ಫಾರ್ಮ್‌ಹೌಸ್​ನಲ್ಲಿ ಅಮ್ಮನ ಭೇಟಿ, ಕಣ್ಣೀರಿಟ್ಟ ದರ್ಶನ್; ಈಗ ನೆನಪಾಯ್ತಾ ಅಮ್ಮನ ಮನೆ?

ಜಾಮೀನಿನ ಮೇಲೆ ಬಿಡುಗಡೆಯಾದ ದರ್ಶನ್, ಮೈಸೂರಿನಲ್ಲಿ ತಾಯಿ ಮೀನಾ ತೂಗುದೀಪ ಅವರನ್ನು ಭೇಟಿಯಾಗಿ ಭಾವುಕರಾದರು. ವರ್ಷಗಳ ನಂತರ ತಾಯಿಯ ಮನೆಗೆ ಭೇಟಿ ನೀಡಿದ ದರ್ಶನ್, ತಮ್ಮ ಬೆಳವಣಿಗೆಯಲ್ಲಿ ತಾಯಿಯ ಪಾತ್ರವನ್ನು ಸ್ಮರಿಸಿಕೊಂಡರು.

First Published Dec 31, 2024, 5:04 PM IST | Last Updated Dec 31, 2024, 5:04 PM IST

ಜಾಮೀನು ಪಡೆದು ಆಚೆ ಬಂದಿರೋ ದರ್ಶನ್​ ಮೈಸೂರಿನ ಫಾರ್ಮ್​​ಹೌಸ್​ನಲ್ಲಿ ಬೀಡಬಿಟ್ಟಿದ್ದು, ತಾಯಿಯನ್ನ ಭೇಟಿ ಮಾಡಿದ್ದಾನೆ. ಮೈಸೂರಿನಲ್ಲಿರೋ ಅಮ್ಮನ ಮನೆಗೆ ಹೋಗಿ ಬಂದಿದ್ದಾರೆ. ಇಷ್ಟು ದಿನ ಅಮ್ಮನನ್ನ ಮರೆತು, ಬೇರೆಯವರನ್ನ ಮದರ್ ಇಂಡಿಯಾ ಅಂತ ಕರೆದುಕೊಂಡಿದ್ದ ನಟನಿಗೆ ಈಗ ತಾಯಿಯ ಬೆಲೆ ಗೊತ್ತಾಗಿದೆ. ಮೈಸೂರು ಫಾರ್ಮ್ ಹೌಸ್​​ನಲ್ಲಿ ವಿಶ್ರಾಂತಿ ಪಡೀತಾ ಇರೋ ದರ್ಶನ್  ಮೀನಾ ತೂಗುದೀಪರನ್ನ ಕರೆಸಿಕೊಂಡು, ತಾಯಿಯ ಮಡಿಲಲ್ಲಿ ಮಲಗಿ ಕಣ್ಣೀರು ಹಾಕಿದ್ದಾನೆ.ಈ ನಡುವೆ ಮೈಸೂರಿನ ತಾಯಿ ಮನೆಗೂ ರಾತ್ರೋರಾತ್ರಿ ಹೋಗಿ ಬಂದಿದ್ದಾರೆ. ಅಚ್ಚರಿ ಅಂದ್ರೆ ದರ್ಶನ್​ ತಾಯಿಯ ಮನೆ, ಮನಸಿಂದ ದೂರವಾಗಿ ಬಹಳಾನೇ ವರ್ಷ ಕಳೆದು ಹೋಗಿತ್ತು. ಹಣ, ಕೀರ್ತಿಯ ಮತ್ತಲ್ಲಿ ಮೆರೀತಾ ಇದ್ದ ದರ್ಶನ್ ಹೆತ್ತಮ್ಮನನ್ನ ಮರೆತುಬಿಟ್ಟಿರು.ಅಸಲಿಗೆ ದರ್ಶನ್ ಬೆಳವಣಿಗೆಯಲ್ಲಿ ತಾಯಿ ಮೀನಾ ತೂಗುದೀಪ ಅವರ ಪಾಲು ತುಂಬಾನೇ ದೊಡ್ಡದಿದೆ. ಪತಿ ತೂಗುದೀಪ ಶ್ರೀನಿವಾಸ್ ಕಾಲವಾದ ಮೇಲೆ ಮಕ್ಕಳಿಗೆ ನೆಲೆ ಕಟ್ಟಿಕೊಡೋದಕ್ಕೆ ಮೀನಮ್ಮ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅದ್ರಲ್ಲೂ ನಿನಾಸಂನಲ್ಲಿ ಶಿಕ್ಷಣ ಮುಗಿಸಿ ಸಿನಿಮಾ ನಟನಾಗಬೇಕು ಅಂತ ಆಸೆ ಪಟ್ಟಿದ್ದ ದರ್ಶನ್​ಗಾಗಿ ಮೀನಮ್ಮ ಕಂಡ ಕಂಡ ನಿರ್ಮಾಪಕರ ಮನೆ ಸುತ್ತಿದ್ರು, ನನ್ನ ಮಗನಿಗೊಂದು ಪಾತ್ರ ಕೊಡಿ ಅಂತ ಬೇಡಿಕೊಂಡಿದ್ರು. 

ಸರಳ ಸುಂದರಿ ಚೈತ್ರಾ ಕುಂದಾಪುರ; ಇದ್ಯಾವುದು ದುಬಾರಿ ಸೀರೆ ಅಲ್ವೇ ಅಲ್ಲ