Darshan: ಜೈಲಿನಲ್ಲಿ ಬಯಲಾಯ್ತು ದರ್ಶನ್ ವಿಗ್ ಸ್ಟೋರಿ! 'ಶಿವಾಜಿ' ಲುಕ್‌ನಲ್ಲಿ ಮೊಟ್ಟೆ ಬಾಸ್ ಆದ ನಟ ?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿಗೆ ಹೋಗಿರುವ ದರ್ಶನ್ ಈಗಾಗಲೇ 1 ತಿಂಗಳಿಂದ ಜೈಲಲ್ಲಿ ಕಂಬಿ ಎಣಿಸುತ್ತಿದ್ದಾರೆ. ಜೈಲೂಟ ಸೇರದೆ ನಿದ್ದೆ ಬಾರದೆ ಏಕಾಂಗಿಯಾಗಿ ಒದ್ದಾಡುತ್ತಿದ್ದಾರೆ.

Share this Video
  • FB
  • Linkdin
  • Whatsapp

ದರ್ಶನ್‌ರನ್ನು ಇಲ್ಲಿಯವರೆಗೆ ಮೂರ್ನಾಲ್ಕು ಬಾರಿ ಜೈಲಲ್ಲಿ ಭೇಟಿಯಾಗಿರೋ ವಿಜಯಲಕ್ಷ್ಮೀ ದರ್ಶನ್(Vijayalakshmi) ಈಗ ಮತ್ತೊಮ್ಮೆ ಭೇಟಿಯಾಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ(Parappana Agrahara) ದರ್ಶನ್‌ರನ್ನು ಭೇಟಿಯಾಗಿರೋ ವಿಜಯಲಕ್ಷ್ಮಿ ದರ್ಶನ್‌ಗೆ(Darshan) ಜಾಮೀನು ಸಿಗುವುದು ಸದ್ಯ ಬಹಳ ಕಷ್ಟ ಎಂದಿದ್ದಾರಂತೆ. ಇದು ದರ್ಶನ್ ನುಂಗಲಾರದ ತುತ್ತಾಗಿದೆ. ಲಾಯರ್‌ನ ಬದಲಿಸ್ತೀಯೋ.. ಕೋಟಿ ಕೋಟಿ ಹಣ ಅವರಿಗೆ ಕೊಡ್ತೀಯೋ ಒಟ್ಟಿನಲ್ಲಿ ನಾನು ಆಚೆ ಬರಬೇಕಷ್ಟೆ. ಬೇಗ ಜಾಮೀನು(Bail) ಸಿಗುವಂತೆ ಮಾಡು ಎಂದು ಪತ್ನಿಯ ಮೇಲೆ ಒತ್ತಡ ಹೇರುತ್ತಿದ್ದಾರಂತೆ ದರ್ಶನ್. ದರ್ಶನ್ ಹೊಡೆದಾಗ ಹೊಡೆಸಿಕೊಂಡು, ನಟಿಯರ ಜೊತೆ ಅಫೇರ್ ಇಟ್ಟುಕೊಂಡಾಗಲೂ ಸಹಿಸಿಕೊಂಡು, ದರ್ಶನ್‌ಗೆ ಅಪಘಾತವಾದಾಗಲೂ ಆಸ್ಪತ್ರೆಗೆ ಹೋಗಿ ಅವರನ್ನು ನೋಡಿಕೊಂಡು ಒಬ್ಬ ಧರ್ಮ ಪತ್ನಿ ಎಷ್ಟೆಲ್ಲಾ ಸಹಿಸಿಕೊಳ್ಳಬಹುದೊ ಅಷ್ಟೂ ಮಾಡುತ್ತಾ ಇದೀಗ ಪವಿತ್ರ ಗೌಡಗಾಗಿ ಕೊಲೆಗೆ ಸಂಚು ರೂಪಿಸಿ ಜೈಲಿಗೆ ಹೋದಾಗಲೂ ಪತಿಯನ್ನು ಕಾಪಾಡಿಕೊಳ್ಳಲು ವಿಜಯಲಕ್ಮೀ ದರ್ಶನ್ ತನ್ನೆಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ದರ್ಶನ್ನನ್ನು ಜೈಲಿಂದ ಬಿಡಿಸಲು ಎಷ್ಟೆ ಪ್ರಯತ್ನ ಪಟ್ಟರು ಎಲ್ಲ ಕಡೆಯಿಂದಲೂ ಹಿನ್ನಡೆಯಾಗುತ್ತಿರುವ ಬಗ್ಗೆ ವಿಜಯಲಕ್ಮಿ ದರ್ಶನ್ಗೆ ತಿಳಿಸಿದಾಗ ದರ್ಶನ್ ಇನ್ನಷ್ಟು ಆತಂಕಕ್ಕೊಳಗಾಗಿದ್ದಾರೆ ಎನ್ನಲಾಗಿದೆ. ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಜೈಲಿನಲ್ಲಿ ದರ್ಶನ್ ದರ್ಪ, ದೌಲತ್ತಿಗೆ ಲಗಾಮು ಬಿದ್ದಿದೆ. ಇದೀಗ ಅವರ ಕೃತಕ ಕೂದಲಿಗೂ ಕತ್ತರಿ ಬಿದ್ದಿದೆ ಎನ್ನುವಂತಹ ಸಂಗತಿ ತಿಳಿದು ಬಂದಿದೆ. ಇದರಿಂದ ದರ್ಶನ್ ವಿಗ್ ಸ್ಟೋರಿ ಗೊತ್ತಿಲ್ಲದವರಿಗೂ ತಿಳಿಯುವಂತಾಗಿದೆ. ತುಂಬಾ ಜನರಿಗೆ ಗೊತ್ತಿಲ್ಲದ ವಿಚಾರ ಅಂದರೆ ದರ್ಶನ್ ತಲೆ ಕೂದಲು ವರ್ಜಿನಲ್ ಅಲ್ಲ ಅನ್ನೋದು. 

ಇದನ್ನೂ ವೀಕ್ಷಿಸಿ: ಫಾಸ್ಟ್ ಟ್ರ್ಯಾಕ್ ಕೋರ್ಟ್‌ ಮನವಿಗೆ ಪೊಲೀಸರ ನಿರ್ಧಾರ.. ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಮನವಿ ಮಾಡುವ ಸಾಧ್ಯತೆ

Related Video