Small Screen
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 11ರ ಫಯರ್ ಬ್ರ್ಯಾಂಡ್ ಸ್ಪರ್ಧಿ ಚೈತ್ರಾ ಕುಂದಾಪುರ.
ಬಿಗ್ ಬಾಸ್ ಮನೆಯಲ್ಲಿ ಈಗಾಗಲೆ ಸುಮಾರು 13 ವಾರಗಳನ್ನು ಕಳೆದಿರುವ ಚೈತ್ರಾ ಕುಂದಾಪುರ ಸಖತ್ ಸಿಂಪಲ್ ಆಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಳ್ಳುತ್ತಾರೆ.
ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಸದಾ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಪ್ರತಿ ದಿನ ಸೆಲ್ವಾರ್ ಧರಿಸುತ್ತಾರೆ,ವೀಕೆಂಡ್‌ನಲ್ಲಿ ಸೀರೆ ಧರಿಸುತ್ತಾರೆ.
ವೀಕೆಂಡ್ ಎಪಿಸೋಡ್‌ನಲ್ಲಿ ಸ್ಪರ್ಧಿಗಳು ಡಿಸೈನರ್ ಡ್ರೆಸ್ ಧರಿಸಿ ಮೇಕಪ್ ಮಾಡಿಕೊಳ್ಳುತ್ತಾರೆ ಆದರೆ ಚೈತ್ರಾ ಕುಂದಾಪುರ ಮಾತ್ರ ಸಿಂಪ್ಲಾಗಿ ಸೀರೆ ಧರಿಸಿರುತ್ತಾರೆ.
ಚೈತ್ರಾ ಕುಂದಾಪುರ ಇನ್‌ಸ್ಟಾಗ್ರಾಂ ಅಕೌಂಟ್‌ನ ಆಪ್ತರು ನೋಡಿಕೊಳ್ಳುತ್ತಿದ್ದಾರೆ. ಪ್ರತಿದಿನ ಚೈತ್ರಾ ಧರಿಸುವ ಸಿಂಪಲ್ ಡ್ರೆಸ್‌ಗಳ ಫೋಟೋವನ್ನು ಅಪ್ಲೋಡ್ ಮಾಡುತ್ತಾರೆ.
ಹೆಣ್ಣುಮಕ್ಕಳಿಗೆ ಲಿಪ್‌ಸ್ಟಿಕ್ ಇಲ್ಲದೆ ದಿನ ಶುರುವಾಗುವುದಿಲ್ಲ ಹೊರ ಬರುವುದಿಲ್ಲ ಆದರೆ ಚೈತ್ರಾ ಕುಂದಾಪುರಗೆ ಬೇಕಿರುವುದು ಕುಂಕುಮ ಮಾತ್ರ.
ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಆಟ ಆಡಿರುವುದಕ್ಕಿಂತ ಹೆಚ್ಚಾಗಿ ಉಸ್ತುವಾರಿ ಮಾಡಿರುವುದೇ ಹೆಚ್ಚು. ಹೀಗಾಗಿ ಚೈತ್ರ ಇದ್ದ ಕಡೆ ನ್ಯಾಯ ಇದ್ದೇ ಇರುತ್ತೆ ಅಂತಿದ್ದಾರೆ.
ಚೈತ್ರಾ ಕುಂದಾಪುರ ಒಮ್ಮೆ ಕಾಟನ್ ಸೀರೆ ಧರಿಸುತ್ತಾರೆ, ಒಮ್ಮೆ ರೇಶ್ಮೆ ಸೀರೆ ಧರಿಸುತ್ತಾರೆ ಮತ್ತೊಮ್ಮೆ ಸಖತ್ ಸಿಂಪಲ್ ಆಗಿರುವ ಆರ್ಗಾನ್ಜ್ ಸೀರೆ ಧರಿಸುತ್ತಾರೆ.