
ಇಲ್ಲಿದೆ ನೋಡಿ 'ಡೆವಿಲ್' ಸಿನಿಮಾದ ಸ್ಟೋರಿ ಸೀಕ್ರೆಟ್.. ದರ್ಶನ್ ಚಿತ್ರದಲ್ಲಿನ ಕಥೆ ಬಟಾಬಯಲು!
ಡೆವಿಲ್ ಸಿನಿಮಾದ ಫಸ್ಟ್ ಗ್ಲಿಮ್ಸ್ ಬಂದಾಗ ಅಬ್ಬ ದರ್ಶನ್ ಈ ಭಾರಿ ಏನನ್ನೋ ಮಾಡಿದ್ದಾರೆ. ಡೆವಿಲ್ ಅವತಾರ ಭರ್ಜರಿ ಆಗಿದೆ ಅಂತ ಫ್ಯಾನ್ಸ್ ದಿಲ್ ಖುಷ್ ಆಗಿದ್ರು. ಆ ನಂತ್ರ ಬಂದ ಟೀಸರ್ ಡೆವಿಲ್ನ ಮತ್ತೊಂದು ವರ್ಷನ್ ತೆರೆದಿಟ್ಟಿತ್ತು. ಇದೀಗ ಸ್ಟೋರಿ ಲೈನ್ ಸೀಕ್ರೆಟ್ ಬಯಲಾಗಿದ್ಯಾ?
ಕನ್ನಡದ ಸ್ಟಾರ್ ದರ್ಶನ್ ತೂಗದೀಪ (Darshan Thoogudeepa) 'ದಿ ಡೆವಿಲ್' ಸೌಂಡು ಶುರುವಾಗಿದೆ. ದಾಸನಿಲ್ಲದೇ ಡೆವಿಲ್ನ ಫ್ಯಾನ್ಸ್ ಮಡಿಲಿಗೆ ಹಾಕೋ ಸ್ಥಿತಿ ಡೆವಿಲ್ ತಂಡಕ್ಕಿದೆ. ಅದಕ್ಕೆ ದಚ್ಚು ಪತ್ನಿ ವಿಜಯಲಕ್ಷ್ಮಿ ಈ ಸಿನಿಮಾ ಪ್ರೇಕ್ಷಕರಿಗೆ ತಲುಪಿಸೋ ಕೆಲಸ ನನ್ನದೆಂದಿದ್ದಾರೆ. ಆದ್ರೆ ಈಗಿರೋ ಮ್ಯಾಟರ್ ಅದಲ್ಲ. ಡೆವಿಲ್ನ ಅಸಲಿ ಕಥೆಯೇ ಬೇರೆ. ಆ ರಿಯಲ್ ಸ್ಟೋರಿ ಏಷ್ಯಾನೆಟ್ ಸುವರ್ಣ ನ್ಯೂಸ್ಗೆ ಎಕ್ಸ್ಕ್ಲ್ಯೂಸೀವ್ ಆಗಿ ಸಿಕ್ಕಿದೆ. ಏನದು ಎಕ್ಸ್ಕ್ಲ್ಯೂಸೀವ್..? ಹ್ಯಾವ ಲುಕ್...
ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ 'ಡೆವಿಲ್' ಅಸಲಿ ಕತೆ..!
ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲು ನರಕ ತೋರಿಸುತ್ತಿದೆ. ಆದ್ರೆ ಫ್ಯಾನ್ಸ್ಗೆ ಸ್ವರ್ಗ ತೋರಿಸಬೇಕು ಅಂತ ದಚ್ಚು ಡೆವಿಲ್ ಸಿನಿಮಾವನ್ನ ಡಿಸೆಂಬರ್ 12ಕ್ಕೆ ತೆರೆ ಮೇಲೆ ತರುತ್ತಿದ್ದಾರೆ. ಒಂದು ಕಡೆ ಜೈಲಲ್ಲಿ ದರ್ಶನ್ ವ್ಯಥೆ ಆದ್ರೆ, ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ದಾಸನ ಡೆವಿಲ್ನ ಅಸಲಿ ಕಥೆ ಏಕ್ಸ್ಕ್ಲ್ಯೂಸೀವ್ ಆಗಿ ರಿವಿಲ್ ಆಗ್ತಾ ಇದೆ.
ಡೆವಿಲ್ ಸಿನಿಮಾದ ಫಸ್ಟ್ ಗ್ಲಿಮ್ಸ್ ಬಂದಾಗ ಅಬ್ಬ ದರ್ಶನ್ ಈ ಭಾರಿ ಏನನ್ನೋ ಮಾಡಿದ್ದಾರೆ. ಡೆವಿಲ್ ಅವತಾರ ಭರ್ಜರಿ ಆಗಿದೆ ಅಂತ ಫ್ಯಾನ್ಸ್ ದಿಲ್ ಖುಷ್ ಆಗಿದ್ರು. ಆ ನಂತ್ರ ಬಂದ ಟೀಸರ್ ಡೆವಿಲ್ನ ಮತ್ತೊಂದು ವರ್ಷನ್ ತೆರೆದಿಟ್ಟಿತ್ತು.
ಅಷ್ಟೆ ಅಲ್ಲ ಇದ್ರೆ ನಿಮ್ಮದಿಯಾಗ್ ಇರಬೇಕು ಹಾಡು ಬಂದಾಗ ಇದ್ದ ಬದ್ದವರೆಲ್ಲಾ ಟ್ರೋಲ್ ಮಾಡಿ ಹಾಡಿನ ಹೀಟ್ ಹೆಚ್ಚಿಸಿದ್ರು. ಈ ಕಿಕ್ಗೆ ಲವ್ ಟಾನಿಕ್ ತರ ಬಂದ ಸಾಂಗ್ ಡೆವಿಲ್ಗ ಪ್ರೇಮ ಲೋಕಕ್ಕೆ ಕರೆದುಕೊಂಡು ಹೋಗಿತ್ತು..
