Asianet Suvarna News Asianet Suvarna News

ಏನೇ ಕೇಳು, ಏನೇ ಹೇಳು ಕಣ್ಣೀರೇ ನನಗೀಗ, ಪೊಲೀಸ್ ಕಸ್ಟಡಿಯಲ್ಲಿ ನಟ ದರ್ಶನ್ ಜರ್ಝರಿತ!

ನಟ ದರ್ಶನ್ ಪ್ರಕರಣದಲ್ಲಿ ಯಾವುದೇ ಹಸ್ತಕ್ಷೇಪವಿಲ್ಲ, ಈ ವಿಚಾರದಲ್ಲಿ ಯಾರೂ ಶಿಫಾರಸು ಹಿಡಿದು ಬರುವಂತಿಲ್ಲ ಸಿಎಂ ಸಿದ್ದರಾಮಯ್ಯ ಸ್ಪಷ್ಟ ಸೂಚನೆ, ಬಗೆದಷ್ಟು ಬಯಲಾಗುತ್ತಿದೆ ರೇಣುಕಾಸ್ವಾಮಿ ಕೊಲೆ ಪ್ರಕರಣ, ಪೊಲೀಸ್ ಕಸ್ಟಡಿಯಲ್ಲಿ ದರ್ಶನ್ ಜರ್ಝರಿತ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಆತನ ಗ್ಯಾಂಗ್ ಸದಸ್ಯರನ್ನ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇತ್ತ ಪೊಲೀಸ್ ಕಸ್ಟಡಿಯಲ್ಲಿ ದರ್ಶನ್ ಇದೀಗ ಏನೇ ಕೇಳಿದರೂ ಕಣ್ಣೀರು ಹಾಕುತ್ತಿದ್ದಾರೆ ಎಂದು ಮೂಲಗಳು ಹೇಳುತ್ತಿದೆ. ಯಾವುದೇ ಪ್ರಶ್ನೆಗೆ ಪಶ್ಚಾತ್ತಾಪದ ಮಾತುಗಳನ್ನಾಡುತ್ತಾ ಕಣ್ಮೀರಿಡುತ್ತಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ. ರೇಣುಕುಸ್ವಾಮಿ ಕೊಲೆ ಪ್ರಕರಣ ತನಿಖೆಯಲ್ಲಿ ಸ್ಫೋಟಕ ಮಾಹಿತಿಗಳು ಬಯಲಾಗಿದೆ. ನಟ ದರ್ಶನ್ ಹಾಗೂ ಗ್ಯಾಂಗ್ ನಡೆಸಿದ್ದು ಉದ್ದೇಶಪೂರ್ವಕ ಕೊಲೆಯೇ? ಲಭ್ಯವಿರು ಸಾಕ್ಷ್ಯಗಳು ಇದು ಉದ್ದೇಶಪೂರ್ವಕ ನಡೆಸಿದ ಕೊಲೆ ಎಂದು ಹೇಳುತ್ತಿದೆ. ಪರಿಣಾಮ ನಟ ದರ್ಶನ್ ಅಂಡ್ ಗ್ಯಾಂಗ್ ಕಂಬಿ ಹಿಂದೆ ಸುದೀರ್ಘ ದಿನಗಳ ಕಳೆಯುವುದು ಅನುಮಾನವಿಲ್ಲ ಎನ್ನುತ್ತಿದೆ ನಿಯಮ.