ಸುಬ್ಬಿನಾ ‘ಮುದ್ದು ಸೊಸೆ’ ಅಂತ ಮುದ್ದು ಮಾಡಿದ್ದರಾ ಮೀನಮ್ಮ?: ಅಮ್ಮ, ಅಕ್ಕನ ಕುಮ್ಮಕ್ಕು.. ದರ್ಶನ್‌ಗೆ ತಂತು ಆಪತ್ತು!
ಸುಬ್ಬಿನಾ ‘ಮುದ್ದು ಸೊಸೆ’ ಅಂತ ಮುದ್ದು ಮಾಡಿದ್ದರಾ ಮೀನಮ್ಮ..? ದಾರಿ ತಪ್ಪಿದ ದಾಸನಿಗೆ.. ಬುದ್ದಿ ಹೇಳಲಿಲ್ವಾ ಅಮ್ಮ, ಅಕ್ಕ..? ತೂಗುದೀಪ ಮನೆ ಜಡೆ ಜಗಳ.. ದಾಸನ ಅವನತಿಗೆ ಇದೇ ಕಾರಣ..! ಇದೇ ಈ ಹೊತ್ತಿನ ವಿಶೇಷ.
ಸುಬ್ಬಿನಾ ‘ಮುದ್ದು ಸೊಸೆ’ ಅಂತ ಮುದ್ದು ಮಾಡಿದ್ದರಾ ಮೀನಮ್ಮ..? ದಾರಿ ತಪ್ಪಿದ ದಾಸನಿಗೆ.. ಬುದ್ದಿ ಹೇಳಲಿಲ್ವಾ ಅಮ್ಮ, ಅಕ್ಕ..? ತೂಗುದೀಪ ಮನೆ ಜಡೆ ಜಗಳ.. ದಾಸನ ಅವನತಿಗೆ ಇದೇ ಕಾರಣ..! ಇದೇ ಈ ಹೊತ್ತಿನ ವಿಶೇಷ. ಸುಬ್ಬಿ ತಂದ ಸೌಭಾಗ್ಯ.. ನಾನು.. ದರ್ಶನ್ ಕೊಲೆ ಆರೋಪ ಹೊತ್ತು ಜೈಲು ಸೇರುವಂತೆ ಆಗಿದ್ದು ಪವಿತ್ರಾ ಗೌಡ ದೆಸೆಯಿಂದ. ದರ್ಶನ್ ಫ್ಯಾಮಿಲಿ ಪವಿತ್ರಾಳನ್ನ ಮೊದಲಿಂದಲೂ ದೂರವಿಟ್ಟುಬಿಟ್ಟಿದ್ರೆ ದರ್ಶನ್ ಬದುಕಲ್ಲಿ ಇಂಥಾ ಅನಾಹುತ ನಡೀತಾನೇ ಇರ್ಲಿಲ್ಲ ಅನ್ನೋದು ಅಭಿಮಾನಿಗಳ ಮಾತು. ಆದ್ರೆ ಅಚ್ಚರಿ ಅಂದ್ರೆ ತೂಗುದೀಪ ಫ್ಯಾಮಿಲಿ ಪವಿತ್ರಾಳನ್ನ ಚಿಕ್ಕಸೊಸೆ ಅಂತ ಒಪ್ಪಿಕೊಂಡು ಬಿಟ್ಟಿತ್ತು.
ಅದುವೇ ಮುಂದೆ ನಡೆಯೋ ಅನಾಹುತಕ್ಕೆ ಕಾರಣವಾಯ್ತು. ಹಾಗಾದ್ರೆ ದರ್ಶನ್-ಪವಿತ್ರಾ ಜೊತೆ ರಾಜಾರೋಷವಾಗಿ ಸಂಬಂಧ ಇಟ್ಟುಕೊಂಡ್ರೆ ವಿಜಯಲಕ್ಷ್ಮೀ ಸುಮ್ಮನಾದ್ರಾ,. ಅತ್ತೆ, ನಾದಿನಿ ಮತ್ತೊಬ್ಬಳು ಸವತಿ ವಿರುದ್ದ ವಿಜಯಲಕ್ಷ್ಮೀ ಹೋರಾಡಿದ್ದು ಹೇಗೆ. ಅಸಲಿಗೆ ದರ್ಶನ್-ಪವಿತ್ರಾ ಸಂಬಂಧದ ವಿಚಾರ ಗೊತ್ತಾದಾಗ ವಿಜಯಲಕ್ಷ್ಮೀ ಕೆಂಡವಾಗಿದ್ರು. ಪವಿತ್ರಾಗೆ ಬೈದು ಬುದ್ದಿ ಹೇಳಿ ತನ್ನ ಪತಿಯಿಂದ ದೂರ ಇರುವಂತೆ ಹೇಳಿದ್ರು. ಆದ್ರೆ ಖುದ್ದು ದರ್ಶನ್ ಪವಿತ್ರಾ ಸಂಗ ಬಿಡೋದಕ್ಕೆ ರೆಡಿ ಇರಲಿಲ್ಲ. ಅದ್ಯಾಕೆ ಅಂತ ಹುಡುಕಹೋದ ವಿಜಯಲಕ್ಷ್ಮೀಗೆ ಬೆಚ್ಚಿಬೀಳಿಸೋ ವಿಚಾರವೊಂದು ಗೊತ್ತಾಗಿತ್ತು.
ಖುದ್ದು ದರ್ಶನ್ ತಾಯಿ, ಸೋದರಿಯೇ ಪವಿತ್ರಾಳ ಬೆಂಬಲಕ್ಕೆ ನಿಂತಿದ್ದಾರೆ ಅನ್ನೋ ವಿಷ್ಯ ಗೊತ್ತಾಗಿತ್ತು. ಅಷ್ಟೇ ಅಲ್ಲ ದಾಸ ತನ್ನಿಂದ ದೂರವಾಗದಂತೆ ಪವಿತ್ರಾ ಒಂದು ದೊಡ್ಡ ಬಲೆಯನ್ನೇ ಹೆಣೆದಿದ್ದಾಳೆ ಅನ್ನೋದು ಕೂಡ ಗೊತ್ತಾಗಿತ್ತು. ಪವಿತ್ರಾ ಗೌಡ ದರ್ಶನ್‌ಗೆ ಸುಬ್ಬ ಅಂತ ಕರೀತಿದ್ರೆ, ದರ್ಶನ್ ಆಕೆಯನ್ನ ಸುಬ್ಬಿಯಂತ ಕರೀತಾ ಇದ್ದನಂತೆ. ಇವರ ಅಕ್ರಮ ಸಂಬಂಧಕ್ಕೆ ದರ್ಶನ್ ತಾಯಿ, ಸೋದರಿ ಸೇರಿದಂತೆ ಅನೇಕ ಆಪ್ತರಿಂದ ಒಪ್ಪಿಗೆ ಸಿಕ್ಕಿಬಿಟ್ಟಿತ್ತು. ಆದ್ರೆ ಸುಬ್ಬಿ ತಂದ ಸೌಭಾಗ್ಯದ ಫಲವಾಗಿ ದರ್ಶನ್ ಜೈಲು ಸೇರುವಂತೆ ಆಯ್ತು. ಒಟ್ಟಾರೆ ದರ್ಶನ್-ವಿಜಯಲಕ್ಷ್ಮೀ-ಪವಿತ್ರಾ ಟ್ರಯಾಂಗಲ್ ಸ್ಟೋರಿನಲ್ಲಿ ಮುಂದಿನ ಸೀನ್ ಏನು ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ.