Asianet Suvarna News Asianet Suvarna News
breaking news image

ಫುಲ್ ಮಾಸ್ ಲುಕ್‌ನಲ್ಲಿ ಬಂದ ಮೆಗಾಸ್ಟಾರ್ : ಭೋಲಾ ಶಂಕರ್ ಟ್ರೈಲರ್‌ಗೆ ಫ್ಯಾನ್ಸ್ ಫಿದಾ!

ಫುಲ್ ಮಾಸ್ ಲುಕ್‌ನಲ್ಲಿ ಮೆಗಾಸ್ಟಾರ್ ಎಂಟ್ರಿ
ಚಿರಂಜೀವಿ ಭೋಲಾ ಶಂಕರ್ ಟ್ರೈಲರ್ ರಿಲೀಸ್‌
ತಮಿಳಿನ ವೇದಾಳಂ ರಿಮೇಕ್ ಭೋಲಾಶಂಕರ್

ಗಾಡ್ ಫಾದರ್ ನಂತರ ಮತ್ತೆ ಫುಲ್ ಮಾಸ್ ಲುಕ್‌ನಲ್ಲಿ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi)ಎಂಟ್ರಿ ಕೊಟ್ಟಿದ್ದಾರೆ. ಕಾಮಿಡಿ, ಆ್ಯಕ್ಷನ್, ಸೆಂಟಿಮೆಂಟ್ ಎಲ್ಲದರ ಮಿಕ್ಸ್ ಮಸಾಲಾದಂತಿದೆ  ಭೋಲಾ ಶಂಕರ್ ಟ್ರೈಲರ್(Bhola Shankar Trailer). ತಮನ್ನಾ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಕೀರ್ತಿ ಸುರೇಶ್ (Keerthi Suresh) ನಾಯಕನ ತಂಗಿಯ ಪಾತ್ರ  ನಿರ್ವಹಿಸಿದ್ದಾರೆ. ಚಿತ್ರ ಆಗಸ್ಟ್ 11ರಂದು ಅದ್ದೂರಿಯಾಗಿ ರಿಲೀಸ್ ಆಗಲಿದೆ. ಸದ್ಯ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ ಟ್ರೇಲರ್. ಈ ಟ್ರೇಲರ್ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಟ್ರೈಲರ್ ನ ಹೈಲೈಟ್‌ಗಳಲ್ಲಿ ಒಂದು ವಿಲನ್ ಪಾತ್ರದಲ್ಲಿ ಕನ್ನಡದ ರವಿಶಂಕರ್ ಅವರು ಮಿಂಚಿರುವುದು. ಅವರು ಹೇಳುವ ಖಡಕ್ ಡೈಲಾಗ್ ಎಲ್ಲರ ಗಮನ ಸೆಳೆದಿದೆ. ಚಿರಂಜೀವಿ ಅವರ ಮಾಸ್ ಡೈಲಾಗ್ ಡೆಲಿವರಿ ಟ್ರೇಲರ್‌ನ ವಿಶೇಷ ಆಕರ್ಷಣೆಯಾಗಿದೆ. ಟ್ರೇಲರ್‌ನ ಕೊನೆಯಲ್ಲಿ ಪವನ್ ಕಲ್ಯಾಣ್ ಅವರ ಮ್ಯಾನರಿಸಂ ಅನ್ನು ಚಿರು ಅನುಕರಿಸಿದ್ದಾರೆ. ಇದು ಕೂಡ ಗಮನ ಸೆಳೆಯುತ್ತಿದೆ. ‘ನನ್ನ  ಹಿಂದೆ ಮಾಫಿಯಾ ಇದೆ’ ಎಂದು ರವಿಶಂಕರ್ ಹೇಳುತ್ತಾರೆ. ‘ಮಾಫಿಯಾ ನಿನ್ನ ಹಿಂದೆ ಇದ್ದರೆ ಜಗತ್ತೇ ನನ್ನ ಹಿಂದೆ ಇದೆ’ ಎಂದು ರವಿಶಂಕರ್ಗೆ ತಿರುಗೇಟು ನೀಡುವ ಚಿರು ಡೈಲಾಗ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಸಿನಿಮಾದಲ್ಲಿ ಚಿರಂಜೀವಿ ಅವರು ಮಾಸ್ ಆ್ಯಂಡ್ ಕ್ಲಾಸ್ ಆಗಿ ಕಾಣಿಸಿಕೊಂಡಿದ್ದಾರೆ. 

ಇದನ್ನೂ ವೀಕ್ಷಿಸಿ:  ಸುದೀಪ್ ವಿಕ್ರಾಂತ್ ರೋಣ ರಿಲೀಸ್ ಆಗಿ 1 ವರ್ಷ: ಚಿತ್ರದ ಕ್ಲೈಮ್ಯಾಕ್ಸ್ ಸಾಂಗ್ ರಿಲೀಸ್ ಮಾಡಿದ ಚಿತ್ರತಂಡ

Video Top Stories