ರಶ್ಮಿಕಾ ಇದ್ದಲ್ಲಿ ನಟಿ ಶ್ರೀಲೀಲಾ ಇರಲ್ವಂತೆ: ತೆಲುಗಿನಲ್ಲಿ ಎರಡು ಜಡೆ ಜಗಳ ?
ಟಾಲಿವುಡ್‌ನಲ್ಲಿ ನಟಿಯರಿಬ್ಬರ ಜಡೆ ಜಗಳ ಆರಂಭವಾಗಿದೆ. ಪುಷ್ಪಾ 2 ಸಿನಿಮಾದಲ್ಲಿ ಡ್ಯಾನ್ಸ್ ಮಾಡಲ್ಲ ಎಂದು ನಟಿ ಶ್ರೀಲೀಲಾ ಹೇಳಿದ್ದಾರಂತೆ.
ನಟಿ ರಶ್ಮಿಕಾ ಮಂದಣ್ಣ ಇರುವ ಕಡೆ ನಾನು ಬರಲ್ಲ ಎಂದು ನಟಿ ಶ್ರೀಲೀಲಾ(Actress Srileela) ಹೇಳಿದ್ದಾರಂತೆ. ಈ ಮೂಲಕ ಟಾಲಿವುಡ್‌ನಲ್ಲಿನ ಕನ್ನಡದ ಇಬ್ಬರು ನಟಿಯರ ಜಗಳ ಬಟಾಬಯಲು ಆಗಿದೆ. ಪುಷ್ಪಾ(Pushpa ) ಮೊದಲ ಸಿನಿಮಾದಲ್ಲಿ ಐಟಂ ಸಾಂಗ್‌ಗೆ ನಟಿ ಸಮಂತಾ ಡ್ಯಾನ್ಸ್ ಮಾಡಿದ್ರು. ಇದೀಗ ಪುಷ್ಪಾ 2 (Pushpa 2) ಸಿನಿಮಾದಲ್ಲಿ ಡ್ಯಾನ್ಸ್ ಮಾಡಲು ಶ್ರೀಲೀಲಾಗೆ ಕೇಳಲಾಗಿದೆಯಂತೆ. ಅದಕ್ಕೆ ಅವರು ಆಗಲ್ಲ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ. ಹಾಗಾಗಿ ರಶ್ಮಿಕಾ(Rashmika) ಇರೋ ಜಾಗದಲ್ಲಿ ಶ್ರೀಲೀಲಾ ಇರಲ್ಲ, ಇವರು ಇರೋ ಜಾಗದಲ್ಲಿ ಅವರು ಇರಲ್ಲ ಎಂದು ಟಾಲುವುಡ್‌ನಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದಾರಂತೆ.
ಇದನ್ನೂ ವೀಕ್ಷಿಸಿ: ಫುಲ್ ಮಾಸ್ ಲುಕ್‌ನಲ್ಲಿ ಬಂದ ಮೆಗಾಸ್ಟಾರ್ : ಭೋಲಾ ಶಂಕರ್ ಟ್ರೈಲರ್‌ಗೆ ಫ್ಯಾನ್ಸ್ ಫಿದಾ!