ಹೊಸ ವರ್ಷದಲ್ಲಿ ಹೊಸ ಸುದ್ದಿ ಕೊಟ್ಟ 'ಡೆವಿಲ್': ಮತ್ತೆ ಹಳೆ ಕೆಲಸಕ್ಕೆ ಕೈ ಹಾಕಿದ ನಟ ದರ್ಶನ್!

ನಟ ದರ್ಶನ್ ಸಿನಿ ಖರಿಯರ್ ಖತಂ. ಕೊಲೆ ಕೇಸ್​ನಲ್ಲಿ ಸಿಕ್ಕಿ ಬಿದ್ದು ಸ್ಟಾರ್​​​ ಪಟ್ಟಕ್ಕೆ ಕಳಂಕಾ ತಂದ್ಬಿಟ್ರಲ್ಲಾ ದರ್ಶನ್.. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಫಸ್ಟ್ ಟೈಂ ಒಬ್ಬ ಸ್ಟಾರ್​ ಕೊಲೆ ಕೇಸ್​ ಹೊತ್ತಿದ್ದಾರೆ ಅಂದ್ರೆ ಚಿತ್ರರಂಗದ ಘನತೆ ಏನಾಗ್ಬೇಕು.

First Published Jan 2, 2025, 11:22 AM IST | Last Updated Jan 2, 2025, 11:22 AM IST

ನಟ ದರ್ಶನ್ ಸಿನಿ ಖರಿಯರ್ ಖತಂ. ಕೊಲೆ ಕೇಸ್​ನಲ್ಲಿ ಸಿಕ್ಕಿ ಬಿದ್ದು ಸ್ಟಾರ್​​​ ಪಟ್ಟಕ್ಕೆ ಕಳಂಕಾ ತಂದ್ಬಿಟ್ರಲ್ಲಾ ದರ್ಶನ್.. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಫಸ್ಟ್ ಟೈಂ ಒಬ್ಬ ಸ್ಟಾರ್​ ಕೊಲೆ ಕೇಸ್​ ಹೊತ್ತಿದ್ದಾರೆ ಅಂದ್ರೆ ಚಿತ್ರರಂಗದ ಘನತೆ ಏನಾಗ್ಬೇಕು. ಸೋ ದರ್ಶನ್​ ಚಿತ್ರರಂಗದಿಂದ ಬ್ಯಾನ್ ಆಗ್ಬೇಕು.. ಈ ತರದ ಸ್ಟೇಟ್ಮೆಂಟ್​ಗಳು ದರ್ಶನ್ ಜೈಲು ಸೇರಿದ್ದಾಗ ಭಾರಿ ಸೌಂಡ್ ಮಾಡಿದ್ವು. 2024 ದರ್ಶನರ ಮತ್ತೊಂದು ಮುಖವನ್ನ ಪರಿಚಯ ಮಾಡಿದೆ. ಸಿನಿಮಾ ಮಾಡಿ ರಂಜಿಸಬೇಕಿದ್ದ ನಟ ಕೊಲೆ ಕೇಸ್​​ನ ಮೈ ಮೇಲೆ ಎಳೆದುಕೊಂಡು 6 ತಿಂಗಳು ಜೈಲು ಖೈದಿಯಾಗಿದ್ರು. ಈಗ ಜಾಮೀನಿನ ಮೇಲೆ ಓಡಾಡ್ಕೊಂಡಿರೋ ಈ ಹೀರೋ ಹೊಸ ವರ್ಷದ ದಿನ ಹೊಸ ಸುದ್ದಿ ಕೊಟ್ಟಿದ್ದಾರೆ. ದರ್ಶನ್ ಮತ್ತದೇ ಹಳೇ ಕೆಲಸಕ್ಕೆ ಕೈ ಹಾಕಿದ್ದಾರೆ. 

