ಡಿಸಿಎಂನ ಭೇಟಿ ಮಾಡಿ ದರ್ಶನ್ನ ಹೇಗಾದ್ರೂ ಬಚಾವ್ ಮಾಡಿ ಅಂತ ಪ್ರಾರ್ಥಿಸಿದ್ದಾರೆ. ಇವೆಲ್ಲವುಗಳ ಜೊತೆಗೆ ವಿಜಯಲಕ್ಷ್ಮೀ , ಪತಿಗಾಗಿ ಕಂಡ ಕಂಡ ದೇವರ ಬಳಿ ಹರಕೆ ಕಟ್ಟಿದ್ದಾರೆ. ಬಂಡೆ ಮಾಕಾಳಮ್ಮ , ಮೈಸೂರು ಚಾಮುಂಡೇಶ್ವರಿ ದೇಗುಲದಲ್ಲಿ ಪೂಜೆ ಮಾಡಿಸಿರೋ ವಿಜಯಲಕ್ಷ್ಮೀ ಆ ಪ್ರಸಾದವನ್ನ ಜೈಲಿನಲ್ಲಿರೋ ದರ್ಶನ್ಗೆ ತಲುಪಿಸಿ ಬಂದಿದ್ರು. ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಹೋಮವನ್ನ ಮಾಡಿಸಿ ಪೂರ್ಣಾಹುತಿ ಕೊಟ್ಟಿದ್ದಾರೆ. ಈ ವಾರ ಅಸ್ಸಾಂನ ಕಾಮಾಕ್ಯ ದೇಗುಲಕ್ಕೂ ಭೇಟಿ ಕೊಟ್ಟಿದ್ದಾರೆ. 

ಅಸಲಿಗೆ ಅಸ್ಸಾಂ ರಾಜ್ಯದಲ್ಲಿರೋ ಕಾಮಕ್ಯ ದೇಗುಲ ಅತ್ಯಂತ ಪ್ರಭಾವಿ ಶಕ್ತಿಪೀಠಗಳಲ್ಲಿ ಒಂದು. ಮಾಟ ಮಂತ್ರಕ್ಕೂ ಇದು ಬಲು ಫೇಮಸ್ಸು. ಇಂಥಾ ದೈವಸ್ಥಾನದಲ್ಲಿ ಪೂಜೆ ಮಾಡಿಸಿರೋ ವಿಜಯಲಕ್ಷ್ಮೀ ದರ್ಶನ್ ಗೆ ಪ್ರಸಾದವನ್ನ ತಲುಪಿಸಿದ್ದಾರೆ. ಇಲ್ಲಿ ಒಂದು ಇನ್ ಟ್ರೆಸ್ಟಿಂಗ್ ವಿಚಾರ ಇದೆ. ದರ್ಶನ್ ಪತ್ನಿ ಇದೂವರೆಗೂ ಭೇಟಿ ಕೊಟ್ಟಿರೋದೆಲ್ಲಾ ಸ್ತ್ರೀ ದೇಗುಲಗಳಿಗೆ. ಹರಕೆ ಕಟ್ಟಿರೋದೆಲ್ಲಾ ಹೆಣ್ಣು ದೈವಗಳ ಬಳಿ. ಹಾಗಾದ್ರೆ ದರ್ಶನ್ ಗಂಟಿದ ಸ್ತ್ರೀದೋಷವನ್ನ ಕಳೆಯೋದಕ್ಕೆ ವಿಜಯಲಕ್ಷ್ಮೀ ಈ ರೀತಿ ಹೆಣ್ಣು ದೈವಗಳ ಬಳಿ ಅಲೀತಾ ಇದ್ದಾರಾ.. ಹೌದು ಅಂತಿವೆ ಮೂಲಗಳು. ಹೌದು ದರ್ಶನ್ ಸದ್ಯ ಜೈಲು ಸೇರಿರೋದು ಪವಿತ್ರಾಳ ಸಹವಾಸದಿಂದ ಅನ್ನೋದು ಗೊತ್ತೇ ಇದೆ. ಸ್ತ್ರೀಯ ಕಾರಣದಿಂದಲೇ ಜೈಲುಪಾಲಾದ ದಾಸನಿಗೆ ಸ್ತ್ರೀದೋಷ ಅಮರಿಕೊಂಡಿದೆ. ಈ ಹಿಂದೆ ಕಾಟೇರ ಸಕ್ಸಸ್ ಸಂಭ್ರಮದಲ್ಲಿ ಮಂಡ್ಯದಲ್ಲಿ ಮಾತನಾಡುವ ವೇಳೆ ದರ್ಶನ್, ಇವತ್ತು ಅವಳಿರ್ತಾಳೆ ನಾಳೆ ಇವಳಿರ್ತಾಳೆ ಅಂತ ಹೆಂಡತಿ ಮತ್ತು ಗೆಳತಿ ಬಗ್ಗೆ ದರ್ಶನ್ ಹಗುರವಾಗಿ ಮಾತನಾಡಿದ್ರು. 