ಹೌದು, ಡಿವಿಲ್ ಸಿನಿಮಾ ಟೈಟಲ್ ಗ್ಲಿಮ್ಸ್ ನೋಡಿ ದರ್ಶನ್ ಈ ಸಿನಿಮಾದಲ್ಲಿ ಭರ್ಜರಿಯಾಗಿ ಮಿಂಚಿದ್ದಾರೆ. ದಾಸ ನಿಜಕ್ಕೂ ಡೆವಿಲ್, ದೊಡ್ಡ ಡಾನ್ ಅಂತೆಲ್ಲಾ ಟಾಕ್ ಎದ್ದಿದ್ದು ಸುಳ್ಳಲ್ಲ. ಆದ್ರೆ ಡೆವಿಲ್ನ ರಿಯಲ್ ಸ್ಟೋರಿ ಏನ್ ಗೊತ್ತಾ..? ದರ್ಶನ್ ಕ್ಯಾರೆಕ್ಟರ್ ಹೇಗಿರುತ್ತೆ ಗೊತ್ತಾ.? ಅದಕ್ಕೆ ಉತ್ತರ ಇಲ್ಲಿದೆ ನೋಡಿ.. ದರ್ಶನ್ ಡೆವಿಲ್ ಸಿನಿಮಾದಲ್ಲಿ ಡಬಲ್ ರೋಲ್ ಮಾಡುತ್ತಿದ್ದಾರೆ. ಅದರಲ್ಲೊಂದು ರಾಜಕಾರಣಿ...
ದಚ್ಚು 'ಡೆವಿಲ್'ನಲ್ಲಿ ರಾಜಕಾರಣಿ..!
ಡೆವಿಲ್ ಟೀಸರ್ನಲ್ಲಿ ದರ್ಶನ್ರ ಮಾಸ್ ಡೈಲಾಗ್ ಸ್ಟೈಲೀಶ್ ಲುಕ್ಅನ್ನ ಮಾತ್ರ ನೋಡಿದ್ದೀರಾ. ಇದನ್ನ ನೋಡಿ ದಾಸ ಈ ಸಿನಿಮಾದಲ್ಲಿ ಡಾನ್ ಇರಬೇಕು ಅನ್ನೋ ಊಹೆ ನಿಮ್ಮದಿರಬಹುದು. ಆದ್ರೆ ದಾಸ ಮಾಡಿರೋ ರೋಲ್ ರಾಜಕಾರಣಿಯಂತೆ. ಜೈಲಿಗೆ ಸೇರಿದ ಮೇಲೆ 2029ರಲ್ಲಿ ದರ್ಶನ್ ಬಹಿರಂಗವಾಗಿ ರಾಜಕಾರಣಕ್ಕೆ ಬರುತ್ತಾರೆ ಅಂತ ಶಾಸ್ತ್ರಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಆದ್ರೆ ದಾಸ ಡೆವಿಲ್ ಸಿನಿಮಾದಲ್ಲೇ ರಾಜಕಾರಣಿಗಳ ಅವತಾರ ಎತ್ತಿದ್ದಾರೆ ಅನ್ನೋ ಸುಗ್ಗಿ ಸಮಾಚಾರ ಸಿಕ್ಕಿದೆ.
ದಾಸ ಇಲ್ಲಿ ಡಬಲ್ ರೋಲ್ನಲ್ಲಿ ಮಿಂಚ್ತಾರೆ. ಒಂದು ರಾಜಕಾರಣಿ ಆದ್ರೆ ಮತ್ತೊಂದು ರೋಲ್ಅನ್ನ ನೀವು ಸಿನಿಮಾದಲ್ಲೇ ನೋಡಬೇಕು. ಯಾಕಂದ್ರೆ ಅದನ್ನ ಇಲ್ಲಿ ಹೇಳ್ಬಿಟ್ರೆ ಸಿನಿಮಾ ಮಜಾ ಹೋಗಬಹುದುಯ. ಬಟ್ ಆ ಕ್ಯಾರೆಕ್ಟರ್ ಒಗ್ಗೆ ಒಂದು ಲಿಂಕ್ ಕೊಡೋದಾದ್ರೆ, ರೆಬೆಲ್ ಸ್ಟಾರ್ ಅಂಬರೀಶ್ ಹಾಗು ಮಾಲಾಶ್ರೀ ನಟಿಸಿರೋ ರಾಣಿ ಮಹಾರಾಣಿ ಸಿನಿಮಾ ನೆನಪಿಸಿಕೊಳ್ಳಬಹುದು..
ಡೆವಿಲ್ ಸಿನಿಮಾದ ಸಧ್ಯ ಕನ್ನಡ ಸಿನಿ ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿದೆ. ಸಿನಿಮಾದ ಮೇಕಿಂಗ್ಗಳು ಒಂದೊಂದಾಗೆ ಹೊರ ಬರುತ್ತಿದ್ದು, ದರ್ಶನ್ ಇಲ್ಲದೇ ಪ್ರಚಾರ ಮಾಡಬೇಕಿದೆ. ಇದಕ್ಕಾಗಿ ನಿರ್ದೇಶಕ ನಿರ್ಮಾಪಕ ಮಿಲನಾ ಪ್ರಕಾಶ್ ತಯಾರಿ ಕೂಡ ಮಾಡಿದ್ದಾರೆ.