
ದರ್ಶನ್ ಹೀರೋಯಿನ್ಸ್ ಕಾಣೆಯಾಗಿದ್ದೆಲ್ಲಿ? ರಾಬರ್ಟ್ ಚೆಲುವೆ ಆಶಾ ಭಟ್ ಆಶಾಭಂಗ!
ದರ್ಶನ್ರಂಥಾ ಬಿಗ್ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡಬೇಕು ಅನ್ನೋದು ಅನೇಕ ನಟಿಮಣಿಯರ ಕನಸು. ದರ್ಶನ್ಗಿರೋ ಅಭಿಮಾನಿ ಬಳಗದಲ್ಲಿ ಒಂದು 10 ಪರ್ಸೆಂಟ್ ತಮಗೆ ಸಿಕ್ರೂ ತಾವು ಸೆಟಲ್ ಅಂತ ಭಾವಿಸೋ ನಟಿಯರಿದ್ದಾರೆ.
ದರ್ಶನ್ರಂಥಾ ಬಿಗ್ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡಬೇಕು ಅನ್ನೋದು ಅನೇಕ ನಟಿಮಣಿಯರ ಕನಸು. ದರ್ಶನ್ಗಿರೋ ಅಭಿಮಾನಿ ಬಳಗದಲ್ಲಿ ಒಂದು 10 ಪರ್ಸೆಂಟ್ ತಮಗೆ ಸಿಕ್ರೂ ತಾವು ಸೆಟಲ್ ಅಂತ ಭಾವಿಸೋ ನಟಿಯರಿದ್ದಾರೆ. ಆದ್ರೆ ದರ್ಶನ್ ಜೊತೆ ನಟಿಸೋ ಅದೃಷ್ಟ ಸಿಕ್ಕರೂ ಮಾತ್ರ ಕ್ಲಿಕ್ ಆಗದೇ ಕಾಣೆಯಾದ ಚೆಲುವೆಯರ ಕುರಿತ ಕಹಾನಿ ಇಲ್ಲಿದೆ ನೊಡಿ. ಸ್ಯಾಂಡಲ್ವುಡ್ ನಲ್ಲಿ ಅತಿದೊಡ್ಡ ಫ್ಯಾನ್ ಫಾಲೋವಿಂಗ್ ಹೊಂದಿರೋ ದರ್ಶನ್ ಜೊತೆಗೆ ನಟಿಸೋ ಚಾನ್ಸ್ ಸಿಕ್ಕುತ್ತೆ ಅಂದ್ರೆ ಅದೊಂದು ಅದೃಷ್ಟ ಅಂತ ಭಾವಿಸ್ತಾರೆ ಅನೇಕ ಹಿರೋಯಿನ್ಸ್. ದರ್ಶನ್ ಜೊತೆ ನಟಿಸಿದ್ರೆ ಅವರಿಗಿರೋ ಅಭಿಮಾನಿ ಪಡೆ ತಮ್ಮನ್ನೂ ಪ್ರೀತಿಸುತ್ತೆ ಸೋ ತಮ್ಮ ಲಕ್ಕು ಖುಲಾಯಿಸುತ್ತೆ ಅನ್ನೋದು ನಟಿಯರ ಕನಸು. ಆದ್ರೆ ದರ್ಶನ್ ಜೊತೆ ನಟಿಸೋ ಕನಸು ನನಸಾದ್ರೂ ಸಿನಿರಂಗದಲ್ಲಿ ಮಾತ್ರ ಲಕ್ಕು ಖುಲಾಯಿಸದ ಹೀರೋಯಿನ್ಸ್ ಕೂಡ ಇದ್ದಾರೆ.
