ಅಂದು ಅಕ್ಕ, ಭಾವಾನೆ ಎಲ್ಲಾ.. ಹಣ ಅಹಂಕಾರ ಬಂದ ಮೇಲೆ ಫ್ಯಾಮಿಲಿ ದೂರ..!

ದರ್ಶನ್ ಹಣ ಅಹಂಕಾರದಿಂದ  ಎಲ್ಲರನ್ನೂ ದೂರವಿಟ್ಟರು. ಕೆಟ್ಟ ಗೆಳೆಯರ ಸಂಘದಿಂದ  ದರ್ಶನ್‌ ಕಂಪ್ಲೀಟ್ ಬದಲಾಗಿ ಹೋದ್ರು. ರೇಣುಕಾ ಸ್ವಾಮಿಯನ್ನ ಕೊಲೆ ಮಾಡುವ ಹಂತಕ್ಕೆ ಇಳಿದುಬಿಟ್ಟಿದ್ರು.

First Published Jul 12, 2024, 8:53 AM IST | Last Updated Jul 12, 2024, 8:54 AM IST


ದರ್ಶನ್ ಎಷ್ಟೇ ಮನಸ್ಥಾಪವಿದ್ರೂ ಎಷ್ಟೇ ಆಗಲಿ ಒಡಹುಟ್ಟಿದವರಲ್ಲವೇ ಅಕ್ಕನಿಗೆ ತಮ್ಮನನ್ನ ಈ ಪರಿಸ್ಥಿಯಲ್ಲಿ ಕೈ ಬಿಡುವ ಮನಸ್ಸಾಗಲಿಲ್ಲ. ಇಲ್ಲೀವರೆಗೆ ಎರಡು ಬಾರಿ  ದರ್ಶನ್ ನ(Darshan) ನೋಡೋಕೆ ಅವರ ಅಕ್ಕ ಭಾವ ಜೈಲಿಗೆ(Jail) ಬಂದು ಹೋಗಿದ್ದಾರೆ. ಅಕ್ಕನ ಮಗ ಮಾವನನ್ನು ನೋಡಲು ಮತ್ತೊಮ್ಮೆ ಬಂದು ಹೋಗಿದ್ದಾನೆ. ಮಾವನಿಗಾಗಿ ಹಣ್ಣು ಹಂಪಲು ತಂದು ಕೊಟ್ಟಿದ್ದಾನೆ. ಕುಟುಂಬದ ಜೊತೆ ಎಲ್ಲವೂ ಚೆನ್ನಾಗಿದ್ದಾಗ ದರ್ಶನ್ ಹೇಗಿದ್ರು ಅನ್ನೋದಕ್ಕೆ ಈ ವಿಡಿಯೋಗಳೇ ಸಾಕ್ಷಿ. ಅಕ್ಕನ ಗಂಡ ಭಾವನನ್ನು ದರ್ಶನ್ ತಂದೆಯಂತೆ ಗೌರವಿಸುತ್ತಿದ್ದರು. ತಮ್ಮನ ಕಂಡರೆ ದಿವ್ಯಾ ತೂಗುದೀಪ ಅವರಿಗೆ ಅದೆಷ್ಟು ಪ್ರೀತಿ. ದರ್ಶನ್ ಹೇಗೆ ಬದಲಾಗಿ ಹೋದ್ರು. ತೂಗುದೀಪ ಶ್ರೀನಿವಾಸ್ ಅವರಿಗೆ ಮೂರು ಜನ ಮಕ್ಕಳು. ದಿವ್ಯ, ದರ್ಶನ್ ದಿನಕರ್, ತೂಗುದೀಪ ಶ್ರೀನಿವಾಸ್ ತೀರಿ ಹೋದಾಗಲಂತೂ   ದರ್ಶನ್ ತಾಯಿ ಮೀನಾ ತೂಗುದೀಪ(Meena Thoogudeepa) ಒಪ್ಪೊತ್ತಿನ ಊಟಕ್ಕೂ ಕಷ್ಟ ಪಟ್ಟಿದ್ದರು. ಮಕ್ಕಳು ತಂದೆಯ ಹೆಸರನ್ನು ಉಳಿಸಬೇಕೆಂಬ ಅತೀವ ಆಸೆ ಹೊತ್ತಿದ್ದರು. ಅಯ್ಯೋ ತಾಯಿ ಹೃದಯದ ಮಾತುಗಳನ್ನು ಕೇಳುತ್ತಿದ್ದರೆ ಎಂಥವರಿಗೂ ಕರುಳು ಹಿಂಡುವಂತಾಗುತ್ತದೆ. ಅಂಥಾ ಪರಿಸ್ಥಿಯಿಂದ ದೇವರು ಒಳ್ಳೆಯ ಬದುಕಿಗೆ ನಾಂದಿ ಹಾಡಿದ್ದನು. ದರ್ಶನ್‌ರಿಂದ ಅವರ ಸಿನಿಮಾ ಕೆರಿಯರ್‌ನ ಯಶಸ್ಸಿನಿಂದ ಕಷ್ಟಗಳೆಲ್ಲಾ ದೂರಾಗಿದ್ದವು. ಆದರೆ ಯಾವಾಗ ಕೆಟ್ಟ ಸಂಘ ಸೇರಿದ್ರೋ. ಯಾವಾಗ ದರ್ಶನ್ ಕಿವಿ ಹಿತ್ತಾಳೆ ಕಿವಿಯಾಯ್ತೋ. ಯಾವಾಗ ಅಫೇರ್‌ಗಳು ಇಟ್ಟುಕೊಂಡರೋ ಅಲ್ಲಿಂದ ಹೆಂಡತಿ, ಅಮ್ಮಾ, ತಮ್ಮ ಅಕ್ಕ ಭಾವ ಎಲ್ಲರೂ ದೂರವಾಗಿದ್ದರು. ಎಲ್ಲರಿಗೂ ದರ್ಶನ್ ಅವಾಜ್ ಹಾಕಿದ್ದರು. ಅಮ್ಮಾ ತಮ್ಮನ ಮೇಲೂ ಹಲ್ಲೆ ಮಾಡಿದ್ದರೆಂಬ ವರದಿಯಾಗಿದೆ. ದರ್ಶನ್ ಬದಲಾಗೋಕೆ ಅವರ ಆತ್ಮೀಯರಾಗಿದ್ದ ಆ ಡಿ ಗ್ಯಾಂಗ್‌ ಕಾರಣವೆನ್ನುತ್ತಾರೆ ಹಲವರು. 

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಇಂದು ಆರೋಗ್ಯ ಸಮಸ್ಯೆ ಕಾಡಲಿದ್ದು, ಆತ್ಮೀಯರಿಗಾಗಿ ವ್ಯಯ ಮಾಡುವ ಸಾಧ್ಯತೆ

Video Top Stories