Asianet Suvarna News Asianet Suvarna News

ಟ್ರೆಂಡಿಂಗ್ ಆಯ್ತು ದರ್ಶನ್ ಕೈದಿ ನಂಬರ್ 6106..! ಚಡ್ಡಿ ಹಾಕ್ಕೊಂಡು ಪೋಸ್‌ ಕೊಟ್ಟ ಅಭಿಮಾನಿ..!

ಮಾರುಕಟ್ಟೆಗೆ ಬಂತು ದರ್ಶನ್ ಕೈದಿ ನಂಬರ್ ಮೊಬೈಲ್ ಕವರ್..!
ಪುಟ್ಟ ಕಂದಮ್ಮಗೆ ‘ಕೈದಿ’ ರೀತಿ ಡ್ರೆಸ್ ಹಾಕಿ ಫೋಟೋಶೂಟ್..!
ಫೋಟೋ ಶೂಟ್ ಮಾಡಿದ ಪೋಷಕರಿಗೆ ಎದುರಾಯ್ತು ಸಂಕಷ್ಟ..!

ನಟ ದರ್ಶನ್ (Darshan)ತೂಗುದೀಪ ಅಂಡ್ ಗ್ಯಾಂಗ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ(Chitradurga Renukaswamy murder) ಮಾಡಿದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು(Parappana Agrahara Jail) ಸೇರಿದೆ. ಕೊಲೆ ಆರೋಪಿ ನಟ ದರ್ಶನ್ ತೂಗುದೀಪ ಮೇಲಿನ ಅಭಿಮಾನ ಪ್ರದರ್ಶನ ಎಲ್ಲಿಗೆ ಬಂದಿದೆ ಎಂದರೇ, ಕೈ, ಭುಜ, ಎದೆ, ಕುತ್ತಿಗೆ ಆಯ್ತು, ಈಗ ಪುಷ್ಠ ಭಾಗದಲ್ಲಿಯೂ ಕೈದಿ ನಂಬರ್ 6106 ಟ್ಯಾಟೂ(khaidi no.6106 tattoo) ಹಾಕಲಾಗಿದೆ. ದರ್ಶನ್‌ ಅಭಿಮಾನಿಗಳು ಪುಟ್ಟ ಮಗುವಿಗೆ ಕೈದಿ ನಂಬರ್ ಕೊಟ್ಟು ಫೋಟೋ ಶೂಟ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಲ್ಲದೇ ಮಾರುಕಟ್ಟೆಗೆ ದರ್ಶನ್‌ ಕೈದಿ ನಂಬರ್‌ ಮೊಬೈಲ್ ಕವರ್‌ ಸಹ ಬಂದಿದೆ. ದರ್ಶನ್ ಭೇಟಿಗೆ ಪರಪ್ಪನ ಅಗ್ರಹಾರ ಜೈಲಿನತ್ತ ಅಭಿಮಾನಿಗಳು ಬರ್ತಿದ್ದು, ನಾವು ದರ್ಶನ್ ನೋಡಬೇಕು ಜೈಲಿನೊಳಗೆ ಬಿಡಿ ಎಂದು ಪಟ್ಟು ಹಿಡಿದಿದ್ದಾರೆ.

ಇದನ್ನೂ ವೀಕ್ಷಿಸಿ:  Rain in Karnataka: ರೌದ್ರರೂಪ ತಾಳಿದ ಸಮುದ್ರದ ಅಲೆಗಳು..! ಮಳೆಯ ಅವಾಂತರಕ್ಕೆ ಜನ ಸುಸ್ತೋ ಸುಸ್ತು..!

Video Top Stories