ರಾಬರ್ಟ್ ಮೂವಿನಲ್ಲಿ ದರ್ಶನ್ ಜೊತೆಗೆ ಮಿಂಚಿದ್ದು ಭದ್ರಾವತಿ ಬ್ಯೂಟಿ ಆಶಾ ಭಟ್. ಕನ್ನಡದ ಈ ಹುಡುಗಿ ಮಾಡೆಲಿಂಗ್ನಲ್ಲಿ ಮಿಂಚಿ ಜಂಗ್ಲಿ ಅನ್ನೋ ಬಾಲಿವುಡ್ ಸಿನಿಮಾದಲ್ಲಿ ನಟಿಸೋ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ರು. ಅದ್ಯಾಕೋ ಬಾಲಿವುಡ್ ಕೈ ಹಿಡಿಯಲಿಲ್ಲ. ತನ್ನ ತವರುಮನೆ ಕನ್ನಡದಲ್ಲಿ ಮಿಂಚಬೇಕು ಅಂತ ಆಸೆ ಪಟ್ಟು ಬಂದಿದ್ದು ಆಶಾ ಭಟ್. ಅಸಲಿಗೆ ರಾಬರ್ಟ್ ಸಿನಿಮಾಗೆ ಆಶಾ ಕಾಡಿ ಬೇಡಿ ಚಾನ್ಸ್ ಪಡೆದಿದ್ದು. ತಮ್ಮ ಪರಿಚಿತರೊಬ್ಬರ ಮೂಲಕ ದರ್ಶನ್ ತಾಯಿಯನ್ನ ಭೇಟಿ ಮಾಡಿ, ಅವರ ಶಿಫಾರಸ್ಸಿನಿಂದ ರಾಬರ್ಟ್ ಸಿನಿಮಾಗೆ ಆಯ್ಕೆ ಆಗಿದ್ರು ಆಶಾ. ರಾಬರ್ಟ್ ಸಿನಿಮಾ ಬಿಗ್ ಸಕ್ಸಸ್ ಆಯ್ತು. ದರ್ಶನ್ ಜೊತೆಗೆ ಆಶಾ ಮಸ್ತ್ ಆಗಿ ಕುಣಿದ ‘ಕಣ್ಣು ಹೊಡೆಯಾಕ’ ಹಾಡಂತೂ ಸೂಪರ್ ಹಿಟ್ ಆಯ್ತು.
ಸಿನಿಮಾ ಏನೋ ದೊಡ್ಡ ಗೆಲುವು ಕಂಡಿತು. ಆದ್ರೆ ಆಶಾ ಅಂದುಕೊಂಡಂತೆ ಅವರಿಗೆ ದೊಡ್ಡ ದೊಡ್ಡ ಅವಕಾಶಗಳು ಬಾರಲೇ ಇಲ್ಲ. 2022ರಲ್ಲಿ ತೆಲುಗಿನಲ್ಲಿ ಓರಿ ದೇವುಡಾ ಅನ್ನೋ ಸಿನಿಮಾ ಮಾಡಿದ್ರು. ಅದೂ ಕೂಡ ಸೋತು ಹೋದ ಮೇಲೆ ಆಶಾ ಕಾಣೆಯಾಗಿದ್ದಾರೆ. ದರ್ಶನ್ ಜೊತೆ ನಟಿಸಿದ ಮತ್ತೊಬ್ಬ ನಟಿಮಣಿ ಸಿನಿರಂಗದಲ್ಲಿ ಅವಕಾಶ ಸಿಗದೇ ಈಗ ಸಾಫ್ಟ್ ವೇರ್ ವೃತ್ತಿ ಮಾಡಿಕೊಂಡಿದ್ದಾರೆ. ಆಕೆ ಬೇರ್ಯಾರು ಅಲ್ಲ ದರ್ಶನ್ ಜೊತೆಗೆ ಜಗ್ಗು ದಾದ ಸಿನಿಮಾದಲ್ಲಿ ನಟಿಸಿದ್ದ ಕ್ಯೂಟ್ ಚೆಲುವೆ ದೀಕ್ಷಾ ಸೇಠ್. ದೆಹಲಿ ಮೂಲದ ದೀಕ್ಷಾ 2010ರಲ್ಲಿ ವೇದಮ್ ಸಿನಿಮಾದಲ್ಲಿ ನಟಿಸೋ ಮೂಲಕ ಬಣ್ಣದ ದುನಿಯಾಗೆ ಬಂದ್ರು.