ಹಾಗಂತ ಅದು ಕೊಲೆ ಆರೋಪ ಹೊರುವಂತಹ ಕೆಲಸ ಅಲ್ಲ. ವೃತ್ತಿ ಬದುಕಿನ ಸಿನಿಮಾ ಕೆಲಸ. ನಟ ದರ್ಶನ್​​​ಗೆ ಬೆನ್ನು ಬೇನೆ ಕಮ್ಮಿ ಆಗಿಲ್ಲ. ಆಪರೇಷನ್ ಇಲ್ದೆ ಬೆನ್ನು ಮೂಳೆ ಸರಿ ಮಾಡಿಕೊಳ್ತೀನಿ ಅಂತ ಪಣ ತೊಟ್ಟಿರೋ ದರ್ಶನ್, ಮೈಸೂರಲ್ಲಿ ಫಾರ್ಮ್ ಹೌಸ್ ಸೇರ್ಕೊಂಡು ತೆರೆಪಿ ಟ್ರೀಟ್ಮೆಂಟ್​​​​​ ಪಡೀತಿದ್ದಾರೆ. ಹೀಗಾಗಿ ದರ್ಶನ್ ಸಿನಿಮಾ ಕೆಲಸ ಶುರು ಮಾಡೋದು ಸಧ್ಯಕ್ಕಂತು ಇಲ್ಲ ಅಂತ ಟಾಕ್ ಎದ್ದಿತ್ತು. ಆದ್ರೀಗ ದರ್ಶನ್ ಮತ್ತೆ ಕೆಲಸಕ್ಕೆ ಮರಳಿದ್ದಾರಂತೆ. ಕೊಲೆ ಕೊಟ್ಟ ಶಾಕ್​​ನಿಂದ ಅರ್ಧಕ್ಕೆ ನಿಂತಿದ್ದ ಡೆವಿಲ್ ಸಿನಿಮಾ ಕೆಲಸಕ್ಕೆ ಹೊಸ ವರ್ಷವೇ ಕಿಕ್​ ಸ್ಟಾರ್ಟ್ ಕೊಟ್ಟಿದ್ದಾರಂತೆ ದರ್ಶನ್. ಮೈಸೂರಿನಿಂದ ಬೆಂಗಳೂರಿಗೆ ಬಂದಿರೋ ದರ್ಶನ್ ಇಂದು ಮುಂಜಾನೆ ಡೆವಿಲ್​ ರೋಲ್​ಗೆ ಒಂದು ಗಂಟೆಗಳ ಕಾಲ ವಾಯ್ಸ್​ ಕೊಟ್ಟಿದ್ದಾರಂತೆ. 

ಅಷ್ಟೆ ಅಲ್ಲ ಶೇಕಡ 50 ರಷ್ಟು ಶೂಟಿಂಗ್ ಮುಗಿಸಿರೋ ಡೆವಿಲ್​​​​​ ಇನ್ನುಳಿದ ಚಿತ್ರೀಕರಣವನ್ನ ಮಾರ್ಚ್​​​​ನಿಂದ ಶುರು ಮಾಡಲಿದ್ದಾರಂತೆ.. ಡೆವಿಲ್​ ಸಿನಿಮಾ ಶೂಟಿಂಗ್​ ಸೆಟ್​ನಿಂದಲೇ ಖಾಕಿ ಪಡೆ ಕೊಲೆ ಆರೋಪದಲ್ಲಿ ದರ್ಶನ್​​ರನ್ನ ಎತ್ತಾಕೊಂಡು ಬಂದಿದ್ರು. ರೇಣುಕಾಸ್ವಾಮಿ ಕೊಲೆ ವಿಚಾರ ಯಾರಿಗೂ ಗೊತ್ತೇ ಇಲ್ಲದಂತೆ ನಟ ದರ್ಶನ್ ಅಂದು ಚಿತ್ರೀಕರಣದಲ್ಲಿ ಭಾಗಿ ಆಗಿದ್ರು. ಹೀಗಾಗಿ ಡೆವಿಲ್ ಡೈರೆಕ್ಟರ್​ ಮಿಲನಾ ಪ್ರಕಾಶ್​​ ಈ ಕೊಲೆ ಕೇಸ್​ ನ 164 ಸಾಕ್ಷಿಯಾಗಿದ್ದಾರೆ. ಡೆವಿಲ್​ ಸಿನಿಮಾ ಕೆಲಸವನ್ನ ದರ್ಶನ್ ಜೊತೆ ಶುರು ಮಾಡಬೇಕು ಅಂದ್ರೆ ಮೊದಲು ಕೋರ್ಟ್​ಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆದು ಶುರು ಮಾಡಬೇಕು. ಆ ಕೆಲಸ ಆಗಿದ್ಯಾ ಅನ್ನೋ ಬಗ್ಗೆ ಮಾಹಿತಿ ಇಲ್ಲ. ಬಟ್ ದರ್ಶನ್ ಡೆವಿಲ್ ಕೆಲಸ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಮಾತ್ರ ಗುಲ್ಲೆದ್ದಿದೆ.