ಪವಿತ್ರಾ ಗೌಡಳನ್ನ ಕಣ್ಣೆತ್ತಿಯೂ ನೋಡೋ ಹಾಗಿಲ್ಲ..! ಕುಟುಂಬಸ್ಥರ ಕಂಡೀಷನ್‌ಗೆ ಒಪ್ಪಿದ್ರಾ ದರ್ಶನ್‌..?

ದರ್ಶನ್ ಉಳಿಸಲು ಅಖಾಡಕ್ಕಿಳಿದ ಆಪ್ತರು, ರಾಜಕಾರಣಿಗಳು
ದರ್ಶನ್ ಬೆನ್ನಿಗೆ ನಿಲ್ಲಲು ಆಪ್ತರು, ಕುಟುಂಬಸ್ಥರಿಂದ ಷರತ್ತು!
ಪವಿತ್ರಾ ಸಹವಾಸ ಬಿಟ್ಟರೆ ಕಾನೂನು ಹೋರಾಟ ಎಂಬ ಷರತ್ತು

Share this Video
  • FB
  • Linkdin
  • Whatsapp


ಅದು ಜೂನ್ 9.. ಬೆಳಂ ಬೆಳಗ್ಗೆ ಕೇಳಿ ಬಂದ ಸುದ್ದಿಗೆ ಇಡೀ ರಾಜ್ಯವೇ ಬೆಚ್ಚಿ ಬಿದ್ದಿತ್ತು. ಅದರಲ್ಲೂ ನಟ ದರ್ಶನ್(Darshan) ಆ ಕೊಲೆಯ ರುವಾರಿ ಅನ್ನೋದು ಮತ್ತಷ್ಟು ಶಾಕ್ ಕೊಟ್ಟಿತ್ತು. ಆಗ ಆ ಕೊಲೆ ಹಿಂದಿನ ಕಹಾನಿ ಹುಡುಕುತ್ತಾ ಹೋದಾಗ ಸಿಕ್ಕ ಉತ್ತರವೇ ನಟಿ ಬ್ಯೂಟಿಫುಲ್ ಲೇಡಿ ಪವಿತ್ರಾ ಗೌಡ(Pavitra gowda). ಹೌದು, ಪವಿತ್ರಾ ಗೌಡಗೆ ಕೆಟ್ಟ ಮಸೇಜ್ ಹಾಕಿದ ಅನ್ನೋ ಒಂದೇ ಒಂದು ಕಾರಣಕ್ಕೆ ರೇಣುಕಾಸ್ವಾಮಿ ಅನ್ನೋ ಚಿತ್ರದುರ್ಗ ಮೂಲದ ವ್ಯಕ್ತಿಯನ್ನ ಭರ್ಭರವಾಗಿ ಕೊಂದು ಹಾಕಿದ್ರು. ಆ ಕೊಲೆ ಕೇಸ್ (Renukaswamy murder case) ಆರೋಪದ ಮೇಲೆ ದರ್ಶನ್ ಸೇರಿ 17 ಜನ ಜೊತೆ ಜೈಲು ಸೇರಿದ್ರು. ಈ ಕೊಲೆ ಕೇಸ್‌ನಿಂದ ದರ್ಶನ್‌ನ ಮುಕ್ತ ಮಾಡಬೇಕು ಅನ್ನೋದು ಕುಟುಂಬಸ್ಥರ ಹೋರಾಟ. ದರ್ಶನ್ ವಿರುದ್ಧ ಎಲ್ಲಾ ಭಲವಾದ ಸಾಕ್ಷಿ ಸಿಕ್ಕಿರೋದ್ರಿಂದ ದೊಡ್ಡ ದೊಡ್ಡ ವ್ಯಕ್ತಿಗಳು ದರ್ಶನ್ ಬಚಾವ್ ಮಾಡುವಲ್ಲಿ ಕೈ ಚೆಲ್ಲಿದ್ದಾರೆ. ಆದ್ರೆ ಹೆಂಡತಿ ವಿಜಯಲಕ್ಷ್ಮಿ, ತಾಯಿ ಮೀನಾ ತೂಗುದೀಪ್ ಮತ್ತು ಸಹೋದರ ದಿನಕರ್ ಮಾತ್ರ ದರ್ಶನ್ನ ಬಿಡಿಸೋಕೆ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿ ತೆರೆ ಮರೆಯ ಹಿಂದೆ ಪ್ರಯತ್ನಗಳು ನಡೀತಾ ಇದೆ. ಆದ್ರೆ ಅಲ್ಲೂ ಕೂಡ ದರ್ಶನ್ಗೆ ಒಂದು ಕಂಡೀಷನ್ ಹಾಕಿದ್ದಾರಂತೆ ಕುಟುಂಬಸ್ಥರು. ದರ್ಶನ್ ಜೀವನದಲ್ಲಿ ಇಷ್ಟೆಲ್ಲಾ ಆಗಿದ್ದು ಪವಿತ್ರಾ ಗೌಡ ಅನ್ನೋ ಸುಂದರಿಗಾಗಿ. ಒಂದು ಪ್ರೀತಿಗಾಗಿ, ಸ್ನೇಹಕ್ಕಾಗಿ ಗೆಳೆತನಕ್ಕಾಗಿ ಅನ್ನೋದು ಪೊಲೀಸ್ ಮೂಲಗಳ ಹೇಳುತ್ತಿವೆ. ಪವಿತ್ರಾ ಗೌಡಗಾಗೆ ದರ್ಶನ್ ಜೈಲು ಸೇರಿದ್ದು, ಈಗ ಅದೇ ಪವಿತ್ರಾ ಗೌಡನನ್ನ ಮತ್ತೆಂದು ಕಣ್ಣೆತ್ತಿಯೂ ನೋಡಬಾರದು ಅಂತ ಕುಟುಂಬಸ್ಥರು ದರ್ಶನ್ಗೆ ತಾಕೀತು ಮಾಡಿದ್ದಾರಂತೆ. ಆದ್ರೆ ಕುಟುಂಬಸ್ಥಕರ ಕಂಡೀಷನ್ಗೆ ದರ್ಶನ್ ಒಪ್ಪಿದ್ರಾ ಅಂದ್ರೆ ಅದು ಕೂಡ ಒಂದು ಇಂಟ್ರೆಸ್ಟಿಂಗ್ ಮ್ಯಾಟರ್ ಆಗಿದೆ.

ಇದನ್ನೂ ವೀಕ್ಷಿಸಿ: ಟ್ರೆಂಡಿಂಗ್ ಆಯ್ತು ದರ್ಶನ್ ಕೈದಿ ನಂಬರ್ 6106..! ಚಡ್ಡಿ ಹಾಕ್ಕೊಂಡು ಪೋಸ್‌ ಕೊಟ್ಟ ಅಭಿಮಾನಿ..!

Related Video