Darshan: ಉಪ್ಪು ಖಾರ ಇಲ್ಲದ ಊಟ ಸೊಳ್ಳೆ ಕಾಟ! ಪವಿತ್ರಾ ಗೌಡಗೆ ನರಕವಾಯ್ತು ಜೈಲು !

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ 10 ದಿನದಲ್ಲಿ ಸುಮಾರು 3 ಕೆಜಿ ತೂಕ ಕಡಿಮೆ ಆಗಿದ್ದಾರಂತೆ.
 

First Published Jun 25, 2024, 8:40 AM IST | Last Updated Jun 25, 2024, 8:40 AM IST

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy murder case) ನಟ ದರ್ಶನ್‌(Darshan) ಮತ್ತು ಪವಿತ್ರಾ ಗೌಡ(Pavitra gowda) ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ (Parappana agrahara jail). ಇತ್ತ ಇಬ್ಬರಿಗೂ ಜೈಲಿನಲ್ಲಿ ನಿದ್ದೆ ಬರ್ತಿಲ್ವಂತೆ. ಅಲ್ಲದೇ ಪವಿತ್ರಾ ಗೌಡಗೆ ಜೈಲು ನರಕವಾಗಿದ್ದು, ನಟ ದರ್ಶನ್‌ 10 ದಿನದಲ್ಲಿ ಮೂರು ಕೆಜಿ ತೂಕ ಕಡಿಮೆ ಆಗಿದ್ದಾರಂತೆ. ಅಲ್ಲದೇ ಪವಿತ್ರಾ ಜೈಲಿನಲ್ಲಿ ಇನ್ನಿಲ್ಲದ ಕಿರಿಕ್‌ನನ್ನು ಮಾಡುತ್ತಿದ್ದಾರಂತೆ. ಹಾಗಾಗಿ ಜೈಲು ಅಧಿಕಾರಿಗಳು ಇದು ನಿಮ್ಮ ಮನೆಯಲ್ಲ ಜೈಲು ಎಂದು ಹೇಳುತ್ತಿದ್ದಾರಂತೆ. ದರ್ಶನ್‌ಗೂ ಜೈಲು ಊಟ ಸೇರುತ್ತಿಲ್ವಂತೆ, ಅಲ್ಲದೇ ಪ್ರತ್ಯೇಕ ಕೊಠಡಿಯಲ್ಲಿ ಏಕಾಂಗಿಯಾಗಿ ಇದ್ದಾರಂತೆ. ಇವರನ್ನು ನೋಡೋಕೆ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೇಶ್‌, ನಟ ವಿನೋದ್‌ ಪ್ರಭಾಕರ್‌ ಸಹ ಜೈಲಿಗೆ ಬಂದಿದ್ದರು. 

ಇದನ್ನೂ ವೀಕ್ಷಿಸಿ:  Today Horoscope: ಇಂದು ಅಂಗಾರಕ ಸಂಕಷ್ಟ ಇದ್ದು, ಇದನ್ನು ಆಚರಿಸುವುದು ಹೇಗೆ ?

Video Top Stories