ತನಗಾಗೋ ಕೆಡುಕಿನ ಬಗ್ಗೆ ದರ್ಶನ್‌ಗೆ ಮೊದಲೇ ಸಿಕ್ಕಿತ್ತಾ ಸೂಚನೆ ? ಕೊಲೆ ಘಟನೆಗೂ ಮುನ್ನ ಅರ್ಚಕರನ್ನ ಭೇಟಿ ಮಾಡಿದ್ದ ನಟ ?

ರೇಣುಕಾಸ್ವಾಮಿ ಕೊಲೆಗೂ ಮೊದಲೇ ನಟ ದರ್ಶನ್‌ಗೆ ಏನಾದ್ರು ಕೆಟ್ಟದ್ದು ಆಗುತ್ತೆ ಅನ್ನೋ ಸೂಚನೆ ಸಿಕ್ಕಿದ್ದಂತೆ ಕಾಣುತ್ತೆ. ಯಾಕಂದ್ರೆ ರೇಣುಕಾಸ್ವಾಮಿ ಕೊಲೆಗೂ ಎರಡು ದಿನಗಳ ಮುಂಚೆ ನಟ ದರ್ಶನ್ ಸಂಕಟ ತಳಮಳ ನುಭವಿಸಿದ್ರಂತೆ. ದೇವರ ಮೊರೆ ಹೋಗಿದ್ರಂತೆ.

First Published Jun 30, 2024, 8:57 AM IST | Last Updated Jun 30, 2024, 8:57 AM IST

ಸದ್ಯ ಕರ್ನಾಟಕದಲ್ಲೀಗ ರೇಣುಕಾಸ್ವಾಮಿ ಕೊಲೆಯದ್ದೇ (Renukaswamy murder case) ಸುದ್ದಿ. ನಟ ದರ್ಶನ್‌ದ್ದೇ ನ್ಯೂಸ್. ಕೊಲೆಯಾಗಿ 20 ದಿನ ಕಳೆದಿದೆ. ಇಂದಿಗೂ ಆ ಘನ ಘೋರ ಘಟನೆಯಿಂದ ಹೊರ ಬರೋಕೆ ಸಾಧ್ಯವಾಗುತ್ತಿಲ್ಲ. ಅಯ್ಯೋ ದರ್ಶನ್ (Darshan) ಕೊಲೆ ಮಾಡಿದ್ರಾ ಅನ್ನೋ ಸುದ್ದಿಯನ್ನ ಮರೆಯೋಕೆ ಆಗುತ್ತಿಲ್ಲ. ಅಸಲಿಗೆ ದರ್ಶನ್ ಈ ಕೊಲೆ ಮಾಡಿದ್ರಾ..? ಆ ಕೊಲೆಯಲ್ಲಿ ಹೇಗೆ ಭಾಗಿ ಆದ್ರು ಅಂತ ಗೊತ್ತಿಲ್ಲ. ಆದ್ರೆ ಕೊಲೆಯ A2 ಆರೋಪಿ ಆಗಿ ಪರಪ್ಪನ ಅಗ್ರಹಾರವನ್ನಂತೂ (Parappana Agrahara) ಸೇರಿದ್ದಾರೆ. ದರ್ಶನ್‌ಗೆ ಕೈದಿ ನಂಬರ್ 6106 ಸಿಕ್ಕಿದೆ. ಆತನ ಜೊತೆ ಪವಿತ್ರಾ ಗೌಡ ಸೇರಿ 15 ಮಂದಿ ಆಪ್ತರಿದ್ದಾರೆ. ಈ ಕೊಲೆಗೂ ಮೊದಲೇ ತನಗೆ ಏನೋ ಕೇಡಾಗುತ್ತೆ ಅನ್ನೋ ಸೂಚನೆ ದರ್ಶನ್‌ಗೆ ಮೊದಲೇ ಸಿಕ್ಕಿತ್ತಂತೆ. ರೇಣುಕಾಸ್ವಾಮಿ ಕೊಲೆ ಆಗಿದ್ದು, ಶನಿವಾರದಂದು. ಆದ್ರೆ ಆ ಕೊಲೆ ಆಗೋದಕ್ಕೂ ಎರಡು ಮೂರು ದಿನದ ಹಿಂದೆ ದರ್ಶನ್ ಮನಸ್ಸಲ್ಲೇನೋ ಸಂಕಟ ತಳಮಳ ಅನುಯಭವಿಸಿದ್ರಂತೆ. ನಿದ್ದೆಯೂ ಇಲ್ಲದೇ ಚಡ ಪಡಿಸಿದ್ರಂತೆ. ಆಗ್ಲೇ ದರ್ಶನ್ ನೆನೆಸಿಕೊಂಡಿದ್ದು ಬೆಂಗಳೂರಿನ ಶಕ್ತಿ ದೇವತೆ ಬಂಡೆ ಮಹಾಕಳ್ಳಮ್ಮನನ್ನ(Bande Mahakalamma temple). ಬಂಡೆ ಮಹಾಕಾಳಮ್ಮ ದೇವಸ್ಥಾನದ ಅರ್ಚಕರೊಬ್ಬರನ್ನ ಮನೆಗೆ ಕರೆಸಿಕೊಂಡಿದ್ದ ದರ್ಶನ್ ತನಗೆ ಆಗುತ್ತಿರೋ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ರಂತೆ. ಅದಕ್ಕೆ ಪರಿಹಾರ ಕೊಡುವಂತೆ ಕೇಳಿದ್ರಂತೆ.

ಇದನ್ನೂ ವೀಕ್ಷಿಸಿ:  200 ಅಶ್ಲೀಲ ಮೆಸೇಜ್..ಖಾಕಿ ಮುಂದೆ ಪವಿತ್ರಾ ಹೇಳಿಕೆ !ಕಣ್ಣೀರಲ್ಲಿ ರೇಣುಕಾಸ್ವಾಮಿ ಕುಟುಂಬ, ಗರ್ಭಿಣಿ ಪತ್ನಿ!

Video Top Stories