ಬಿಗ್ ಬಾಸ್ ಟ್ರೋಫಿ ನಿನ್ನದೇ ಎಂದು ಹನುಮಂತುಗೆ ಸೂಚನೆ ಕೊಟ್ರಾ ಗುರೂಜಿ; ವಿಡಿಯೋ ವೈರಲ್

ಬಿಗ್ ಬಾಸ್ ಸೀಸನ್ 11ರಲ್ಲಿ ಹನುಮಂತನ ಜನಪ್ರಿಯತೆ ಹೆಚ್ಚುತ್ತಿದೆ. ವಿದ್ಯಾಶಂಕರ ಗುರೂಜಿ ಅವರು ಹನುಮಂತನಿಗೆ 2026ರವರೆಗೆ ರಾಜಯೋಗವಿದೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಬಾರಿ ಬಿಗ್ ಬಾಸ್ ಟ್ರೋಫಿ ಗೆಲ್ಲುವ ಸಾಧ್ಯತೆ ಹನುಮಂತನಿಗೆ ಹೆಚ್ಚಿದೆ.

Share this Video
  • FB
  • Linkdin
  • Whatsapp

ಬಿಗ್ ಬಾಸ್ ಸೀಸನ್‌ 11 ಇನ್ನೇನು ಕೊನೆಹಂತಕ್ಕೆ ಬಂದಿದೆ. ಫಿನಾಲೆಗೆ ದಿನಗಣನೆ ಶುರುವಾಗಿದೆ. ಈ ಸಾರಿ ಬಿಗ್ ಬಾಸ್ ಟ್ರೋಫಿ ಎತ್ತಿ ಹಿಡಿಯೋ ಸ್ಪರ್ಧಿ ಯಾರು ಅಂತ ಇಡೀ ಕರುನಾಡು ಕಾಯ್ತಾ ಇದೆ. ಆದ್ರೆ ಎಲ್ಲರ ಫೆವರೀಟ್ ಕಂಟೆಸ್ಟೆಂಟ್ ಯಾರು ಅನ್ನೋದು ಕೂಡ ಗೊತ್ತೇ ಇದೆ. ಹನುಮಂತನ ಹಿಂದೆ ಅಭಿಮಾನಿಗಳ ಬಲ ಇದೆ. ಜೊತೆಗೆ ಹನುಮಂತನ ಜಾತಕದಲ್ಲಿ ಬೇರೆ ರಾಜಯೋಗ ಇದೆಯಂತೆ.ಈ ನಡುವೆ ದೊಡ್ಮನೆಗೆ ವಿದ್ಯಾಶಂಕರ ಗುರೂಜಿ ಎಂಟ್ರಿ ಕೊಟ್ಟಿದ್ದು ಸ್ಪರ್ಧಿಗಳಿಗೆಲ್ಲಾ ಅವರ ಭವಿಷ್ಯವನ್ನ ಹೇಳಿದ್ದಾರೆ.ಸದ್ಯ ವಿದ್ಯಾಶಂಕರ್ ಗುರೂಜಿ ಹನುಮಂತಣ್ಣನ ಭವಿಷ್ಯ ಹೇಳಿದ್ದು, ನಿನಗೆ 2026ರವರೆಗೂ ರಾಜಯೋಗ ಇದೆ ಅಂತ ಹೇಳಿದ್ದಾರೆ. ಅಲ್ಲಿಗೆ ಇನ್ ಡೈರೆಕ್ಟ್ ಆಗಿ ಈ ಸಾರಿ ಬಿಗ್ ಬಾಸ್ ಟ್ರೋಫಿ ಗೆಲ್ಲೋದು ನೀನೆ ಅಂತ ಸೂಚನೆ ಕೊಟ್ಟುಬಿಟ್ಟಿದ್ದಾರೆ.ಹನುಮಂತನ ಜಾತಕದಲ್ಲಿ ರಾಜಯೋಗ ನಡೀತಾ ಇದೆಯಂತೆ. ಸೋ ಅದೃಷ್ಟ ಹನುಮಂತನ ಬೆನ್ನಿಗಿದೆ. ಇನ್ನೂ ದೊಡ್ಮನೆಯಲ್ಲಿ ಹನುಮಂತ ಟಾಸ್ಕ್ ಗಳನ್ನ​ ಆಡಿದ ಪರಿ, ಜಗಳಗಳನ್ನ ಹ್ಯಾಂಡಲ್ ಮಾಡಿದ ರೀತಿ ನೋಡಿದವರು ಈತನ ಫ್ಯಾನ್ ಆಗಿದ್ದಾರೆ. ಮೊದಲೇ ಹನುಮಂತಣ್ಣನಿಗೆ ಉತ್ತರ ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಫ್ಯಾನ್ ಫಾಲೋವಿಂಗ್ ಇದೆ. ವೋಟಿಂಗ್ ಲೆಕ್ಕದಲ್ಲೇ ಬಿಗ್ ಬಾಸ್ ವಿನ್ನರ್ ಆಯ್ಕೆ ಅಂತಾದ್ರೆ ಹನುಮಂತ ಉಳಿದ ಸ್ಪರ್ಧಿಗಳನ್ನ ದೊಡ್ಡ ಅಂತರದಲ್ಲಿ ಸೋಲಿಸಿ ಗೆದ್ದು ಬೀಗೋದು ಫಿಕ್ಸ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

450 ಕಿಮೀ. ದೂರದಿಂದ ಬಟ್ಟೆ ತರ್ಸೋದು ಕಷ್ಟ ಅಂತ ಅದೇ ಹಾಕೋತ್ತಿದ್ದೆ; ಚೈತ್ರಾ ಕುಂದಾಪುರ ಶಾಪಿಂಗ್ ಮಾಡಿಲ್ಲ!

Related Video