ಇವತ್ತು ಅವಳಿಂದಲೇ ಜೈಲು ಸೇರಿದ್ದಾರೆ. ದರ್ಶನ್ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಹೇಳಿದ ಮಾತು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದೃಷ್ಟ ದೇವತೆ ಬಾಗಿಲು ತಟ್ಟಿದಾಗ ಅವಳನ್ನ ಬೆಡ್ ರೂಮ್ಗೆ ಕರೆದೊಯ್ದು ಬಟ್ಟೆ ಬಿಚ್ಚಿ ಕೂರಿಸಬೇಕು. ಇಲ್ಲಾ ಅಂದ್ರೆ ಆಕೆ ಬೇರೆಯವರ ಮನೆಗೆ ಹೋಗಿಬಿಡ್ತಾಳೆ ಅಂದಿದ್ರು ದರ್ಶನ್. ಈ ಮಾತನ್ನ ಕೇಳಿದ ಜನ ಈತನ ಅಭಿರುಚಿ ಎಂಥಾ ಕೀಳು ಮಟ್ಟದ್ದು ಅಂತ ಛೀಮಾರಿ ಹಾಕಿದ್ರು. ಹೀಗೆ ಅದೃಷ್ಟ ದೇವತೆಗೆ ಮಾಡಿದ ಅವಮಾನ, ಹೆಣ್ಣಿನ ನಿಂದನೆ ಇವತ್ತು ದರ್ಶನ್ ಗೆ ದುರಾದೃಷ್ಟ ವಕ್ಕರಿಸಿಕೊಳ್ಳುವಂತೆ ಮಾಡಿದೆ. ಈ ಸ್ತ್ರೀ ದೋಷ, ದುರಾದೃಷ್ಟಗಳ ನಿವಾರಣೆಗಾಗಿಯೇ ವಿಜಯಲಕ್ಷ್ಮೀ ಹೆಣ್ಣು ದೇವತೆಗಳ ಬಳಿ ಅಲೀತಾ ಇದ್ದಾರೆ. ತನ್ನ ಪತಿಯನ್ನ ಕ್ಷಮಿಸು ಅಂತ ಅಮ್ಮನವರಲ್ಲಿ ಪ್ರಾರ್ಥಿಸ್ತಾ ಇದ್ದಾರೆ. ಪತ್ನಿಯೇನೋ ದರ್ಶನ್ ನ ಕ್ಷಮಿಸಿದ್ದಾರೆ.. ಆದ್ರೆ ಜಗನ್ಮಾತೆ  ಕ್ಷಮಿಸ್ತಾಳಾ.. ದರ್ಶನ್ ತಪ್ಪುಗಳನ್ನ ಮನ್ನಿಸ್ತಾಳಾ..? ಅದು ಸಾಕ್ಷಾತ್ ಆ ದೇವಿಗೆ ಮಾತ್ರ ಗೊತ್ತು..!

Video Top Stories