ತೆಲಗು, ತಮಿಳು, ಹಿಂದಿಯ ಹಲವು ಚಿತ್ರಗಳಲ್ಲಿ ನಟಿಸಿದ ಈಕೆಗೆ ದೊಡ್ಡ ಗೆಲುವು ಎಲ್ಲೂ ಸಿಗಲಿಲ್ಲ. ದರ್ಶನ್ ಜೊತೆಗೆ ಜಗ್ಗುದಾದಗೆ ಆಯ್ಕೆಯಾದಾಗ ತನ್ನ ಅದೃಷ್ಟ ಬದಲಾಗುತ್ತೆ ಅಂತ ಭಾವಿಸಿದ್ರು. ಆಧ್ರೆ ಜಗ್ಗುದಾದ ಕೂಡ ಪ್ಲಾಫ್ ಆಯ್ತು. ಈಕೆಯ ಕರೀಯರ್ ಕೂಡ ಖತಂ ಆಯ್ತು. ಸದ್ಯ ದೀಕ್ಷಾ ಸಿನಿಮಾ ಬಿಟ್ಟು ಸಾಫ್ಟ್ ವೇರ್ ಕ್ಷೇತ್ರದಲ್ಲಿ ಸೆಟಲ್ ಆಗಿದ್ದಾರೆ, ಇದು ದೀಪಾ ಸನ್ನಿಧಿ ಅನ್ನೊ ಚೆಲುವೆಯ ಕಥೆ. ಅಸಲಿಗೆ ಚಿಕ್ಕಮಗಳೂರು ಮೂಲದ ಈ ಚೆಲುವೆ ಬೆಳ್ಳಿತೆರೆಗೆ ಬಂದಿದ್ದು ದರ್ಶನ್ ನಟನೆಯ ಸಾರಥಿ ಸಿನಿಮಾ ಮೂಲಕ. ಸಾರಥಿ ಅದೆಷ್ಟು ದೊಡ್ಡ ಹಿಟ್ ಆಯ್ತು ಅನ್ನೋದು ಗೊತ್ತೇ ಇದೆ. ಸೋ ಮೊದಲ ಹೆಜ್ಜೆಯಲ್ಲೇ ಭರ್ತಿ ಅದೃಷ್ಟ ಈಕೆಗೆ ಒಲಿದು ಬಂದಿತ್ತು.
ಇನ್ನೂ ಸಾರಥಿ ನಡೆಯುವಾಗಲೇ ದೀಪಾಗೆ ಪರಮಾತ್ಮ ಚಿತ್ರದಲ್ಲಿ ಅಪ್ಪು ಜೊತೆಗೆ ನಟಿಸೋ ಅವಕಾಶ ಒಲಿದು ಬಂದಿತ್ತು. ಬಳಿಕ ಯಶ್, ಗಣೇಶ್ ಜೊತೆಗೆ ನಟಿಸುವ ಗೋಲ್ಡನ್ ಚಾನ್ಸ್. ದೀಪಾಳದ್ದು ಭಲೇ ಅದೃಷ್ಟವೋ ಅದೃಷ್ಟ ಅಂತ ಫ್ಯಾನ್ಸ್ ಕೊಂಡಾಡಿದ್ರು. ಇಂತಾ ದೀಪಾ ಚಕ್ರವರ್ತಿ ಸಿನಿಮಾದಲ್ಲಿ ನಟಿಸಿದ್ದೇ ಕೊನೆ, ಮತ್ತೆ ಬಣ್ಣ ಹಚ್ಚಿಲ್ಲ. ಭರ್ತಿ 8 ವರ್ಷಗಳಿಂದ ಈ ಚೆಲುವೆ ಬಣ್ಣದ ಲೋಕದಿಂದ ಮಿಸ್ಸಿಂಗ್. ಮೊದಲ ಚಿತ್ರವೂ ದರ್ಶನ್ ಜೊತೆ ಕೊನೆ ಚಿತ್ರವೂ ದರ್ಶನ್ ಜೊತೆ. ಇದು ದೀಪಾ ಕಥೆ ಕಂ ವ್ಯಥೆ. ಒಟ್ನಲ್ಲಿ ದರ್ಶನ್ ಜೊತೆ ನಟಿಸೋ ಚಾನ್ಸ್ ಸಿಕ್ಕರೂ ಈ ನಟಿಮಣಿಯರಿಗೆ ದರ್ಶನ್ಗೆ ಒಲಿದ ಅದೃಷ್ಟ ಒಲೀಲಿಲ್ಲ. ದಾಸನ ಜೊತೆಗೆ ಸ್ಕ್ರೀನ್ ಶೇರ್ ಮಾಡಿದ್ರೂ ಕರೀಯರ್ ಆರಕ್ಕೇರಲಿಲ್ಲ.