ದರ್ಶನ್​​ಗೆ ಬದುಕಿನ ಪಾಠ ಕಲಿಸಿತಾ ಜೈಲುವಾಸ? ಬದಲಾದ್ರಾ ದರ್ಶನ್​​;ಒಂದಾದ ಅಣ್ಣ-ತಮ್ಮ,ತಾಯಿ-ಮಗ

ಜೈಲಿನಿಂದ ಬಿಡುಗಡೆಯಾದ ನಂತರ ದರ್ಶನ್​ ಬದಲಾಗಿರುವಂತೆ ಕಾಣುತ್ತಿದೆ. ಕುಟುಂಬದೊಂದಿಗೆ ಸಿನಿಮಾ ವೀಕ್ಷಿಸಿದ್ದು, ಅಭಿಮಾನಿಗಳಿಗೆ ಸಂತಸ ತಂದಿದೆ. ಆದರೆ, ಈ ಬದಲಾವಣೆಯ ಹಿಂದೆ ರೇಣುಕಾಸ್ವಾಮಿ ಕುಟುಂಬದ ಪರಿಸ್ಥಿತಿ ಏನು?

Share this Video
  • FB
  • Linkdin
  • Whatsapp

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್​​​ ಬೇಲ್​​​​ ಮೇಲೆ ಆಚೆ ಬಂದಿದ್ದಾರೆ. ಜೈಲಿನಿಂದ ಆಚೆ ಬಂದಿರುವ ದರ್ಶನ್​ ಕಂಪ್ಲೀಟ್​ ಬದಲಾದಂತೆ ಕಾಣುತ್ತಿದೆ. ಹಳೇ ಚಾಳಿ ಬಿಟ್ಟು ಒಳ್ಳೆ ದರ್ಶನ್​ ಆದಂತೆ ಕಾಣುತ್ತಿದೆ. ಜೈಲಿನಿಂದ ಹೊರ ಬಂದ ಮೇಲೆ ಊರ ಉಸಾಬರಿ ಬಿಟ್ಟು ತಾವಾಯ್ತು ತಮ್ಮ ಕುಟುಂಬವಾಯ್ತು ಎಂಬಂತೆ ಬದುಕುತ್ತಿರುವಂತೆ ಕಾಣುತ್ತಿದೆ. ನಿನ್ನೆ ಸಹೋದರ ದಿನಕರ್​ ತೂಗುದೀಪ್ ನಿರ್ದೇಶನದ ರಾಯಲ್​ ಸಿನಿಮಾ ​ ಶೋ ನೋಡಲು ದರ್ಶನ್​ ಸೇರಿದಂತೆ ಇಡೀ ಕುಟುಂಬವೇ ಥೀಯಟರ್​​ಗೆ ಹೋಗಿತ್ತು. ಇಡೀ ಕುಟುಂಬವನ್ನು ಒಂದೇ ಕಡೆ ನೋಡಿದ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ಇಲ್ಲಿ ನೋವಿನ ಸಂಗತಿ ಏನೆಂದ್ರೆ ಈ ಕುಟುಂಬ ಒಂದಾಗೋದಕ್ಕೆ ಅಲ್ಲೊಂದು ಕುಟುಂಬ ಅನಾಥವಾಗಿ ಬೀದಿಗೆ ಬರಬೇಕಾಯ್ತು.ದರ್ಶನ್​ ರೇಣುಕಾಸ್ವಾಮಿ ಕುಟುಂಬವನ್ನು ಭೇಟಿಯಾಗಲಿದ್ದಾರೆಂದು ಎಂದು ಒಂದು ಕಡೆ ಸುದ್ದಿ ಹರಿದಾಡುತ್ತಿದ್ದರೆ ಇನ್ನೊಂದು ಕಡೆ ದರ್ಶನ್​ ರೇಣುಕಾಸ್ವಾಮಿ ಕುಟುಂಬದವರಿಗೆ ಆಗಲೇ ಕೋಟಿ ಕೋಟಿ ದುಡ್ಡು ಕೊಟ್ಟಿದ್ದಾರೆಂಬ ಸುದ್ದಿಗಳೂ ಹರಿದಾಡುತ್ತಿದ್ದವು. ಹಾಗಿದ್ರೆ ಈ ಸುದ್ದಿಗಳು ಎಷ್ಟರ ಮಟ್ಟಿಗೆ ನಿಜಾ ಅನ್ನೋದನ್ನು ಇಲ್ಲಿ ನೋಡೋಣ. 

ಬಿಗ್ ಬಾಸ್ ಟ್ರೋಫಿ ನಿನ್ನದೇ ಎಂದು ಹನುಮಂತುಗೆ ಸೂಚನೆ ಕೊಟ್ರಾ ಗುರೂಜಿ; ವಿಡಿಯೋ ವೈರಲ್

Related Video